Action will be taken for performing bike wheelies.
ಚಿಕ್ಕಬಳ್ಳಾಪುರ : ಹೆದ್ದಾರಿಗಳಲ್ಲಿ ಕರ್ಕಶ ಶಬ್ದದೊಂದಿಗೆ ಬೈಕ್ ವೀಲಿಂಗ್ ಮಾಡುತ್ತಾ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಪೊಲೀಸರು ಚುರುಕು ಮುಟ್ಟಿಸಲು ಸಜ್ಜಾಗಿದ್ದಾರೆ.
ಹೌದು..! ನಗರ, ಪಟ್ಟಣ ಪ್ರದೇಶಗಳಲ್ಲಿ ಜನಸಂದಣಿಯ ವೃತ್ತಗಳು, ಇಳಿಜಾರಿನ ತಿರುವಿನ ಹೆದ್ದಾರಿಗಳು, ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಸುವವರಿಗೆ ದಂಡ ವಿಧಿಸುವುದು, ವಾಹನ ವಶಪಡಿಸಿಕೊಳ್ಳುವುದು, ಪ್ರಕರಣ ದಾಖಲು ಮಾಡುವುದು, ಸ್ಥಳದಲ್ಲಿಯೇ ವಾಹನಗಳ ಸೈಲೆನ್ಸ್ರ್ಗಳನ್ನು ಕಿತ್ತು ಹಾಕಿ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಮೊದಲ ಹಂತವಾಗಿ ಶಾಲಾ&ಕಾಲೇಜುಗಳು, ಜನಸಂದಣಿಯ ಸ್ಥಳಗಳಲ್ಲಿ ಪೊಲೀಸ್ ಇಲಾಖೆಯಿಂದ ಜಾಗೃತಿ ಬಿರುಸಿನಿಂದ ನಡೆಯುತ್ತಿವೆ. ದಿನವೊಂದಕ್ಕೆ ಚಿತ್ರ ಹಾಗೂ ವಿಡಿಯೋ ಸಂದೇಶಗಳನ್ನು ಬಿಡುಗಡೆಗೊಳಿಸಲಾಗುತ್ತಿದೆ. ಮತ್ತೊಂದೆಡೆ ಸಂಚಾರಿ ನಿಯಮಗಳ ಉಲ್ಲಂನೆಗೆ ಅವಕಾಶ ನೀಡದಿರಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ಇದಕ್ಕೆ ಪೊಲೀಸರು ತಪಾಸಣೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.
ಸಾಹಸ ಪ್ರದರ್ಶನ: ಹಲವು ಎಚ್ಚರಿಕೆಗಳ ನಡುವೆಯೂ ಕೆಲ ಕಿಡಿಗೇಡಿಗಳು ಜನಸಂದಣಿಯ ರಸ್ತೆಗಳಲ್ಲಿ ಅತಿ ವೇಗವಾಗಿ ವಾಹನಗಳನ್ನು ಓಡಿಸುವ ಮೂಲಕ ಸಾಹಸಮಯ ಪ್ರದರ್ಶಿಸುತ್ತಿದ್ದಾರೆ. ಸಿನಿಮಾಗಳು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವದಿಂದ ಪರಸ್ಪರ ಪೈಪೋಟಿಯಲ್ಲಿ ಬೈಕ್ ವೀಲಿಂಗ್, ವೇಗದ ವಾಹನ ಚಾಲನೆ, ಕರ್ಕಶ ಧ್ವನಿ ಹೊರ ಹೊಮ್ಮಿಸುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪ್ರತಿನಿತ್ಯ ರಾತ್ರಿ 9ರ ಬಳಿಕ ಎಂ.ಜಿ.ರಸ್ತೆ ಹಾಗೂ ಬಿ.ಬಿ.ರಸ್ತೆಯಲ್ಲಿ ವಾಹನ ವೇಗದ ಚಾಲನೆಯ ಕರ್ಕಶ ಧ್ವನಿ ಕೇಳಿ ಬರುತ್ತಿದ್ದು ಬೆಚ್ಚಿ ಬೀಳುವ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ನಂದಿ ಬೆಟ್ಟ, ವೀರದಿಮ್ಮಮ್ಮನ ಕಣಿವೆ, ಕಣಿವೆ ನಾರಾಯಣಪುರ, ಸುಲ್ತಾನ್ ಪೇಟೆ, ಆವಲಗುರ್ಕಿ, ವಾಪಸಂದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ ಸೇರಿ ವಿವಿಧೆಡೆ ಬೈಕ್ ವೀಲಿಂಗ್ ಸಾಹಸ ಪ್ರದರ್ಶನ ಕಂಡು ಬರುತ್ತಿದೆ. ಪ್ರತಿ ಭಾನುವಾರ ಹೆದ್ದಾರಿಗಳಲ್ಲಿ ಬೆಂಗಳೂರು ಕಡೆಯಿಂದ ಬಾಗೇಪಲ್ಲಿ ಮಾರ್ಗದಲ್ಲಿ ತಂಡೋಪ ತಂಡವಾಗಿ ಸವಾರರು ದ್ವಿಚಕ್ರ ವಾಹನಗಳಲ್ಲಿ ಅತಿ ವೇಗವಾಗಿ ಸಂಚರಿಸುವ ಮೂಲಕ ನಿಯಮಗಳನ್ನು ಉಲ್ಲಂಸುತ್ತಿದ್ದಾರೆ.
ಕಿಡಿಗೇಡಿಗಳು ಸಾಹಸ ಪ್ರದರ್ಶನದ ದುಷತ್ಯಕ್ಕೆ ಅಪಘಾತ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಇತ್ತೀಚೆಗೆ ನಂದಿ ಬೆಟ್ಟದ ಮುಖ್ಯರಸ್ತೆಯಲ್ಲಿ ಪ್ರಿಯತಮೆಯನ್ನು ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳ್ಳಿರಿಸಿಕೊಂಡು ಚಾಲನೆ ಮಾಡಿದ್ದ ವಿಡಿಯೋ ಸದ್ದು ಮಾಡಿತ್ತು. ಇನ್ನು ಸುಲ್ತಾನ್ ಪೇಟೆ, ವೀರದಿಮ್ಮಮ್ಮನ ಕಣಿವೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಯಂತ್ರಣ ತಪ್ಪಿ ಸವಾರರು ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಪೊಲೀಸರ ಕ್ರಮದ ನಡುವೆಯೂ ಕಿಡಿಗೇಡಿಗಳು ದುಷ್ಕೃತ್ಯದ ಸಾಹಸ ಪ್ರದರ್ಶನ ನಿಲ್ಲಿಸುತ್ತಿಲ್ಲ. ಸಿನಿಮಾಗಳಲ್ಲಿ ತೋರುವ ಆರ್ಕಷಕ ಸ್ಟೈಲ್ ಮಾದರಿಯಲ್ಲಿ ದ್ವಿಚಕ್ರ ವಾಹನಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ.
ಮೆಕಾನಿಕ್ ಮೂಲಕ ವಾಹನದ ಸೈಲೆನ್ಸರ್ ತೆಗೆಸುತ್ತಿರುವುದು.