Darshan 
ರಾಜ್ಯ

ದರ್ಶನ್​ ಬೇಡಿಕೆಗೆ ಮಣಿಯದ ಸುಪ್ರೀಂಕೋರ್ಟ್​: ನೋ ಜಾಮೀನು, ಇನ್ನೂ ಒಂದು ವರ್ಷ ದಚ್ಚುಗೆ ಜೈಲುವಾಸ ಫಿಕ್ಸ್​!.. Darshan

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂ ಕೋರ್ಟ್​ಗೆ ಬೇಲ್​ ಮೊರೆ ಹೋಗಿದ್ದ ದರ್ಶನ್​​ಗೆ ಸಿಕ್ತು ಶಾಕಿಂಗ್​ ನ್ಯೂಸ್
  • ಒಂದು ವರ್ಷ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ಗಡುವು
  • ಒಂದು ವರ್ಷ ದರ್ಶನ್​ಗೆ ಜೈಲೂಟವೇ ಗತಿ
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪ್ರಮುಖ ಆರೋಪಿಯಾಗಿರುವ ದರ್ಶನ್​​ಗೆ ಸುಪ್ರೀಂ ಕೋರ್ಟ್ (Supreme Court)ಶಾಕಿಂಗ್​ ನ್ಯೂಸ್​ವೊಂದನ್ನು ಕೊಟ್ಟಿದೆ. ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದು , ವಿಚಾರಣೆಗೆ ಒಂದು ವರ್ಷ ಕಾಲವಕಾಶ ಕೊಟ್ಟಿದೆ.

ವಿಚಾರಣೆಯಲ್ಲಿ ಪ್ರಗತಿ ಕಾಣದಿದ್ದರೆ ಬೇಲ್ ಕೊಡ್ತೇವೆ

ನ್ಯಾ. ಜೆಬಿ ಪರ್ದೀವಾಲಾ ನೇತೃತ್ವದ ಪೀಠವು ದರ್ಶನ್​ ಜಾಮೀನು ಅರ್ಜಿ ವಿಚಾರಣೆ ನಡೆಸಿ, ಒಂದು ವರ್ಷ ಸಮಯಾವಕಾಶ ನೀಡ್ತೀವಿ. ಅಲ್ಲಿವರೆಗೆ ವಿಚಾರಣೆ ನಡೆಸದಿದ್ದರೆ, ಜಾಮೀನು ಅರ್ಜಿ ಸಲ್ಲಿಸಬಹುದು, ಬೇಲ್​ ನೀಡುತ್ತೇವೆ ಎಂದು ಆದೇಶ ಹೊರಡಿಸಿದೆ.

ರಾಜಾತಿಥ್ಯ ನೀಡಬೇಡಿ ಎಂದಿದ್ದಷ್ಟೇ

ಮುಂದಿನ ಒಂದು ವರ್ಷದಲ್ಲಿ ಬಾಕಿ ಇರುವ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ನಡೆಸಬೇಕು. ದರ್ಶನ್​ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಬೇಡಿ ಎಂದು ಹಿಂದೆ ಸೂಚನೆ ಕೊಟ್ಟಿದ್ದೆವು. ಇದರ ಅರ್ಥ ಯಾವುದೇ ಸೌಲಭ್ಯ ಕೊಡಬೇಡಿ ಎಂದು ಅಲ್ಲ ಎಂದು ನ್ಯಾ. ಪರ್ದೀವಾಲಾ ನೇತೃತ್ವದ ಪೀಠವು ಸ್ಪಷ್ಟಪಡಿಸಿದೆ.
ಈ ಕೇಸ್​ನ ವಿಚಾರಣೆ ಆಮೆ ಗತಿಯಲ್ಲಿ ನಡೆಯುತ್ತಿದೆ, ಇದನ್ನು ದಿನನಿತ್ಯದ ಆಧಾರದ ಮೇಲೆ ವಿಚಾರಣೆ ನಡೆಸಲಬೇಕು. ಜೈಲು ನಿಯಮದ ಪ್ರಕಾರ ವಿಚಾರಣಾಧೀನ ಕೈದಿಯಂತೆ ಸೌಕರ್ಯ ನೀಡಬೇಕು. ಆರೋಪಿಯನ್ನು ಒಂಟಿಯಾಗಿ ಇರಿಸುವ ಅಗತ್ಯವಿಲ್ಲ ಎಂದಿದ್ದಾರೆ.

ದರ್ಶನ್​ ಪರ ವಕೀಲರು ವಾದ ಮಾಡಿದ್ದು ಹೀಗೆ

ನವೆಂಬರ್ 2025ರಲ್ಲಿ ಸಲ್ಲಿಸಿದ ಚಾರ್ಜ್​ ಶೀಟ್ ಪ್ರಕಾರ​, 272 ಸಾಕ್ಷಿಗಳಿದ್ದು ಇಲ್ಲಿಯವರೆಗೂ 7 ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ವಿಚಾರಣೆಯಾಗಿದೆ. 150 ಸಾಕ್ಷಿಗಳ ವಿಚಾರಣೆ ಬಾಕಿಯಿದೆ. ಪ್ರಮುಖ ಸಾಕ್ಷಿಗಳ ವಿಚಾರಣೆಯು ಮಾಡುತ್ತಿಲ್ಲ ಎಂದು ಮುಕುಲ್ ರೋಹಟಗಿ ವಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದಾರ್ಥ್​ ಲೂತ್ರ, ಸಾಕ್ಷ್ಯಗಳಿಗೆ ಏನು ಮಾಡಿದ್ದಾರೆಂದು ಬಾಯ್ಬಿಟ್ಟರೆ, ಜಾಮೀನು ರದ್ದಾಗುತ್ತದೆ ಎಂದರು. ಮುಂದಿನ ವರ್ಷದೊಳಗೆ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸೋದಾಗಿ ನ್ಯಾಯಾಧೀಶರಿಗೆ ಹೇಳಿದರು.

ಇಬ್ಬರ ವಾದ ಆಲಿಸಿದ ಕೋರ್ಟ್​​​ ಒಂದು ವರ್ಷದೊಳಗೆ 60 ಪ್ರಮುಖ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಳಿಸಬೇಕು. ಆ ಬಳಿಕ ವಿಚಾರಣಾ ನ್ಯಾಯಾಲಯದಲ್ಲೇ ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಬಹುದು. ಜೈಲು ನಿಯಮ ಪ್ರಕಾರ ಉಳಿದೆಲ್ಲಾ ಕೈದಿಗಳಿಗೆ ಸಿಗುವಂತೆ ಸವಲತ್ತು ಕೊಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾ. ಪರ್ದೀವಾಲಾ ನಿರ್ದೇಶಿಸಿದರು.

ಏನಿದು ಘಟನೆ?

ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್​ ಗೆಳತಿ ಪವಿತ್ರಾ ಗೌಡ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ಅಸಭ್ಯವಾಗಿ ಸಂದೇಶ ಕಳುಹಿಸುತ್ತಿದ್ದ ಎನ್ನುವುದು ತಿಳಿದುಬಂದಿತ್ತು. ಹೀಗಾಗಿ ಆತನನ್ನು ಜೂನ್​​8ರ ರಾತ್ರಿ ಬೆಂಗಳೂರಿನಲ್ಲಿನ ಪಟ್ಟಣಗೆರೆ ಶೆಡ್​ಗೆ ರಘು ಎಂಬಾತ ಕರೆತಂದಿದ್ದ. ಆತನಿಗೆ ಕರೆಂಟ್​ ಶಾಕ್​ ಕೊಟ್ಟು ಮರ್ಮಾಂಗಕ್ಕೆ ಹೊಡೆದು ಹಿಂಸಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿತ್ತು. 2024 ಜೂನ್​ 9ರಂದು ನಾಪತ್ತೆಯಾಗಿರುವ ಬಗ್ಗೆ ರೇಣುಕಾಸ್ವಾಮಿ ಕುಟುಂಬಸ್ಥರು ದೂರು ನೀಡಿದ್ದರು. ಆದರೆ, ಸುಮನ ಹಳ್ಳಿ ಸಮೀಪದ ಬ್ರಿಡ್ಜ್​ ಬಳಿ ಅವರ ದೇಹ ಪತ್ತೆಯಾಗಿತ್ತು. ಆ ಬೆನ್ನಲ್ಲೇ ಇಬ್ಬರು ತಾವೇ ಕೊಲೆ ಮಾಡಿದ್ದು ಎಂದು ಪೊಲೀಸರಿಗೆ ಶರಣಾಗಿದ್ದರು. ಅವರಿಬ್ಬರ ಕಾಲ್​ ಡೀಟೇಲ್ಸ್​ ನೋಡಿದಾಗ ಪ್ರಕರಣಕ್ಕೆ ತಿರುವು ಸಿಕ್ಕಿದೆ.
ಮೈಸೂರಿನಲ್ಲಿದ್ದ ದರ್ಶನ್​ ಅವರನ್ನು ಕರೆತಂದು ವಿಚಾರಣೆ ನಡೆಸಲಾಗಿತ್ತು. ಸದ್ಯ ಪವಿತ್ರಾ ಗೌಡ A1, ದರ್ಶನ್​ A2
ಆಗಿದ್ದಾರೆ. ಅವರ ಜೊತೆಗೆ 17 ಮಂದಿಯನ್ನು ಬಂಧಿಸಲಾಗಿತ್ತು. ಸದ್ಯ ಪ್ರಕರಣದ 15 ಮತ್ತು 17 ಹಾಗೂ 16ನೇ ಆರೋಪಿಗಳಿಗೆ ಮಾತ್ರ ಜಾಮೀನು ಸಿಕ್ಕಿದೆ, (ಏಜೆನ್ಸೀಸ್).