ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಜೊಲ್ಲೆ ಒತ್ತಾಯ 
ರಾಜ್ಯ

ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಒತ್ತಾಯ
  • ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ ಜೊಲ್ಲೆ
  • ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದ ಗಡ್ಕರಿ
ಕಳಪೆ ಕಾಮಗಾರಿ ವಿರುದ್ಧ ಕ್ರಮಕ್ಕೆ ಒತ್ತಾಯ
| ಕೇಂದ್ರ ಸಚಿವ ಗಡ್ಕರ್‌ಗೆ ಜೊಲಲೆ ಮನವಿ| ಲೋಪ ಎಸಗಿದವರ ವಿರುದ್ಧ ಕ್ರಮ | ಗಡ್ಕರ್ ಸೂಚನೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಇಲ್ಲಿನ ಪೂನಾ-ಬೆಂಗಳೂರು ರಾಷ್ಟಿÃಯ ಹೆದ್ದಾರಿ ಎನ್‌ಎಚ್‌-48ರ ಕಳಪೆ ಕಾಮಗಾರಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ನಿಪ್ಪಾಣಿ ನಗರದ ಸಮೀಪ ಗಾಂಧೀ ಆಸ್ಪತ್ರೆ ಬಳಿ ಈಚೆಗೆ ರಾಷ್ಟಿçÃಯ ಹೆದ್ದಾರಿ ಎನ್‌ಎಚ್ 48ರ ನೂತನ ಸೇತುವೆ ರಿಟೈನಿಂಗ್ ವಾಲ್ ಕುಸಿದ ಘಟನೆ ಅತ್ಯಂತ ಗಂಭೀರವಾಗಿದ್ದು, ಕಾಮಗಾರಿಯ ಗುಣಮಟ್ಟದ ಬಗ್ಗೆ ಆತಂಕ ಮೂಡಿಸಿದೆ. ಹೊನಗಾ-ಕೋಗನೋಳಿ ರಸ್ತೆ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ, ನಿರ್ಲಕ್ಷ÷್ಯ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಎದುರಾಗಿದೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ದೂರವಾಣಿ ಮೂಲಕ ಮಾತನಾಡಿ,ಕಳಪೆ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಗುತ್ತಿಗೆದಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಮರುಕಳಿಸಿದರೆ ಸಂಬಂಸಿ ಗುತ್ತಿಗೆ ಸಂಸ್ಥೆ ಮೂರು ವರ್ಷಗಳ ಕಾಲ ಕಪು ಪಟ್ಟಿಗೆ (ಬ್ಲಾಕ್ ಪಟ್ಟಿ) ಸೇರಿಸಲಾಗುತ್ತದೆ ಎಚ್ಚರಿಕೆ ಮಾಹಿತಿ.
ಕರ್ತವ್ಯ ಲೋಪ ಎಸಗಿದ ಅಲೋಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿ, ರಾಷ್ಟಿçÃಯ ರಸ್ತೆ ಕಾಮಗಾರಿಯ ಗುಣಮಟ್ಟದ ಮೇಲೆ ವೈಯಕ್ತಿಕವಾಗಿ ನಿಗಾ ವಹಿಸಿ ನಿಯಮಿತ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿ, ಸುರಕ್ಷಿತ, ಗುಣಮಟ್ಟದ ಮತ್ತು ಅಡೆತಡೆ ಸಂಚಾರ ರಹಿತ ಒದಗಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ.
ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ಉಮೇಶ ಜಾಧವ ಇದ್ದರು.