ನೆಲಮಂಗಲದ ಶ್ರೀ ವೀರಭದ್ರೇಶ್ವರ ಪ್ರಾರ್ಥನಾ ಮಂದಿರ ಕವಾಡಿ ಮಠದಲ್ಲಿ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಶಾಸಕ ಎನ್​.ಶ್ರೀನಿವಾಸ್​ ಉದ್ಘಾಟಿಸಿದರು. ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಎನ್​.ಎಸ್​.ಪೂರ್ಣಿಮಾ ಸುಗ್ಗರಾಜು, ಕಾಂಗ್ರೆಸ್​ ತ್ಯಾಮಗೊಂಡ್ಲು ಬ್ಲಾಕ್​ ಅಧ್ಯಕ್ಷ ಹನುಮಂತೇಗೌಡ, ಪ್ರಾಂಶುಪಾಲ ಮಹದೇವಯ್ಯ ಇದ್ದರು.  
ರಾಜ್ಯ

ಶಿಕ್ಷಣದಿಂದ ಸಾಧನೆ ಸಾಧ್ಯ / NELAMANGAL

ಬೆಂಗಳೂರು ಗ್ರಾಮಾಂತರ ಡೆಸ್ಕ್
ನೆಲಮಂಗಲ : ವಿದ್ಯೆ ಇದ್ದರೇ ಮಾತ್ರ ಸಮಾಜದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯೆಯತ್ತ ಹೆಚ್ಚು ಗಮನ ಹರಿಸಬೇಕು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.
ನಗರದ ಶ್ರೀ ವೀರಭದ್ರೇಶ್ವರ ಪ್ರಾರ್ಥನಾ ಮಂದಿರ ಕವಾಡಿಮಠದಲ್ಲಿ ಶ್ರೀ ಬಸವಣ್ಣ ಎಜುಕೇಷನಲ್​ ಟ್ರಸ್ಟ್​ನ ವಿದ್ಯಾ ಚೇತನ ಟೆಕ್ನೋ ಪದವಿ ಪೂರ್ವ ಕಾಲೇಜು ಚೇತನೋತ್ಸವ&2026ರ ಶೀರ್ಷಿಕೆಯಡಿ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.ಮಕ್ಕಳಲ್ಲಿ ಹೊಸ ಚೈತನ್ಯಹಾಗೂ ಆತ್ಮಸ್ಥೆ$ರ್ಯ ತುಂಬುವ ಕೆಲಸವನ್ನು ಕ್ಷೇತ್ರದಲ್ಲಿ ನಿರಂತರವಾಗಿ ಮಾಡಲಾಗುತ್ತಿದೆ. ಕೇವಲ ಅಭಿವೃದ್ಧಿ ಕಾರ್ಯ ಮಾಡದೇ ಸಾವಿರಾರು ಮಕ್ಕಳಿಗೆ ಶೈಕ್ಷಣಿಕ ಉತ್ತೇಜನ ನೀಡಲು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದರು.
ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯ ತುಂಬಾ ಅಮೂಲ್ಯ. ಅದನ್ನು ವ್ಯರ್ಥ ಮಾಡದೆ ಯಶಸ್ವಿಯಾಗಿ ಗುರಿ ತಲುಪಿ. ವಿದ್ಯಾರ್ಥಿಗಳ ಜೀವನದಲ್ಲಿ ಪಿಯುಸಿ ಮಹತ್ವದ ಘಟ್ಟ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಹಣದಿಂದ ಏನನ್ನಾದರೂ ಖರೀದಿಸಬಹುದು. ಆದರೆ ಕಳೆದುಹೋದ ಸಮಯ ಖರೀದಿಸಲು ಸಾಧ್ಯವಿಲ್ಲ ಎಂಬ ಚಿಂತನೆ ಇರಲಿ ಎಂದರು.
ಶ್ರೀ ಬಸವಣ್ಣ ಎಜುಕೇಷನ್​ ಟ್ರಸ್ಟ್​ನ ಅಧ್ಯಕ್ಷೆ ಎಂ.ಎಸ್​.ಗೌರಮ್ಮ, ಕಾರ್ಯದರ್ಶಿ ಯಶೋಧಮ್ಮ, ಸದಸ್ಯರಾದ ರೇಣುಪ್ಪ, ಆನಂದ್​, ಉಮೇಶ್​, ಪುಟ್ಟಯ್ಯ, ವಿರುಪಾಕ್ಷಯ್ಯ, ಆರ್​ಪಿ ವಿದ್ಯಾಸಂಸ್ಥೆ ಸಂಸ್ಥಾಪಕ ಜಯಸಿಂಹ ಇತರರು ಇದ್ದರು. ಹಾಸ್ಯ ಕಾರ್ಯಕ್ರಮ: ವಾರ್ಷಿಕೋತ್ಸವ ಪ್ರಯುಕ್ತ ಕಾಮಿಡಿ ಕಿಲಾಡಿ ಖ್ಯಾತಿಯ ಗಜೇಂದ್ರ ಮರಸಣಿಗೆ ಹಾಗೂ ವಾಣಿಶ್ರೀಗೌಡ ಅವರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರತಿಭಾ ಪುರಸ್ಕಾರ: ಶೈಕ್ಷಣಿಕ ವರ್ಷದಲ್ಲಿಹೆಚ್ಚು ಅಂಕ ಗಳಿಸಿದ ಕಾಲೇಜಿನ ಪ್ರಥಮ ಹಾಗೂ ದ್ವೀತಿಯ ಪಿಯುಸಿಯ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.