ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು 
ರಾಜ್ಯ

ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು
  • ನಿಪ್ಪಾಣಿ ಪಟ್ಟಣದಲ್ಲಿ ನಡೆದ ಘಟನೆ
  • ನಿಪ್ಪಾಣಿ ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಟ್ರ್ಯಾಕ್ಟರ್ ನಿಂದ ಬಿದ್ದು ವ್ಯಕ್ತಿ ಸಾವು
ನಿಪ್ಪಾಣಿ: ಪಟ್ಟಣದ ಹೊರವಲಯದ ಜತ್ರಾಟವೆಸ್ ಬಳಿ ನಿಪ್ಪಾಣಿ ಚಿಕ್ಕೋಡಿ ರಸ್ತೆಯಲ್ಲಿ ಮಂಗಳವಾರ ಚಿಕ್ಕೋಡಿ ತಾಲೂಕಿನ ಹಿರೇಕೊಡಿ ಗ್ರಾಮದ ಟಾಂಗ್ಯಾನಕೊಡಿ ನಿವಾಸಿ ರಾಜು ರಾಮ ಮಾಳಿ (35) ಟ್ರಾಕ್ಟರ್‌ನಿಂದ ಬಿದ್ದು ಸ್ಥಳದಲ್ಲಿಯೇ ಆಯ್ಕೆಯಾಗಿದ್ದಾರೆ.
ಟ್ರ್ಯಾಕ್ಟರ್ ಚಾಲಕ ಅಮೋಲ ಗಂಗಾಳೆ ಜತೆಗೂಡಿ ನಿಪ್ಪಾಣಿ ಕಡೆಯಿಂದ ಚಿಕ್ಕೋಡಿಯತ್ತ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ದೂರು ದಾಖಲಿಸಿಕೊಂಡಿರುವ ನಿಪ್ಪಾಣಿಯ ಬಸವೇಶ್ವರ ಚೌಕ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.