Achieve without giving up.
ಗುಬ್ಬಿ: ಮಕ್ಕಳನ್ನು ಕಾಲೇಜಿಗೆ ಸೇರಿಸಿ ಅವರು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರೋವರೆಗೆ ತಂದೆ ತಾಯಂದಿರು ಎಷ್ಟು ಹೊಣೆಗಾರರಾಗಿರುತ್ತಾರೆ, ಅಷ್ಟೇ ಜವಾಬ್ದಾರಿಯಿಂದ ನಮ್ಮ ಸಂಸ್ಥೆ ಕಳೆದ 25 ವರ್ಷದಿಂದ ವಿದ್ಯಾರ್ಥಿಗಳನ್ನು ತಯಾರು ಮಾಡುವುದರಲ್ಲಿ ಶ್ರಮಿಸುತ್ತಿದೆ ಎಂದು ಶಾಸಕ ಹಾಗೂ ಸಿಐಟಿ ಕಾಲೇಜಿನ ಕಾರ್ಯದರ್ಶಿ ಜಿ.ಬಿ ಜ್ಯೋತಿ ಗಣೇಶ್ ಹೇಳಿದರು.
ತಾಲೂಕಿನ ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸೆಲೆನ್ ಆದ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 25 ವರ್ಷಗಳಲ್ಲಿ ಈ ಕಾಲೇಜು ಸಾಕಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ನೀಡುವ ಮೂಲಕ ಅವರ ಬದುಕನ್ನೇ ಬದಲಾವಣೆ ಮಾಡಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಶಿಣ ಪಡೆಯುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಸೇವೆ ಮಾಡುತ್ತಿರುವುದು ಅತ್ಯಂತ ಸಂತಸ ನೀಡಿದೆ ಎಂದು ತಿಳಿಸಿದರು.
ಸೀನಿಯರ್ ಸೈಬರ್ ಸೆಕ್ಯೂರಿಟಿ ಮ್ಯಾನೇಜರ್ ಪ್ರವಿಣ್ ಮಾತನಾಡಿ, ಪ್ರತಿಯೊಬ್ಬರ ಮನಸು ಶಕ್ತಿ ಬುದ್ದಿವಂತಿಕೆ, ಸಂವಹನ, ಭಾಷೆ ಇವೆಲ್ಲವೂ ಬದಲಾವಣೆ ಇರುತ್ತದೆ. ಅದನ್ನ ಸರಿಯಾಗಿ ಬಳಕೆ ಮಾಡಿಕೊಂಡು ಬೆಳವಣಿಗೆ ಸಾಧಿಸಬೇಕಾಗಿದೆ. ನೀವು ಮಾಡುವಂತಹ ಎಲ್ಲ ಪ್ರಾಜೆಕ್ಟ್ಗಳು ಯಶಸ್ವಿಯಾಗುತ್ತವೆ ಎಂದು ಭಾವಿಸಬೇಡಿ, ಪ್ರಯತ್ನಗಳನ್ನು ಮಾಡುತ್ತಿದ್ದರೆ ಖಂಡಿತ ಒಂದಲ್ಲ ಒಂದು ದಿನ ನಿಮ್ಮ ಯೋಜನೆ ಸರಿಯಾಗುತ್ತವೆ ಎಂದು ತಿಳಿಸಿದರು.
ಕಾಪೊಡ್ ಇಂಡಸ್ಟ್ರೀಸ್ ತುಮಕೂರು ಚೇರ್ಮನ್ ಚಂದ್ರಶೇಖರ ಮಾತನಾಡಿ, 40 ವರ್ಷಗಳ ಹಿಂದೆ ನೋಡಿದಾಗ ಯಾವುದೇ ಇಂಜಿನಿಯರಿಂಗ್ ಕಾಲೇಜುಗಳು ಇಷ್ಟೊಂದು ಇರಲಿಲ್ಲ, ಕೈಗಾರಿಕೆಗಳು ಇರಲಿಲ್ಲ, ಆದರೆ ಈಗ ಸಾಕಷ್ಟು ಕಾಲೇಜುಗಳು ಮನೆಯ ಮುಂದೆಯೇ ಇವೆ. ಕೆಲಸಗಳು ಸಹ ಸಿಗುತ್ತವೆ. ಆದರೆ ಹೊಸದಾಗಿ ನೀವೆಲ್ಲ ಕೆಲಸಕ್ಕೆ ಹೋದಾಗ ಹತ್ತಾರು ಸಮಸ್ಯೆಗಳು ಇದ್ದೆ ಇರುತ್ತವೆ ಅವೆಲ್ಲವನ್ನು ನೀವು ನಿಭಾಯಿಸಬೇಕು ಎಂದು ತಿಳಿಸಿದರು.
ಕಾಲೇಜಿನ ನಿರ್ದೇಶಕ ಡಾ. ಸುರೇಶ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗೆ ಅವನ ಸ್ವಂತ ಬುದ್ಧಿಶಕ್ತಿ ಇದ್ದಲ್ಲಿ ಅವನು ತನ್ನ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ನಾವು ಮಾಡುವಂತಹ ಕೆಲಸದಲ್ಲಿ ಶಿಸ್ತು ಸಂಯಮ, ಉತ್ಸಾಹ ಮತ್ತು ಶ್ರದ್ಧೆ ಇದ್ದಲ್ಲಿ ಖಂಡಿತವಾಗಿ ಯಶಸ್ವಿಯಾಗಬಹುದು ಎಂದು ತಿಳಿಸಿದರು.