ಗುರುಮಠಕಲ್ ಪಟ್ಟಣದ ಪ್ರಗತಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ತಿಗಳ ಸ್ವಾಗತ ಸಮಾರಂಭದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಜೀವ ಕುಮಾರ ಚಂದಾಪುರ, ಮಲ್ಲಿಕಾರ್ಜುನ ಹೊಸಮನಿ ಅಬ್ರಹಂ್ಮ ಲಿಂಕನ್, ಹಣಮಂತರಾವ ಗೋಂಗ್ಲೆ, ಇಸ್ಮಾಯಿಲ್ ಪ್ಯಾರೆ, ಬಾಲರಾಜ, ಗೋವಿಂದರಾಜು ಕಾಮಿನಿ, ಅಕ್ತರ್ ಪ್ಯಾರೆ ಇತರರಿದ್ದರು. 
ರಾಜ್ಯ

ಸಾಧಕರ ಪ್ರೇರಣೆಯಿಂದ ನಿಮ್ಮ ಗುರಿ ಮುಟ್ಟಿ

ಪ್ರಮುಖ ಮುಖ್ಯಾಂಶಗಳು

  • ಆಡಳಿತಾಧಿಕಾರಿ ಸಂಜೀವಕುಮಾರ ಸಲಹೆ
  • ಗುರುಮಠಕಲ್ ಪ್ರಗತಿ ಕಾಲೇಜಿನಲ್ಲಿ ಸ್ವಾಗತ ಕರ‍್ಯಕ್ರಮ
ಗುರುಮಠಕಲ್:

ಸಾಧಕರ ಪ್ರೇರಣೆಯಿಂದ ಜೀವನದಲ್ಲಿ ಗುರಿಸಾಧಿಸಲು ಪಣತೊಡಬೇಕು ಎಂದು ಡೆಕ್ಕನ್ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಸಂಜೀವ ಕುಮಾರ ಚಂದಾಪುರ ಹೇಳಿದರು.

ಭಾನುವಾರ ಪ್ರಗತಿಪ್ರೌಢ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಧನೆ ಸುಲಭವಲ್ಲ. ಸಾಕಷ್ಟು ಶ್ರಮದ ಅಗತ್ಯವಿದೆ. ಹಗಲಿರುಳು ಲೆಕ್ಕಿಸದೇ ನಿರಂತರ ಅಭ್ಯಾಸ ಮಾಡುವುದರಿಂದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.
ಪಾಠ ಆಲಿಸುವುದಕ್ಕು ಮುನ್ನ ಮನೆಯಲ್ಲಿ ಮನನ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಐಎಎಸ್, ಐಪಿಎಸ್ ಆಗಲು ಮಾತ್ರ ಸಾಧ್ಯ. ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರಿಯ ಕುರಿತು ಮಕ್ಕಳಿಗೆ ತಿಳಿ ಹೇಳಿದರು.
ಬಾಲಕಿಯರ ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಹೊಸಮನಿ ಮಾತನಾಡಿದರು. ಅಬ್ರಹಂ್ಮ ಲಿಂಕನ್ ಪ್ರಜಾಪ್ರಭುತ್ವದ ತತ್ವ ಕುರಿತು ತಿಳಿ ಹೇಳಿದರು. ಹಣಮಂತರಾವ ಗೋಂಗ್ಲೆ, ಇಸ್ಮಾಯಿಲ್ ಪ್ಯಾರೆ, ಬಾಲರಾಜ, ಡೆಕ್ಕನ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಕಾಮಿನಿ, ಕಾರ್ಯದರ್ಶಿ ಅಕ್ತರ ಪ್ಯಾರೆ, ಉಪಾಧ್ಯಕ್ಷ ಇಸ್ಮಾಯಿಲ್ ಪ್ಯಾರೆ, ಪ್ರಗತಿ ಕಾಲೇಜಿನ ಪ್ರಾಚಾರ್ಯ ಶಿವಕುಮಾರ ರೆಡ್ಡಿ, ಜಾಕಿರ ಹುಸೇನ್, ಚನ್ನಾರಡ್ಡಿ, ಲಕ್ಷ್ಮಣ ದೊಡ್ಲಾ, ಮಹೇಶ, ಬಾಲಗೋಪಲ, ನಸರೊದ್ಧೀನ್, ಅಕಾಶ, ಪ್ರದೀಪ, ಶಾಮಪ್ಪ, ಸಾದೀಕ್, ಗೊಪಾಲರೆಡ್ಡಿ ಇತರರಿದ್ದರು.
ಈ ವೇಳೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.