ಆನೇಕಲ್ : ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಬಂದಿದ್ದ ವಿವಾಹಿತೆಯನ್ನು ಪಟಾಲಮ್ಮ ಬಡಾವಣೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಪ್ರಿಯಕರನನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ನಾನಾ ಸಾಹೇಬ್ (28) ಬಂಧಿತ.
ನಾನಾ ಸಾಹೇಬ್ನ ಪ್ರೇಯಸಿ ಅಕ್ಷತಾ ಕಳೆದ ಜು.20ರಂದು ಶವವಾಗಿ ಪತ್ತೆಯಾಗಿದ್ದಳು. ಉಸಿರುಗಟ್ಟಿಸಿ ಅಕ್ಷತಾಳನನ್ನು ಕೊಲೆಮಾಡಲಾಗಿದೆ ಎಂದು ಮರಣೋತ್ತರ ಪರೀೆಯಲ್ಲಿ ಸಾಬೀತಾಗಿತ್ತು. ಆದರೆ ನಾನಾ ಸಾಹೇಬ್ ಪರಾರಿಯಾಗಿದ್ದ. ಹಾಗಾಗಿ ಆತನ ಬಂಧನಕ್ಕೆ ಇನ್ಸ್ಪೆಕ್ಟರ್ ನವೀನ್ ನೇತ್ರತ್ವದಲ್ಲಿ ತಂಡ ರಚಿಸಲಾಗಿತ್ತು.
ಪ್ರೇಮಕ್ಕೆ ಡಾನ್ಸ್ ಮೇಲಿನ ಒಲವೇ ಕಾರಣ?: ನಾನಾಸಾಹೇಬ್ ಡ್ಯಾನ್ಸ್ ಮಾಸ್ಟರ್ ಆಗಿದ್ದ. ಡಾನ್ಸ್ ಅಂದರೆ ಇಷ್ಟ ಪಡುತ್ತಿದ್ದ ಅಕ್ಷತಾಗೆ ಪತಿ ಹಾಗೂ ಇಬ್ಬರು ಮಕ್ಕಳಿದ್ದರೂ ನಾನಾಸಾಹೇಬ್ನೊಂದಿಗೆ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಪ್ರೇಮದ ವಿಚಾರ ಮನೆಯವರಿಗೆ ಗೊತ್ತಾಗಿ, ಹಿರಿಯರ ಸಮ್ಮುಖದಲ್ಲಿ ಬುದ್ಧಿವಾದವನ್ನೂ ಹೇಳಲಾಗಿತ್ತು. ಆದರೂ ಮಾತು ಕೇಳದೆ ನಾನಾಸಾಹೇಬ್ ಜತೆ ಅಕ್ಷತಾ ಮನೆ, ಮಕ್ಕಳು, ಪತಿಯನ್ನು ಬಿಟ್ಟು ಜಿಗಣಿಗೆ ಬಂದು ನೆಲೆಸಿದ್ದಳು.
ಸಂಬಳ ಕೊಡದಿರುವುದಕ್ಕೆ ಕೃತ್ಯ? : ಜಿಗಣಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದ ಅಕ್ಷತಾ ಹಾಗೂ ನಾನಾ ಸಾಹೇಬ್ ಇಬ್ಬರೂ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ತಲಾ ಹನ್ನೆರಡು ಸಾವಿರ ಸಂಬಳ ಬರುತ್ತಿತ್ತು. ನಾಲ್ಕೈದು ಸಾವಿರ ರೂ. ಮಾತ್ರ ಖರ್ಚಿಗೆ ಇಟ್ಟುಕೊಂಡು ಅಕ್ಷತಾಳ ಸಂಬಂಳವನ್ನೂ ನಾನಾ ಸಾಹೇಬ್ ತನ್ನ ಪಾಲಕರಿಗೆ ಕಳುಹಿಸುತ್ತಿದ್ದ. ಇದರಿಂದಾಗಿ ತನ್ನ ಆಸೆ, ಅವಶ್ಯಕತೆಗಳು ಈಡೇರದೆ, ಕನಸುಗಳು ಸಾಕಾರಗೊಳ್ಳದೆ ಅಕ್ಷತಾ ಕುಗ್ಗಿದ್ದಳು. ಹೆತ್ತ ಮಕ್ಕಳನ್ನು ಬಿಟ್ಟು ಬಂದಿದ್ದು ತಪ್ಪು ಎಂದು ಆಗಲೇ ಅಕ್ಷತಾಗೆ ಅರಿವಾಗಿತ್ತು. ಇತ್ತೀಚೆಗೆ ನಾನಾ ಸಾಹೇಬ್ನಿಗೆ ಹಣ ಕೊಡಲು ಹಿಂದೆಟು ಹಾಕುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಜಗಳ ವಿಕೋಪಕ್ಕೆ ಹೋಗಿ ನಾನಾ ಸಾಹೇಬ್ ಹಲ್ಲೆ ಮಾಡಿದ್ದ. ನೆಲಕ್ಕೆ ಬಿದ್ದ ಅಕ್ಷತಾಳ ಕುತ್ತಿಯನ್ನು ವೇಲ್ನಿಂದ ಬಿಗಿದು ಕೊಲೆ ಮಾಡಿ, ದೇವರ ಹುಂಡಿ ಹಣದೊಂದಿಗೆ ದಾಖಲೆಗಳು ಹಾಗೂ ಬಟ್ಟೆಗಳನ್ನು ತೆಗೆದುಕೊಂಡು ಪರಾರಿ ಆಗಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ.
ಹಿಂದೂ ಕಾರ್ಯಕರ್ತರ ಮನವಿ : ಕಳೆದ ಒಂದು ವಾರದಿಂದ ನಾನಾ ಸಾಹೇಬ್ ಬಂಧನಕ್ಕಾಗಿ ಸಂಘ ಪರಿವಾರ ಹಾಗೂ ಹಿಂದೂ ಕಾರ್ಯಕರ್ತರು ಜಿಗಣಿ ಪೊಲೀಸರಿಗೆ ನಿರಂತರವಾಗಿ ಮನವಿ ಮಾಡಿಕೊಂಡು ಬಂದಿದ್ದರು. ಇದೊಂದು ಲವ್ ಜಿಹಾದ್ಆಗಿದ್ದು ಆರೋಪಿಯನ್ನು ಬಂಧಸಿ, ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.