ಕೆಂಭಾವಿ ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ಡಿಚ್ಒ ಡಾ.ಮಹೇಶ್ ಬಿರಾದಾರ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಶುಚಿತ್ವ ಪರಿಶೀಲಿಸಿದರು. ಸಮೀರ್ ಅಹ್ಮದ್ ಗುಂಡಗಿ, ದೇವಪ್ಪ ಇದ್ದರು.
- ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಎಚ್ಚರಿಕೆ
- ಕೆಂಭಾವಿಯ ವಿವಿಧೆಡೆ ಖಾಸಗಿ ಆಸ್ಪತ್ರೆಗಳಿಗೆ ಭೇಟಿ
ಕೆಂಭಾವಿ: ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ಮೇಲೆ ಡಿಚ್ಒ ಡಾ.ಮಹೇಶ ಬಿರಾದಾರ ಶುಕ್ರವಾರ ದಿಢೀರ್ ದಾಳಿ ನಡೆಸಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆ, ಶುಚಿತ್ವ ಪರಿಶೀಲಿಸಿದರು.
ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೆಪಿಎಂಇ ಕಾಯ್ದೆ ಉಲ್ಲಂಸಿದ ಹಿನ್ನೆಲೆಯಲ್ಲಿ ಪಟ್ಟಣದ 3 ಪ್ರಮುಖ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಪರಿಶೀಲನೆ ವೇಳೆ ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯರು ಅಲೋಪೋಥಿಕ್ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಿದ್ದು ಅಂಥ ವೈದ್ಯರಿಗೆ ಮೌಖಿಕವಾಗಿ ತಿಳಿ ಹೇಳಿದ್ದು ಹೀಗೆ ಮುಂದುವರೆದರೆ ಅವರ ಪರವಾನಗಿ ರದ್ದತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ದಾಳಿ ವೇಳೆ ಹಲವು ಖಾಸಗಿ ಆಸ್ಪತ್ರೆಗಳಲ್ಲಿನ ಅಶುಚಿತ್ವ ಕಂಡು ದಂಗಾದ ಡಿಎಚ್ಒ ಅವರು ಉತ್ತಮ ಚಿಕಿತ್ಸೆ ಜತೆಗೆ ಶುಚಿತ್ವದ ಬಗ್ಗೆ ಹೆಚ್ಚು ಮಹತ್ವ ನೀಡಬೇಕಾದ ವೈದ್ಯರ ಆಸ್ಪತ್ರೆಗಳೆ ತಿಪ್ಪೆ ಗುಂಡಿಯಂತಾಗಿದ್ದು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯನ್ನು ಸ್ವಚ್ಛ ಮತ್ತು ಸರಿಯಾದ ರೀತಿಯಲ್ಲಿ ಕಾಪಾಡದಿದ್ದರೆ ಅಂಥ ಆಸ್ಪತ್ರೆಗಳನ್ನು ಕಾಯಂ ಬಂದ್ ಮಾಡಲು ಎಲ್ಲ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಆರೋಗ್ಯ ಕೇಂದ್ರದ ಸಿಬ್ಬಂದಿ ಸಮೀರ್ ಅಹ್ಮದ್ ಗುಂಡಗಿ, ದೇವಪ್ಪ ಪಾಸೋಡಿ ಇದ್ದರು.