ಕಲಬುರಗಿ ಸರ್ವಜ್ಞ ಶಾಲೆಯಲ್ಲಿ ಗುರುವಾರ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ನ್ಯಾಯಾಧೀಶ ಜಿ.ಎಲ್​.ಲಕ್ಷಿ$್ಮನಾರಾಯಣ ಚಾಲನೆ ನೀಡಿದರು. ಪೂಜ್ಯ ಮಹಾಂತ ಸ್ವಾಮಿಗಳು, ಪ್ರೊ.ಚನ್ನಾರಡ್ಡಿ ಪಾಟೀಲ್​, ಡಾ.ವಿಶ್ವನಾಥ ರಡ್ಡಿ, ಅಭಿಷೇಕ ಪಾಟೀಲ್​, ವಿನೂತಾ ಆರ್​.ಬಿ ಇತರರಿದ್ದರು. 
ರಾಜ್ಯ

ಬದುಕಿನಲ್ಲಿ ಶಿಸ್ತು ರೂಢಿಸಿಕೊಂಡರೆ ಸಾಧನೆ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಲಕ್ಷ್ಮೀನಾರಾಯಣ ಹೇಳಿಕೆ
  • ಸರ್ವಜ್ಞ ಶಾಲೆಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕಲಬುರಗಿ: ವಿದ್ಯಾರ್ಥಿಗಳು ಶಿಸ್ತು, ಸಂಯಮ, ನಿರಂತರ ಅಧ್ಯಯನ, ಸತತ ಪ್ರಯತ್ನ, ಕಠಿಣ ಪರಿಶ್ರಮ, ಗುರಿಮುಟ್ಟುವ ಛಲ ರೂಢಿಸಿಕೊಂಡಲ್ಲಿ ಸಾಧನೆ ಸಾಧ್ಯವಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್​.ಲಕ್ಷಿ$್ಮನಾರಾಯಣ ಹೇಳಿದರು.
ಸರ್ವ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನ್ಯಾಯಮೂರ್ತಿ ಶಿವರಾಜ ಪಾಟೀಲ್​ ಪ್ರತಿಷ್ಠಾನ ರಾಯಚೂರು, ಸರ್ವ ಮತ್ತು ಜಸ್ಟಿಸ್​ ಪಾಟೀಲ್​ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಿಂದ ಗುರುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್​ ಅವರು ರಚಿಸಿದ ಮುಂಜಾವಿಗೊಂದು ನುಡಿಕಿರಣಗಳ ದರ್ಶನ ಪ್ರವಚನ ಮಾಲಿಕೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ 9 ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನ್ಯಾಯಮೂರ್ತಿ ಶಿವರಾಜ ಪಾಟೀಲ್​ ಅವರ ನುಡಿಮುತ್ತುಗಳನ್ನು ನಿತ್ಯ ವೀಕ್ಷಿಸಿ ಪಾಲನೆ ಮಾಡಿದರೆ ಉತ್ತಮ ಸಂಸ್ಕಾರದೊಂದಿಗೆ ಒಳ್ಳೆಯ ಅಂಕಗಳು ಬರುತ್ತವೆ. ಉತ್ತಮ ಪರಿಸರವಿದ್ದ ಶಾಲೆ, ಶಿಕ್ಷಕರ ಉತ್ತಮ ಮಾರ್ಗದರ್ಶನ, ಮೌಲ್ಯಾಧಾರಿತ ಶಿಕ್ಷಣವಿದ್ದಲ್ಲಿ ಸಾಧನೆ ಸುಲಭ. ವಿದ್ಯಾರ್ಥಿಗಳು ಪಾಲಕರ ಆಸೆ ಈಡೇರಿಸಬೇಕು ಎಂದರು.
ಮುದಗಲ್​ ಕಲ್ಯಾಣ ಆಶ್ರಮದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಡಾ.ಶಿವರಾಜ ಪಾಟೀಲ್​ ಅವರು ಕಷ್ಟಗಳ ಮಧ್ಯೆಯೂ ಛಲ ಬಿಡದೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ ದೇಶದ ಸವೋರ್ಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಇವರ ಮುಂಜಾವಿಗೊಂದು ನುಡಿ ಕಿರಣ&365 ಕೃತಿ ಇವರ ಅಮೂಲ್ಯವಾದ ಅನುಭವದಿಂದ ಹೊರಹೊಮ್ಮಿದ ನುಡಿಮುತ್ತುಗಳ ಸಂಗಮ. ಆರೋಗ್ಯಕರ ದೇಹ, ಆರೋಗ್ಯಕರ ಮನಸ್ಸನ್ನು ಹೊಂದಿದ್ದು, ಸನ್ಮಾರ್ಗದಲ್ಲಿ ನಡೆದು ಉತ್ತಮರಾಗಿ ಹೊರಹೊಮ್ಮಬೇಕೆಂಬುದೆ ಈ ಪ್ರವಚನದ ಆಶಯ ಎಂದು ಹೇಳಿದರು.
ಖ್ಯಾತ ನೇತ್ರ ತಜ್ಞ ಡಾ.ವಿಶ್ವನಾಥರೆಡ್ಡಿ ಮಾತನಾಡಿದರು.
ಸಂಸ್ಥೆ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ್​ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ನ್ಯಾಯಮೂರ್ತಿ ಶಿವರಾಜ ಪಾಟೀಲ್​ ಅವರ ನುಡಿಕಿರಣಗಳು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಬೆಳಕಾಗಿವೆ. ಆದ್ದರಿಂದ ಇಂಥ ನುಡಿಕಿರಣಗಳ ಪ್ರವಚನ ಎಲ್ಲರೂ ಆಲಿಸಿ, ಪಾಲಿಸಬೇಕು ಎಂದರು.
ನೇತ್ರ ತಜ್ಞೆ ಡಾ.ರಾಜಶ್ರೀ ರೆಡ್ಡಿ, ಸಂಸ್ಥೆ ಮುಖ್ಯ ಶೈಕ್ಷಣಿಕ ನಿರ್ದೇಶಕ ಅಭಿಷೇಕ್​ ಪಾಟೀಲ್​, ಪ್ರಾಚಾರ್ಯ ವಿನೂತಾ ಆರ್​.ಬಿ, ಪ್ರಮುಖರಾದ ಅನಿತಾ ಕುಲಕರ್ಣಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ ಇತರರಿದ್ದರು. ಸಂಸತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ.ವಿದ್ಯಾವತಿ ನಿರೂಪಣೆ ಮಾಡಿದರು.
"

ಪಿಯು ಎರಡು ವರ್ಷ ಪರಿಶ್ರಮಪಟ್ಟು ಅಧ್ಯಯನ ಮಾಡಿದರೆ ಭವಿಷ್ಯ ಉಜ್ವಲವಾಗಲಿದೆ. ಸರ್ವಜ್ಞ ಸಮೂಹ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡುವ ಪಣ ತೊಡಬೇಕು.

— > ಡಾ.ವಿಶ್ವನಾಥ ರಡ್ಡಿ, ಖ್ಯಾತ ನೇತ್ರ ತಜ್ಞ