ರಾಜ್ಯ

ಕಡೆಚೂರು ಬಾಡಿಯಾಳ ಕೆಮಿಕಲ್ ಕಂಪನಿಯಲ್ಲಿ ಅವಘಡ : ಮೂವರು ಕಾರ್ಮಿಕರು ಉಸಿರು ಗಟ್ಟಿ ಸಾವು

ಪ್ರಮುಖ ಮುಖ್ಯಾಂಶಗಳು

  • ಗಂಭೀರ ಗಾಯಗೊಂಡ ಮೂವರು ರಿಮ್ಸ್ ಆಸ್ಪತ್ರೆಗೆ ದಾಖಲು
  • ಸ್ಥಳಕ್ಕೆ ಎಸ್ ಪಿ ಪೃಥ್ವಿಕ್ ಶಂಕರ ಭೇಟಿ
ಯಾದಗಿರಿ: ಗುರುಮಠಕಲ್ ತಾಲೂಕಿನ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಡೆಚೂರ-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಅನಿಲ ಸೋರಿಕೆಯಾಗಿ ಸಂಭವಿಸಿದ ಅವಘಡದಿಂದಾಗಿ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

"

ಸಿಲ್ ಲ್ಯಾಬೋರೇಟರೀಸ್ ಪ್ರೈ.ಲಿಮಿಟೆಡ್ " ಈ ಹೆಸರಿನ ರಾಸಾಯಿನಿಕ ಕಂಪನಿಯಲ್ಲಿ ಕೆಮಿಕಲ್ ಸೋರಿಕೆಯಿಂದಾಗಿ ಮೂರು ಕಾರ್ಮಿಕರು ಉಸಿರು ಗಟ್ಟಿ ವಿಕ್ರಮಸಿಂಗ್, ಸಂಜಯಸಿಂಗ್ ಹಾಗೂ ಗಣೇಶ ಎಂಬುವರು ಮೃತಪಟ್ಟಿದ್ದಾರೆ. ಸತ್ತವರಲ್ಲಿ ಇಬ್ಬರು ಉತ್ತರ ಭಾರತದವರು, ಒಬ್ಬ ತೆಲಂಗಾಣದವನು ಎಂದು ತಿಳಿದು ಬಂದಿದೆ

.

ಗಾಯಗೊಂಡ ಮೂವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಘಟನಾ ಸ್ಥಳಕ್ಕೆ ಎಸ್ ಪಿ ಪೃಥ್ವಿಕ್ ಶಂಕರ್ ಸೇರಿದಂತೆಯೇ ಡಿವೈಎಸ್ ಪಿ, ಸೈದಾಪುರ ಸಿಪಿಐ,ಪಿಎಸ್ ಐ ಅವರುಗಳು ಭೇಟಿ ನೀಡಿದ್ದಾರೆ.