ಶಹಾಪುರ ತಾಲೂಕಿನ ಭೀ.ಗುಡಿಯಲ್ಲಿ ಶುಕ್ರವಾರ ಹಮ್ಮಿಕೊಂಡ ರಜತ ಮಹೋತ್ಸವ ಮತ್ತು ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯ ಶರಣಪ್ಪ ಸಲಾದಪುರ ಉದ್ಘಾಟಿಸಿದರು. ಮಧುಸೂಧನ ರಡ್ಡಿ, ತಿಮ್ಮಣ್ಣ, ಡಾ.ಎಸ್​.ಜಿ.ಗೌಡಪ್ಪ, ಡಾ.ಗುರುರಾಜ ಸುಂಕದ, ಡಾ.ಅನರೆಶಗೌಡ ಎ, ಡಾ.ಪ್ರಭುರಾಜ, ಡಾ.ಎಸ್​.ಕೆ.ಜಯಲ್ಮ ಇತರರಿದ್ದರು. 
ರಾಜ್ಯ

ಪದವಿಗಿಂತ ಜ್ಞಾನ ಸಂಪಾದನೆ ಮುಖ್ಯ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಅಧ್ಯಕ್ಷ ಸಲಾದಪುರ ಹೇಳಿಕೆ >
  • ರಜತ ಮಹೋತ್ಸವ ಮತ್ತು ಹಳೇ ವಿದ್ಯಾರ್ಥಿಗಳ ಸಮ್ಮಿಲನ
ಶಹಾಪುರ: ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು,ಜ್ಞಾನ ಸಂಪಾದನೆ ಮಾಡಿಕೊಂಡು ಕೃಷಿ ಧರ್ಮ ಪಾಲನೆ ಮಾಡಬೇಕು ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.
ಇಲ್ಲಿನ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಪೇಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡ ರಾಯಚೂರು ಕೃಷಿ ವಿಾನಗಳ ವಿಶ್ವವಿದ್ಯಾಲಯ ಮತ್ತು ಭೀ.ಗುಡಿ ಕೃಷಿ ಮಹಾವಿದ್ಯಾಲಯದ ರಜತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ- 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳೇ ಕೃಷಿ ಚಟುವಟಿಕೆ ಪರಿವರ್ತನೆಯಾಗಬೇಕು. ಹೊಸ ಸಂಶೋಧನಾತ್ಮಕ ಕಾರ್ಯ ಮತ್ತು ತಂತ್ರಾನ ಬಳಸಿಕೊಂಡು ಕೃಷಿ ಕಾಯಕ ಮಾಡಬೇಕಿದೆ. ಅಲ್ಲದೆ ಮಹಿಳೆಯರು ಕೃಷಿ ಕಾರ್ಯಕ್ಷೇತ್ರದಲ್ಲಿ ಸಾಧನೆ ಮಾಡಲಿದ್ದಾರೆ. ಅವರಿಗೆ ಸಮರ್ಪಕ ಪ್ರೋತ್ಸಾಹ ಸಿಗಬೇಕಿದೆ. ಹೈನುಗಾರಿಕೆ ಬಳಸಿಕೊಂಡು ಕೃಷಿಯ ವಿವಿಧ ಆಯಾಮಗಳನ್ನು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದಲ್ಲಿ ರೈತ ಮಹಿಳೆಯಾಗಿ ಹೊರ ಹೊಮ್ಮುವಲ್ಲಿ ಎರಡು ಮಾತಿಲ್ಲ. ಅವರಲ್ಲೂ ಆ ಛಲ, ಬಲವಿದೆ ಎಂದರು.
ಕೃಷಿ ವಿವಿ ರಾಯಚೂರು ಆಡಳಿತ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಲ್ಲಿಕಾರ್ಜುನ ವನದುರ್ಗ ಮಾತನಾಡಿ, ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯ ಅಭಿವೃದ್ಧಿಗೆ ಕುಲಪತಿ ಅವರಿಗೂ ಸಂಬಂಧಿಸಿದ ಅಧಿಕಾರಿಗಳಲ್ಲಿ ಕಾಡಿ, ಬೇಡಿ ಹಲವು ವಿವಿಧ ಕಾರ್ಯಗಳನ್ನು ಮಾಡಿಸಿದ್ದೇವೆ. ವಿದ್ಯಾರ್ಥಿಗಳಿಗೆ ನೂತನ ವಿದ್ಯಾರ್ಥಿ ನಿಲಯ ಸೇರಿ ವಿವಿಧ ವಿಷಯಗಳ ಸುಮಾರು 14 ವಿಭಾಗಗಳನ್ನು ಇಲ್ಲಿ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸಲಾಗಿದೆ. ನಾನು ಇದೇ ಕಾಲೇಜಿನ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ವಿಶ್ರಾಂತ ಡೀನ್​ ಎಸ್​.ಎಸ್​.ಪಾಟೀಲ್​, ನಿವೃತ್ತ ಪ್ರಾಧ್ಯಾಪಕ ಎಸ್​.ಎನ್​.ಉಪ್ಪೇರಿ ಮಾತನಾಡಿದರು. ಪ್ರಸ್ತುತ ಡೀನ್​ ಡಾ.ಪಿ.ಎಚ್​.ಕುಚನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಸಂದ ಅಧ್ಯ ಶಶಿಕಾಂತ ಕಟ್ಟಿಮನಿ ಮಾತನಾಡಿದರು. ರಾಯಚೂರು ಕೃಷಿ ವಿಶ್ಚ ವಿದ್ಯಾಲಯದ ಮಧುಸೂಧನ ರಡ್ಡಿ, ತಿಮ್ಮಣ್ಣ ಚಾವೆಇ, ಡಾ.ಎಸ್​.ಜಿ.ಗೌಡಪ್ಪ, ಡಾ.ಗುರುರಾಜ ಸುಂಕದ, ಡಾ.ಅನರೆಶಗೌಡ ಎ, ಡಾ.ಪ್ರಭುರಾಜ, ಡಾ.ಎಸ್​.ಕೆ.ಜಯಲ್ಮ, ಡಾ.ಯಂಜೇರಪ್ಪ, ಡಾ.ರಾಜಣ್ಣ, ರವಿ ಮೆಸ್ತಾ ಸೇರಿದಂತೆ ವಿಶ್ರಾಂತ ಕುಲಪತಿಗಳಾದ ಡಾ.ಜಿ.ವಿ.ಪಾಟೀಲ್​, ಡಾ.ಪಿ.ಎಂ.ಸಾಲಿಮಠ, ಡಾ.ಕೆ.ಎನ್​.ಕಟ್ಟಿಮನಿ ಇತರರಿದ್ದರು.