ಕಲಬುರಗಿಯಲ್ಲಿ ಕಾರ್ಮಿಕ ಸಂಟನೆಗಳ ಜಂಟಿ ಸಮಿತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಪಿ.ವಿಲಾಸಕುಮಾರ, ಪ್ರಭುದೇವ ಯಳಸಂಗಿ, ಶಂಕರ ಕಟ್ಟಿಸಂಗಾವಿ, ಶರಣಪ್ಪ, ಪದ್ಮಾಕರ ಜಾನಿಬ್, ರವಿಕುಮಾರ, ಸಿದ್ದಪ್ಪ ಪಾಲ್ಕಿ, ಎಸ್.ಎಂ.ಶರ್ಮಾ, ಬಂದೇನವಾಜ್, ಅಲ್ಲಾವುದ್ದೀನ್ ಇತರರಿದ್ದರು.
- ಹಿರಿಯ ನ್ಯಾಯವಾದಿ ಪಿ.ವಿಲಾಸಕುಮಾರ ಸಲಹೆ
- ಕನ್ನಡ ಭವನದಲ್ಲಿ 140ನೇ ವಿಶ್ವ ಕಾರ್ಮಿಕರ ದಿನ
ಕಲಬುರಗಿ: ಕಾರ್ಮಿಕರ ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡುವ ಮೂಲಕ ಈ ಸಮಾಜಕ್ಕೆ ಅದ್ಭುತ ಕೊಡುಗೆ ನೀಡಬೇಕು ಎಂದು ಹೈಕೋರ್ಟ್ ನ್ಯಾಯವಾದಿ ಪಿ.ವಿಲಾಸಕುಮಾರ ಕರೆ ನೀಡಿದರು.
ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಕಾರ್ಮಿಕ ಸಂಟನೆಗಳ ಜಂಟಿ ಸಮಿತಿ (ಜೆಸಿಟಿಯು)ಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 140ನೇ ವಿಶ್ವ ಕಾರ್ಮಿಕರ ದಿನ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಆಸ್ತಿಯನ್ನೂ ಎಲ್ಲರೂ ಮಾಡಬಹುದು. ಆದರೆ ಮಕ್ಕಳನ್ನೇ ಆಸ್ತಿಯನ್ನಾಗಿಸಿದರೆ ಸಂಪತ್ತಿಗಾಗಿ ಬಡಿದಾಡಬೇಕಿಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕರು ತಾವು ದುಡಿದ ಹಣದಲ್ಲೇ ಮಕ್ಕಳನ್ನು ಓದಿಸಿ, ಎಸ್ಸೆಸ್ಸೆಲ್ಸಿ, ಪಿಯುಸಿನಲ್ಲಿ ಶೇ.95ಕ್ಕೂ ಅಧಿಕ ಅಂಕ ಗಳಿಸುವಂತೆ ಮಾಡಿದ್ದು ದೊಡ್ಡ ಸಾಧನೆ ಎಂದು ಶ್ಲಾಸಿದರು.
ಜಾತಿ, ಧರ್ಮದ ಹೆಸರಿನಲ್ಲಿ ವಿಭಜಕ ಕೆಲಸ ನಡೆಯುತ್ತಿವೆ. ಪಟ್ಟಭದ್ರ ಹಿತಾಸಕ್ತಿಗಳು ದೇಶ ವಿಭಜನೆಗೆ ಮುಂದಾಗಿವೆ. ಜಾತಿ ರಾಜಕಾರಣದ ಅಮಲು ಏರಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಮಕ್ಕಳು ಜಾಗೃತರಾಗಬೇಕು. ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಹೋರಾಟ ಮಾಡಲು ಶಿಕ್ಷಣ ಮುಖ್ಯ. ಶಿಕ್ಷಣ ಒಂದಿದ್ದರೆ ಏನನ್ನಾದರೂ ಸಾಧಿಸಬಹುದು. ಇಂದು ಬಿಕ್ಷೆ ಬೇಡುವ ಮಕ್ಕಳೂ ಅದ್ಭುತ ಅಂಕಗಳೊಂದಿಗೆ ಶ್ರೀಮಂತ ಮಕ್ಕಳಿಗೆ ಸೆಡ್ಡು ಹೊಡೆದಿದ್ದಾರೆ. ಈ ಸಾಧನೆ ಪ್ರಮಾಣ ಇನ್ನೂ ಹೆಚ್ಚಾಗಬೇಕು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಮಾತನಾಡಿ, ಮಕ್ಕಳನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಬೇಡಿ. ಕಡಿಮೆ ಅಂಕ ಬಂದಿದ್ದರೂ ಇನ್ನೂ ಕಷ್ಟಪಡಿ. ಹೆಚ್ಚು ಅಧ್ಯಯನ ಮಾಡಿ, ನಿಮ್ಮ ಮನಸ್ಸು ಜಾಗೃತ ಮಾಡಿಕೊಳ್ಳಿ. ಆಗ ಶ್ರೇಷ್ಠ ಸಾಧನೆ ಮಾಡಬಹುದು ಎಂದು ಹೇಳಿದರು.
ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರಿಗೆ 8 ಗಂಟೆ ಕೆಲಸದ ಅವಧಿ 12 ಗಂಟೆ ಮಾಡುವ ಮೂಲಕ ಕಾರ್ಮಿಕ ವಿರೋಧಿ ನೀತಿ ಅನುಸರಿಸಿದೆ. ಉದ್ಯೋಗ ಭದ್ರತೆಗೆ ಅಂತ್ಯ ಹಾಡಿದೆ. ಕಾಪೋರ್ರೇಟ್ ಕಂಪನಿಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಎನ್ಸಿಎಲ್ ರಾಜ್ಯ ಉಪಾಧ್ಯಕ್ಷ ಶಂಕರ ಕಟ್ಟಿಸಂಗಾವಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಅಶೋಕ ೂಳಿ, ರವಿಕುಮಾರ, ಪದ್ಮಾಕರ ಜಾನೀಬ್, ನಾಗಲಕ್ಷಿ$್ಮ, ಸಿದ್ದಪ್ಪ ಪಾಲ್ಕಿ, ಮೋಸಿನ್ ಪಟೇಲ್, ರಾಜು ದೊರೆ, ಬಂದೇ ನವಾಜ್, ಅಲ್ಲಾವುದ್ದಿನ್, ಅಯೂಬ್ ಖಾನ್ ಇತರರಿದ್ದರು. ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಸ್.ಎಂ.ಶರ್ಮಾ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಮಾಳಗೆ ಸ್ವಾಗತಿಸಿದರು. ಶಿವಲಿಂಗಮ್ಮ ಲೇಂಗಟೀಕರ್ ವಂದಿಸಿದರು.
"
ಕಷ್ಟಪಟ್ಟು ಬೆಳೆಸಿದ ತಂದೆ&ತಾಯಿಗೆ ಮಕ್ಕಳು ಗೌರವ ನೀಡಬೇಕು. ನೀವು ಏನೇ ಸಾಧನೆ ಮಾಡಿದರೂ ಅದರ ಹಿಂದೆ ನಿಮ್ಮ ಪಾಲಕರು ಇದ್ದಾರೆ ಎಂಬುದನ್ನು ಮರೆಯಬಾರದು. ಸಾಧನೆ ಮಾಡಿ ಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಿ. ಈ ಮೂಲಕ ಹೆಚ್ಚಿನ ಸಾಧನೆ ನಿಮ್ಮಿಂದ ಸಾಧ್ಯವಾಗಲಿದೆ.
— > ಪಿ.ವಿಲಾಸಕುಮಾರ್, ನ್ಯಾಯವಾದಿ, ಹೈಕೋರ್ಟ್, ಕಲಬುರಗಿ ಪೀಠ