ಜಾವಗಲ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ಮಕ್ಕಳೊಂದಿಗೆ ಶಿಕ್ಷಕರು ಇದ್ದರು.
- ಜಾವಗಲ್ ಶ್ರೀನಾಥ್ ಕ್ರೀಡಾಂಗಣ
- ಜಾವಗಲ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟ
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಜಾವಗಲ್ ಶ್ರೀನಾಥ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಾವಗಲ್ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಕೋಳಗುಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಸತತ 11ನೇ ವರ್ಷ ಸಮಗ್ರ ಪ್ರಶಸ್ತಿ ಪಡೆದರು.
ಕೋಳಗುಂದ ಶಾಲೆವಿದ್ಯಾರ್ಥಿನಿ ಸಿಂಚನಾ 1500 ಮೀ ಪ್ರಥಮ, 3000 ಮೀ ಪ್ರಥಮ, 3000 ಮೀ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಬಾಲಕಿಯರ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದಿದ್ದಾಳೆ. ಬಾಲಕಿಯರ ವಿಭಾಗದಲ್ಲಿ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ವಾಲಿಬಾಲ್ ದ್ವಿತೀಯ, ಖೋಖೋ ದ್ವಿತೀಯ ಹಾಗೂ 4*100 ಮೀ ಪ್ರಥಮ ಹಾಗೂ 4*400 ಮೀಟರ ಓಟದಲ್ಲಿ ದ್ವಿತೀಯ ಪ್ರಶಸ್ತಿ ಪಡೆದಿದ್ದಾರೆ.
ಇನ್ನು ಅಂಜಲಿ ಜಾವಲಿನ್ ಥ್ರೋ ಪ್ರಥಮ, ಡಿಸ್ಕಸ್ ಪ್ರಥಮ, 800 ಮೀ ದ್ವಿತೀಯ, ಮೇಘನಾ ನಾಯಕ್ ಹ್ಯಾಮರ್ ಥ್ರೋ ಪ್ರಥಮ, 3000 ಮೀ ನಡಿಗೆ ತೃತೀಯ, ಹೇಮಶ್ರೀ ಜಾವಲಿನ್ ದ್ವಿತೀಯ, ಉದ್ದ ಜಿಗಿತ ದ್ವಿತೀಯ, ಸಹನಾ ತ್ರಿವಿಧ ಜಿಗಿತ ತೃತೀಯ, ಸೋಪಾನಾ ಎತ್ತರ ಜಿಗಿತದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ 4*100 ಮೀ ಪ್ರಥಮ, 4*400 ಮೀ ಪ್ರಥಮ, ಜೀವನ್ 3000 ಮೀ ಪ್ರಥಮ, 1500 ದ್ವಿತೀಯ, 800 ಮೀ ದ್ವಿತೀಯ, ರಜಿನಿಕಾಂತ್ 3000 ಮೀ ದ್ವಿತೀಯ, 5000 ಮೀ ನಡಿಗೆ ದ್ವಿತೀಯ, ಕಾರ್ತಿಕ 400 ಮೀ ಪ್ರಥಮ, ತ್ರಿವಿಧ ಜಿಗಿತಾ ದ್ವಿತೀಯ, ಅಶ್ವಥ್ ಹ್ಯಾಮಾರ್ ಥ್ರೋ ಪ್ರಥಮ, ಡಿಸ್ಕಸ್ ಪ್ರಥಮ, ಗೌತಮ್ ತ್ರಿವಿಧ ಜಿಗಿತಾ ದ್ವಿತೀಯ, ಉದ್ದ ಜಿಗಿತದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.