ಬಾಲ್ಯ ವಿವಾಹಕ್ಕೆ ಪೋತ್ಸಾಹಿಸಿದರೆ ಕ್ರಮ child marriage 
ರಾಜ್ಯ

ಬಾಲ್ಯ ವಿವಾಹಕ್ಕೆ ಪೋತ್ಸಾಹಿಸಿದರೆ ಕ್ರಮ child marriage

ಪ್ರಮುಖ ಮುಖ್ಯಾಂಶಗಳು

  • ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ.ಮಂಜುನಾಥಾಚಾರಿ ಹೇಳಿಕೆ
ಬಾಗೇಪಲ್ಲಿ: ಹದಿನೆಂಟು ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು. ಮದುವೆಗೆ ಪೋತ್ಸಾಹಿಸುವುದು ಶಿಾರ್ಹ ಅಪರಾಧವಾಗಿದ್ದು ಬಾಲ್ಯ ವಿವಾಹಕ್ಕೆ ಪೋತ್ಸಾಹಿಸಿದ ಪಾಲಕರ, ಸಂಬಂಧಿಕರ, ಸ್ನೇಹಿತರ, ಆರ್ಚಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ಡಿ.ಕೆ.ಮಂಜುನಾಥಾಚಾರಿ ತಿಳಿಸಿದರು.child marriage
ಪಟ್ಟಣ ಹೊರವಲಯದ ಗಡಿದಂ ಬೆಟ್ಟದಲ್ಲಿರುವ ಪಾಂಡರಂಗ ಸ್ವಾಮಿ ದೇವಾಲಯ ಪ್ರಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಸ್ತೆ ಸರುಕ್ಷತಾ ಸಪ್ತಾಹ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳ ಹಂಚಿ ಮಾತನಾಡಿದರು.
ಹೆಣ್ಣು ಮಕ್ಕಳು ಆರೋಗ್ಯವಂತರಾಗಿದ್ದರೆ ಮುಂದಿನ ಪೀಳಿಗೆಯ ಸಂತತಿ ಆರೋಗ್ಯವಾಗಿರುತ್ತದೆ. ಅದ್ದರಿಂದ ಬಾಲ್ಯವಿವಾಹಕ್ಕೆ ಯಾರೋಬ್ಬರು ಪೋತ್ಸಾಹ ನೀಡಬಾರದು ಎಂದರು.
ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ ಸಂಚಾರಿ ನಿಯಮಗಳನ್ನು ಉಲ್ಲಂಸುವುದರರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಕಡ್ಡಾಯವಾಗಿ ರಸ್ತೆ ಸರುಕ್ಷತಾ ನಿಯಮ ಪಾಲಿಸಿ ಪ್ರಾಣವನ್ನು ಉಳಿಸಿಕೊಳ್ಳಿ, ಕುಟುಂಬ ಆಸರೆ ಆಗಿರುವ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೇ ಇಡೀ ಕುಟುಂಬ ಅನಾಥವಾಗುತ್ತದೆ ಎಂಬುದನ್ನು ಮರೆಯಬೇಡಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್​.ಸತ್ಯನಾರಾಯಣರೆಡ್ಡಿ ಮಾತನಾಡಿ, ಅತಿಯಾದ ಔಷಧ ಬಳಕೆಯ ವಿಷಪೂರಿತ ತರಕಾರಿ, ಅಪೌಷ್ಠಿಕ ಆಹಾರ ಸೇವೆನೆಯಿಂದ ಇಂದಿನ ಪೀಳಿಗೆಯ ಮಕ್ಕಳಲ್ಲಿ ಭಯಾನಕವಾದ ರೋಗಗಳು ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ ಬೆಳೆಯುವ, ಗರ್ಭೀಣಿಯರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ಆರೋಗ್ಯ ಇಲಾಖೆ ನಡೆಸಿರುವ ಹಲವು ಪರೀಾ ವರದಿಗಳಂತೆ ಕುಡಿಯುವ ನೀರು, ತರಕಾರಿ, ಆಹಾರ ಉತ್ಪನ್ನಗಳು ವಿಷಪೂರಿತ ಆಗಿ ಯೂರೇನೀಯಂ ಅಂಶ ಮಿಶ್ರಣಗೊಂಡಿರುವುದಾಗಿ ತಿಳಿದು ಬಂದಿದೆ. ಆದ್ದರಿಂದ ಆಹಾರ ಪದಾರ್ಥಗಳ ಆಯ್ಕೆ ವಿಚಾರದಲ್ಲಿ ಒಮ್ಮೆ ಯೋಚಿಸಿ ಸಾವಯುವ ಗೊಬ್ಬರಗಳು ಬಳಸಿರುವ ಆಹಾರ ಪದಾರ್ಥಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.