ದೇವನಹಳ್ಳಿ ತಾಲೂಕು ಕೊಯಿರಾ ರಸ್ತೆ ಮನ್ವಂತರಿ ಕನ್ವರ್ಷನ್​ ಹಾಲ್​ನಲ್ಲಿ ಆಯೋಜಿಸಿದ್ದ ಜೆಸಿಐ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭವನ್ನು ಗ್ರಾಮಾಂತರ ಜಿಪಂ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಉದ್ಘಾಟಿಸಿದರು. ಪುರಸಭೆ ಉಪಾಧ್ಯಕ್ಷ ಗುಟ್ಟಹಳ್ಳಿ ರವೀಂದ್ರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್​.ಎಂ.ರವಿಕುಮಾರ್​ ಇತರರಿದ್ದರು.  
ರಾಜ್ಯ

ಸಮರ್ಪಣೆಯಿಂದ ಸಾಧನೆ ಸಾಧ್ಯ / KUNDANA

ಬೆಂಗಳೂರು ಗ್ರಾಮಾಂತರ ಡೆಸ್ಕ್
ಕುಂದಾಣ : ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಮಾಜಕ್ಕೆ ಕೊಡುಗೆ ನೀಡುವುದರಿಂದ ದೇಶದ ಅಭಿವೃದ್ಧಿಗೆ ಸಹಕರಿಯಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಅನಂತಕುಮಾರಿ ಚಿನ್ನಪ್ಪ ಹೇಳಿದರು.
ದೇವನಹಳ್ಳಿ ತಾಲೂಕು ಕೊಯಿರಾ ರಸ್ತೆ ಮನ್ವಂತರಿ ಕನ್ವರ್ಷನ್​ ಹಾಲ್​ನಲ್ಲಿ ಆಯೋಜಿಸಿದ್ದ ಜೆಸಿಐ ಚಪ್ಪರಕಲ್ಲು ಚಂದನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಯ ಮತ್ತು ಮನಸ್ಸಿನ ಸಮರ್ಪಣೆಯಿಂದ ಉನ್ನತ ಸ್ಥಾನಕ್ಕೆ ಬೆಳೆಯಲು ಸಾಧ್ಯ. ಜೆಸಿಐ ಶಿಕ್ಷಣ, ಮನರಂಜನೆ, ಆರೋಗ್ಯ, ಕ್ರೀಡೆ ಸೇರಿ 10 ಹಲವು ಸಾಮಾಜಿಕ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಮಾಡುತ್ತಿದ್ದು, ಇಂತಹ ಸಂಸ್ಥೆಗಳಿಂದ ಬಡವರು, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನುಕೂಲವಾಗಿದೆ ಎಂದರು.
ಜೆಸಿಐ ಮಾಜಿ ಅಧ್ಯಕ್ಷ ಜಗದೀಶ್​ ಮಾತನಾಡಿ, ಸಂಸ್ಥೆಯು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರ ಜತೆಗೆ ವ್ಯಕ್ತಿ ವಿಕಸನ ಬೆಳವಣಿಗೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಯುವ ಪೀಳಿಗೆ ಹಂತ ಹಂತವಾಗಿ ಬೆಳೆಯಲು ಜೆಸಿಐ ಸಂಸ್ಥೆ ಉತ್ತಮ ತರಬೇತಿ ಹಾಗೂ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದರು.
ದೇವನಹಳ್ಳಿ ಜೆಸಿಐ ಅಧ್ಯಕ್ಷ ಆನಂದ್​, ಮಾಜಿ ಅಧ್ಯಕ್ಷ ವೇಣುಗೋಪಾಲ್​, ಚಪ್ಪರಕಲ್ಲು ಚಂದನ ಮಾಜಿ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್​, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ತಾಲೂಕು ಅಧ್ಯಕ್ಷ ನಂಜೇಗೌಡ, ಸಮಾಜ ಸೇವಕ ಶಿವಾಜಿಗೌಡ, ಮುಖಂಡರಾದ ಅರುವನಹಳ್ಳಿ ವೆಂಕಟೇಗೌಡ, ಪ್ರಸನ್ನಹಳ್ಳಿ ವಿಜಯಕುಮಾರ್​ ರಾಜಾರಾಮ್​, ಕುರುಬರ ಕುಂಟೆ ಸುಧಾಕರ್​, ರವಿ ಕೆಂಪೇಗೌಡ ಇತರರಿದ್ದರು.