ಗುಳೇದಗುಡ್ಡದ ಬಾಲಕರ ಸರ್ಕಾರಿ ಪ ಪೂ ಕಾಲೇಜು ಮೈದಾನದಲ್ಲಿ ಜರುಗಿದ ವಲಯ ಮಟ್ಟದ ಕ್ರೀಡಾಕೂಟವನ್ನು ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಉದ್ಘಾಟಿಸಿದರು. ಎಂ.ಪಿ. ಮಾಗಿ, ವೈ.ಆರ್. ಹೆಬ್ಬಳ್ಳಿ, ಗೋಪಾಲ ಭಟ್ಟಡ ಇತರರಿದ್ದರು. 
ರಾಜ್ಯ

ಕ್ರೀಡೆಗಳಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ

ಪ್ರಮುಖ ಮುಖ್ಯಾಂಶಗಳು

  • ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹೇಳಿಕೆ
  • ಪ್ರೌಢ ಶಾಲಾ ವಿದ್ಯಾರ್ಥಿಗಳ ವಲಯ ಮಟ್ಟದ ಕ್ರೀಡಾಕೂಟ

ಗುಳೇದಗುಡ್ಡ: ಕ್ರೀಡೆಗಳು ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿವೆ. ವಿದ್ಯಾರ್ಥಿಗಳು ವಿದ್ಯಾರ್ಜನೆ ಜೊತೆಗೆ ಕ್ರೀಡಾಸಕ್ತಿ ಬೆಳೆಸಿಕೊಂಡರೆ ಭವಿಷ್ಯ ಉಜ್ವಲವಾಗುವುದು ಎಂದು ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಮತ್ತು ಶನಿವಾರ ಆಯೋಜಿಸಲಾದ ಪ್ರೌಢ ಶಾಲಾ ವಿದ್ಯಾರ್ಥಿಗಳ 17 ವರ್ಷದೊಳಗಿನ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿ, ಕ್ರೀಡೆಗಳಿಗೆ ಜಾಗತಿಕ ಮನ್ನಣೆ ಇದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿಯೇ ತಮ್ಮ ಆಸಕ್ತಿ ಬೆಳೆಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕ್ರೀಡೆಗಳಲ್ಲಿ ಭಾಗವಹಿಸಿ ವಿವಿಧ ಸ್ಪರ್ಧೆಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸೋಲು-ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಪರಸ್ಪರ ಸಹಕಾರದಿಂದ ಆಟಗಳನ್ನು ಆಡಿ ಜಯಶಾಲಿಗಳಾಗಬೇಕೆಂದು ಹೇಳಿದರು.
ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಉಪ ಪ್ರಾಚಾರ್ಯ ಎಂ.ಪಿ. ಮಾಗಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ವೈ.ಆರ್. ಹೆಬ್ಬಳ್ಳಿ ಕ್ರೀಡಾ ಜ್ಯೋತಿ ಬೆಳಗಿಸಿದರು.
ಗೋಪಾಲ ಭಟ್ಟಡ, ಕೃಷಿ ಅಧಿಕಾರಿ ಆನಂದಗೌಡ ಗೌಡರ, ಮಹೇಶ ಬಿಜಾಪುರ, ಶ್ರೀನಿವಾಸ ಇನಾನಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ. ದೊಡ್ಡಪ್ಪನವರ, ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಮಡಿವಾಳರ, ಬಾಲಕರ ಸರ್ಕಾರಿ ಪ್ರೌಢ ಶಾಲೆ ಉಪಪ್ರಾಚಾರ್ಯ ಎಂ.ಸಿ. ಮುದಕವಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಬಿ.ಎಚ್. ಹಳಗೇರಿ, ಎಚ್.ಸಿ. ಗುಡೂರ, ಎಸ್.ಎಸ್. ಎಲಿಗಾರ, ಜಗದೀಶ ಬುಳ್ಳಾ ಸೇರಿ ಎಸ್.ಡಿ.ಎಂ.ಸಿ. ಸದಸ್ಯರು ಪಾಲ್ಗೊಂಡಿದ್ದರು.
ಕ್ರೀಡಾ ಧ್ವಜರೋಹಣವನ್ನು ಎಸ್.ಎಸ್. ಉಳ್ಳಾಗಡ್ಡಿ ನಡೆಸಿಕೊಟ್ಟರು. ಸಿ.ಎಂ. ಕುರಬರ ನಿರೂಪಿಸಿ, ವಂದಿಸಿದರು, ನಂತರ ವಿವಿಧ ಸ್ಪರ್ಧೆಗಳು ಏರ್ಪಟ್ಟವು.