ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವಿರ್ ಆರೋಪ ಪ್ರತ್ಯಾರೋಪ ತೀವ್ರಗೊಂಡ ಬೆನ್ನಲ್ಲೆ ವಿಜಯಲಕ್ಷಿ ಮತ್ತು ಸಚಿವ ಜಮೀರ್ ಅಹಮದ್ ಪುತ್ರ ಜೈದ್ ಖಾನ್ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಭೇಟಿಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಒಟ್ಟು 30 ನಿಮಿಷಗಳ ಕಾಲ ಭೇಟಿ ನಡೆದಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಜತೆಗೆ ಜೈದ್ ಖಾನ್ ಸಹ ಇದ್ದರು. ಈ ವೇಳೆ ಧನ್ವಿರ್ ತಮ್ಮ ಮೇಲೆ ಮಾಡುತ್ತಿರುವ ಆರೋಪ ಮತ್ತು ಹಗೆತನ ಬಗ್ಗೆ ದರ್ಶನ್‌ಗೆ ವಿವರಿಸಿದ್ದಾರೆ ಎನ್ನಲಾಗಿದೆ.
10 ಕೋಟಿ ಹಣ ಯಾವ ಲೆಕ್ಕ. ದರ್ಶನ್‌ಗೆ ಜಾಮೀನು ನೀಡಲು 27 ಕೋಟಿ ಮೌಲ್ಯದ ಮನೆಯನ್ನೇ ಶೂರಿಟಿ ಕೊಟ್ಟಿದ್ದೆ ಎಂದು ಹಗುರವಾಗಿ ಮಾತನಾಡಿದ್ದಾರೆ. ಈ ಎಲ್ಲ ಅಂಶಗಳು ಜಾಲತಾಣಧಲ್ಲಿ ವೈರಲ್ ಆಗಿದ್ದು, ಆತನ ಅತಿರೇಖ ಹೆಚ್ಚಾಗಿದೆ ಎಂದು ಪತಿಯ ಬಳಿ ವಿವರಿಸಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಪತಿಯ ಮಾತುಗಳನ್ನು ಆಲಿಸಿದ ಬಳಿಕ ಕೋಪಗೊಂಡ ದರ್ಶನ್, ಜೈಲಿನಿಂದಲೇ ದೂರು ದಾಖಲಿಸುವ ಚಿಂತನೆ ನಡೆಸಿದ್ದಾರೆ. ‘ನಾನು ಜೈಲಿನಲ್ಲಿದ್ದೇನೆ ಎಂಬ ಕಾರಣಕ್ಕೆ ನನ್ನ ಕುಟುಂಬದ ಬಗ್ಗೆ ಬಾಯಿಗೆ ಬಂದಂಗೆ ಮಾತನಾಡುವುದು ಸರಿಯಲ್ಲ. ಧೈರ್ಯವಿದ್ದರೆ ನಾನು ಹೊರಗೆ ಬಂದಮೇಲೆ ಮಾತಾಡಲಿ’ ಎಂದಿರುವ ಬಗ್ಗೆ ನಟ ಜೈದ್ ಖಾನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.