ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರನ್ನು ಕಡೆಗಣಿಸಿರುವುದನ್ನು ಖಂಡಿಸಿ ಕೆಂಭಾವಿ ವಲಯದಲ್ಲಿ ಅಭಿಮಾನಿ ಮತ್ತು ಕಾರ್ಯಕರ್ತರು ಮೊಬೈಲ್ ಪೋಸ್ಟರ್ ಮೂಲಕ ಅಸಮಾಧಾನ ಹೊರಹಾಕುತ್ತಿರುವುದು. 
ರಾಜ್ಯ

ಜಾಲತಾಣದಲ್ಲಿ ರೊಚ್ಚಿಗೆದ್ದ ಕರ‍್ಯಕರ್ತರು

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ವಿರುದ್ಧ ಸಿಡಿದೆದ್ದ ದರ್ಶನಾಪುರ ಅಭಿಮಾನಿಗಳು
  • ಪಕ್ಷ ನಿಷ್ಠನಿಗೆ ಸಿಗದ ಮಂತ್ರಿ ಸ್ಥಾನ
ಕೆಂಭಾವಿ :

ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರನ್ನು ಕಡೆಗಣಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ರಮವನ್ನು ಕ್ಷೇತ್ರದ ಜನತೆ ಸಾಮಾಜಿಕ ಜಾಲತಾಣದ ಮೂಲಕ ಖಂಡಿಸಿ ಸರ್ಕಾರದ ವಿರುದ್ಧ ಪೋಸ್ಟರ್ ವಾರ್ ಮೂಲಕ ವಿನೂತನ ರೀತಿಯ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಾAಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿ ಹಿರಿಯ ಸಚಿವರಾಗಿ, ಅನೇಕ ಬಾರಿ ಶಾಸಕರಾಗಿರುವ ದರ್ಶನಾಪುರ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಪರೋಕ್ಷವಾಗಿ ಸರ್ಕಾರದ ವಿರುದ್ಧ ಸ್ಟೇಟಸ್ ಇಡುವ ಮೂಲಕ -ೆÃಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.
ಸಚಿವ ಸಂಪುಟದಲ್ಲಿ ಆಸೆ ಇಟ್ಟಿದ್ದ ಅನೇಕ ಶಾಸಕರಿಗೆ ಸ್ಥಾನಮಾನ ಸಿಗದೆ ಬೆಂಬಲಿಗರಿAದ ರಾಜ್ಯದ ಅನೇಕ ಕಡೆ ಪ್ರತಿಭಟನೆ, ಸರ್ಕಾರದ ವಿರುದ್ಧ ಽಕ್ಕಾರದ ಕೂಗು ಕೇಳಿಬರುತ್ತಿದೆ. ಆದರೆ ದರ್ಶನಾಪುರ ಬೆಂಬಲಿಗರು ಅಂಥ ಗೋಜಿಗೆ ಹೋಗದೆ ಕೇವಲ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿರುವುದು ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ.
ಪೋಸ್ಟರ್‌ನಲ್ಲಿ ಏನಿದೆ?: ಪಟ್ಟಣ ಸೇರಿ ವಲಯದ ಹಲವು ಕಾಂಗ್ರೆಸಿಗರು ಮತ್ತು ಅಭಿಮಾನಿ ಬಳಗದ ಮೊಬೈಲ್‌ಗಳಲ್ಲಿ ಯಾದಗಿರಿ ಜಿಲ್ಲೆ ಸ್ವಾಭಿಮಾನಕ್ಕೆ ಧಕ್ಕೆ, ಕಕ ಭಾಗದ ಪ್ರಭಾವಿ ನಾಯಕ ಎಂದು ಜನಮನ್ನಣೆ ಗಳಿಸಿದ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡದ್ದರಿಂದ ನಮ್ಮಂಥ ಸಾವಿರಾರು ಕಾರ್ಯಕರ್ತರಿಗೆ ನೋವಾಗಿದೆ. ಕಕ ಧ್ವನಿಗೆ ಗೌರವ ಸಿಗಬೇಕು ಎಂಬ ಇತ್ಯಾದಿ ಬರಹಗಳನ್ನೊಳಗೊಂಡ ಅತ್ಯಂತ ಭಾವುಕ ಪೋಸ್ಟರ್‌ಗಳು ಹರಿದಾಡುತ್ತಿವೆ.
ಸಿಡಿದೆದ್ದಿರುವ ಕ್ಷೇತ್ರದ ಜನರ ಮನವೊಲಿಸಲು ಮತ್ತು ಯಾವುದೇ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳದಂತೆ ಮನವಿ ಮಾಡಿರುವ ಶಾಸಕ ದರ್ಶನಾಪುರ ಅವರು ಪಕ್ಷ ವಹಿಸಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವುದಾಗಿ ಸ್ಪಷ್ಟ ಸಂದೇಶ ರವಾನಿಸಿ ಮತ್ತೊಮ್ಮೆ ಪಕ್ಷನಿಷ್ಠೆ ಮೆರೆದಿದ್ದಾರೆ. ಆದರೆ ತಮ್ಮ ನಾಯಕರಿಗೆ ಮಂತ್ರಿಗಿರಿ ಸಿಗದ್ದರಿಂದ ಅಭಿಮಾನಿ ಬಳಗ ಮುಂಬರುವ ಚುನಾವಣೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
"

ರಾಜಕೀಯವನ್ನೇ ಉಸಿರಾಗಿಸಿಕೊಂಡಿರುವ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಈ ಬಾರಿಯೂ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ಕಾರ್ಯಕರ್ತರು ಮತ್ತು ಅಭಿಮಾನಿಗಳ ಆಸೆ ಹುಸಿಯಾಗಿದೆ. ಅವರಿಗೆ ಇನ್ನೊಮ್ಮೆ ಮಂತ್ರಿ ಸ್ಥಾನ ನೀಡಿದ್ದರೆ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗುತ್ತಿತ್ತು.| ಬಸನಗೌಡ ಹೊಸಮನಿ ಯಾಳಗಿಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ