- ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ
- ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳ ಜತೆ ಸಂಪರ್ಕದಲ್ಲಿದ್ದ ವ್ಯಕ್ತಿ ಬಂಧನ
- ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಅರೆಸ್ಟ್
ದೊಡ್ಡಬಳ್ಳಾಪುರ: ಕೌಂಟರ್ ಇಂಟಲಿಜೆನ್ಸ್ ಸೆಲ್ ಮತ್ತು ಸೆಂಟ್ರಲ್ ಐಬಿ ಅಧಿಕಾರಿಗಳ ಮಾಹಿತಿ ಮೆರೆಗೆ ಪಾಕಿಸ್ತಾನದ ಗ್ಯಾಂಗ್ಸ್ಟರ್ಗಳ ಜತೆ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಇದೀಗ ನಗರದ ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳ ಜತೆ ಇನ್ಸ್ಟಾಗ್ರಾಮ್ ಅಕೌಂಟ್ ಮೂಲಕ ಸಂರ್ಪಕದಲ್ಲಿದ್ದ ಆರೋಪಿಯನ್ನು ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಎನ್ನಲಾಗಿದೆ. ಪಾಕ್ನ ಶಾಜದ್ ಬುಟ್ಟಿ ನೆಟವರ್ಕ್ ಗ್ಯಾಂಗ್ನ ಇನ್ಸ್ಟಾಗ್ರಾಂ ಅಕೌಂಟ್ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಗಣ್ಯ, ಹೆಸರಾಂತ ಹಾಗೂ ದೊಡ್ಡ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಪಾಕಿಸ್ತಾನಿ ಗ್ಯಾಂಗ್ ಇದಾಗಿದ್ದು, ಇನ್ಸ್ಟಾಗ್ರಾಮ್ನ Hammadmemon333 ಎಂಬ ಪಾಕಿಸ್ತಾನ್ ಗ್ಯಾಂಗ್ನ ಅಕೌಂಟ್ನಲ್ಲಿ ಆರೋಪಿ ಸಂಪರ್ಕದಲ್ಲಿದ್ದ. ತನ್ನ ಆಧಾರ್ ಕಾರ್ಡ್ ಎಲ್ಲ ಕೊಟ್ಟು ಅಕೌಂಟ್ಗೆ ಲಾಗಿನ್ ಆಗಿದ್ದ. ಕಳೆದ 2 ವರ್ಷಗಳಿಂದ ಈ ಗುಂಪಿನೊಂದಿಗೆ ಇನ್ಸ್ಟಾ ಖಾತೆ ಮೂಲಕ ಕನೆಕ್ಷನ್ ಹೊಂದಿದ್ದ ಎಂದು ಹೇಳಲಾಗಿದೆ.
ಈ ಇನ್ಸ್ಟಾಗ್ರಾಂ ಅಕೌಂಟ್ ಮೂಲಕ ಆಪರೇಟ್ ಮಾಡಿಸಿ, ಅಂದುಕೊಂಡ ಕೆಲಸ ಮಾಡಿಸುವ ಪಾಕಿಸ್ತಾನ ಪಾತಾಕಿಗಳ ಈ ಗ್ಯಾಂಗ್ ಹೇಳಿದಂತೆಯೇ ಕೇರಳ ಮತ್ತು ದೆಹಲಿಗೆ ಹೋಗಿ ಟ್ರೈನಿಂಗ್ ಸಹ ಪಡೆದುಕೊಂಡು ಬಂದಿದ್ದ ಆರೋಪಿ ಅಬೂಬಕರ್, ಎಸಿ ರಿಪೇರಿ ಕೆಲಸ ಮಾಡಿಕೊಂಡು ಬೆಂಗಳೂರಿನ ಮಸೀದಿಯಲ್ಲಿ ಪಾಠ ಕೂಡ ಮಾಡ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ದ ಬಿಎನ್ಎಸ್ 113 (3), 197( 2 ) ಅಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ವಿನ ವಿಚಾರಣೆಗಾಗಿ ವಶಕ್ಕೆ ಪಡೆದು ತನಿಖೆಯನ್ನು ಚುರುಕುಗೊಳಿಸಲಾಗಿದೆ.