ಬೀದರ್ ದಕ್ಷಿಣ ಕ್ಷೇತ್ರದ ಮಂಗಲಗಿ ಗ್ರಾಮದಲ್ಲಿ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಜನ್ಮದಿನವನ್ನು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕೇಕ್ ಕತ್ತರಿ ಆಚರಿಸಿದರು. ಚಂದ್ರಶೇಖರ ಚನ್ನಶೆಟ್ಟಿ, ಸಂಗ್ರಾಮಪ್ಪ ಪಾಟೀಲ, ಭೀಮರಡ್ಡಿ ವರವಟ್ಟಿ, ಕಮಲರಡ್ಡಿ, ರಾಮಶೆಟ್ಟಿ ಪಾಟೀಲ,ಬಾಬುರಾವ ಗಂಗಾ, ಶಿವಪುತ್ರ ಸಾದಾ, ರಾಜಕುಮಾರ ತೆಳಮನಿ, ಶಿವಕುಮಾರ ಜುನ್ನಾ ಇತರರಿದ್ದರು.
ಚಿಟಗುಪ್ಪ: ಮಂಗಲಗಿ ಗ್ರಾಮದ ಭವಾನಿ ಮಂದಿರದಲ್ಲಿ ಶುಕ್ರವಾರ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಜನ್ಮದಿನವನ್ನು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಭೀಮರಾವ ಪಾಟೀಲ್ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು. ಅನೇಕ ಮುಖಂಡರು ಮಾತನಾಡಿ, ಭೀಮರಾವ ಪಾಟೀಲ್ ಜನಪರ ಕೆಲಸ ಮಾಡುವ ಮೂಲಕ ಜನಮನ ಗೆದ್ದಿದ್ದು, ಸಮಾಜಮುಖಿ ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಬೀದರ್ ದಕ್ಷಿಣ ಕ್ಷೇತ್ರ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಚಂದ್ರಶೇಖರ ಚನ್ನಶೆಟ್ಟಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಸಂಗ್ರಾಮಪ್ಪ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮರಡ್ಡಿ ವರವಟ್ಟಿ, ಟಿಎಸಿಎಂಎಸ್ ನಿರ್ದೇಶಕ ಕಮಲರಡ್ಡಿ, ರಾಮಶೆಟ್ಟಿ ಪಾಟೀಲ, ಮುಖಂಡರಾದ ಬಾಬುರಾವ ಗಂಗಾ, ಶಿವಪುತ್ರ ಸಾದಾ, ರಾಜಕುಮಾರ ತೆಳಮನಿ, ವಿಜಯಕುಮಾರ ವಿಜಯಪುರೆ, ಸಂತೋಷ ಕಮಲಪುರ, ಸಂತೋಷರಡ್ಡಿ, ಶಿವಕುಮಾರ ಜುನ್ನಾ, ಹಣಮಂತರಾವ ಕುಲಕರ್ಣಿ, ದಯಾನಂದ ಹಳ್ಳಿಖೇಡ, ನಾಗೇಶ ಸೋನಿ, ರಾಚಯ್ಯ ಸ್ವಾಮಿ ಇತರರಿದ್ದರು.