Accident while going to a friend's funeral 
ರಾಜ್ಯ

ಸ್ನೇಹಿತನ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದಾಗ ಅಪಘಾತ

ಚಿಕ್ಕಬಳ್ಳಾಪುರ ಡೆಸ್ಕ್
ಚಿಕಿತ್ಸೆ ಫಲಿಸದೆ ಅಂಚೆ ಇಲಾಖೆ ನೌಕರ ಸಾವು
ಚಿಂತಾಮಣಿ: ಸ್ನೇಹಿತನ ಅಂತ್ಯಸಂಸ್ಕಾರಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನಗರದ ಕೆ.ಜಿ.ಎನ್​ ಬಡಾವಣೆಯ ನಿವಾಸಿ, ಅಂಚೆ ಇಲಾಖೆ ನೌಕರ ಕೃಷ್ಣಪ್ಪ (60) ಚಿಕಿತ್ಸೆ ಫಲಿಸದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಹಿನ್ನೆಲೆ: ಚಿಂತಾಮಣಿ & ಮದನಪಲ್ಲಿ ರಸ್ತೆಯ ಲಕ್ಷ್ಮೀಪುರದಲ್ಲಿ ಸ್ನೇಹಿತರೊಬ್ಬರು ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಗೆ ಕೃಷ್ಣಪ್ಪ ಬೈಕ್​ನಲ್ಲಿ ಭಾನುವಾರ ತೆರಳುತ್ತಿರುವಾಗ ಬೈಕ್​ ಹಿಂಭಾಗದ ಟಯರ್​ ಸಿಡಿದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ತಲೆ, ಮತ್ತಿತರ ಭಾಗಗಳಿಗೆ ತೀವ್ರ ಪೆಟ್ಟಾದುದರಿಂದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಕೃಷ್ಣಪ್ಪ ತಾಲೂಕಿನ ಇರಗಂಪಲ್ಲಿ ಅಂಚೆ ಕಚೇರಿಯಲ್ಲಿ ಕೆಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದರ ಜತೆಗೆ ಅಂಚೆ ಇಲಾಖೆಯ ಗ್ರಾಮೀಣ ಡಾಕ್​ ಸೇವಾ ಸಂಟನೆ ಜಿಲ್ಲಾಧ್ಯಕ್ಷರಾಗಿದ್ದರು. ಶ್ರೀನಿವಾಸಪುರ ತಾಲೂಕಿನ ಗೌನಪಲ್ಲಿ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಮವಾರ ಮರಣೋತ್ತರ ಪರೀೆ ನಡೆದಿದೆ. ಎನ್​ಎನ್​ಟಿ ದೇವಾಲಯದ ಬಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
ಕೃಷ್ಣಪ್ಪ