Accused arrested for mobile phone theft 
ರಾಜ್ಯ

ಮೊಬೈಲ್​ ಕಳವು ಆರೋಪಿ ಬಂಧನ

ಕೋಲಾರ: ಫ್ಲಿಪ್​ಕಾರ್ಟ್​ನಲ್ಲಿ ಕಂಪನಿಯಲ್ಲಿ ಮೊಬೈಲ್​ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 2.60 ಲಕ್ಷ ಮೌಲ್ಯದ 10 ಮೊಬೈಲ್​ಗಳನ್ನು ಮಾಲೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾಲೂರು ತಾಲೂಕು ಮಾದನಹಟ್ಟಿ ಸಮೀಪದ ಫ್ಲಿಪ್​ಕಾರ್ಟ್​ ಕಂಪನಿಯಲ್ಲಿ ಕೆಲ ದಿನಗಳಿಂದ ಮೊಬೈಲ್​ಗಳು ಕಳವು ಆಗುತ್ತಿದ್ದವು, ಈ ವಿಚಾರವು ಸಿಬ್ಬಂದಿಯಲ್ಲಿ ಆತಂಕ ಮೂಡಿಸಿತ್ತು.
ಈ ಕುರಿತು ಕೆಲ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಗುಪ್ತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಅಲ್ಲೆ ಕೆಲಸ ಮಾಡುತ್ತಿದ್ದ ವಿಶ್ವಾಸ್​ ಎನ್ನುವವನ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ತಪು$್ಪ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.