Activists work hard to unite the party
ಗುಡಿಬಂಡೆ: ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರವನ್ನು ಕೊಟ್ಟ ಮತದಾರರಿಗೆ ತಾಲೂಕು ಬಿಜೆಪಿ ಕಾರ್ಯಕರ್ತರು ಧನ್ಯವಾದಗಳನ್ನು ತಿಳಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ತಾಲೂಕು ಕಚೇರಿ ಮುಂಭಾಗದ ಮುಖ್ಯರಸ್ತೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ.ಎ.ಅಮರೇಶ್ ಮಾತನಾಡಿ, ೇತ್ರದಲ್ಲಿ ಶಾಸಕರು ಸಮರ್ಕವಾಗಿ ಅಭಿವೃದ್ಧಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಎಲ್ಲ ಸೂಚನೆಗಳು ಕಾಣುತ್ತಿವೆ ಎಂದು ಹೇಳಿದರು.
ತಾಲೂಕು ಅಧ್ಯಕ್ಷ ಗಂಗಿರೆಡ್ಡಿ ಮಾತನಾಡಿ, ಈ ಪಂಚರಾಜ್ಯಗಳ ಲಿತಾಂಶದಿಂದ ನಮ್ಮ ರಾಜ್ಯದಲ್ಲಿ ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಾತಾರಣ ಕಾಣುತ್ತಿದೆ.ಇಂದಿನಿಂದಲೇ ಕಾರ್ಯಕರ್ತರು ಪಕ್ಷ ಸಂಟಿಸಲು ಶ್ರಮವಹಿಸಬೇಕು ಎಂದರು.
ಬಿಜೆಪಿ ಮುಖಂಡರಾದ ಮದನ ಮೋಹನ ರೆಡ್ಡಿ, ಮಹಿಳಾ ಮೋರ್ಚಾ ಅಧ್ಯೆ ಜಿ.ವಿ.ಲ್ಮ ವೇಣುಗೋಪಾಲ್, ಮಂಜುಳಾ ಸಿಂಗ್, ಪ್ರಧಾನ ಕಾರ್ಯದರ್ಶಿ ಅರುಣ, ಜ್ಯೋತಿ, ಭಾರತಿ, ಯುವ ಮೋರ್ಚಾ ಅಧ್ಯಕ್ಷ ನರಸಿಂಹಮೂರ್ತಿ, ಗಗನ, ಬೀಚಗಾನಹಳ್ಳಿ ಸುರೇಶ್, ಮುರಳಿ, ಅರುಣ್ ರೆಡ್ಡಿ, ಕಾಟನಹಳ್ಳಿ ನಾಗೇಶ್, ಬಿಜೆಪಿ ಮುಖಂಡ ಪ್ರೆಸ್ ಶಿವಪ್ಪ, ಕಾರ್ಯದರ್ಶಿ ಈಶ್ವರ್ ರೆಡ್ಡಿ, ಪ್ರಹ್ಲಾದ ರಾವ್, ತಿರುಮಣಿ ಮಹಾದೇವ, ನರಸಿಂಹಮೂರ್ತಿ ಇದ್ದರು.