ಯಾದಗಿರಿಯಲ್ಲಿ ಭಾನುವಾರ ಹಮ್ಮಿಕೊಂಡ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರಡ್ಡಿ ಮುದ್ನಾಳ್​ ಬಹುಮಾನ ವಿತರಿಸಿದರು. ವಿಲಾಸ ಪಾಟೀಲ್​, ಕೆ.ಲೀಲಾಕೃಷ್ಣ, ವೈ.ಪ್ರಸಾದ, ಬಿ.ಪರಶಿವರಾವ್​, ಕೆ.ಕೆ.ರಾಮು, ಮಲ್ಲಿಕಾರ್ಜುನ ಅಂಗಡಿ ಇತರರಿದ್ದರು. 
ರಾಜ್ಯ

ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ

ಪ್ರಮುಖ ಮುಖ್ಯಾಂಶಗಳು

  • ಮಹೇಶರೆಡ್ಡಿ ಮುದ್ನಾಳ ಸಲಹೆ
  • ಎನ್​ಎಸಿ ಕ್ರೀಡಾ ಅಕಾಡೆಮಿ
ಯಾದಗಿರಿ: ಕ್ರೀಡೆಗಳಲ್ಲಿ ಸೋಲು&ಗೆಲವು ಸಮಾನವಾಗಿ ಸ್ವೀಕರಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮತಿ ಸದಸ್ಯ ಮಹೇಶರಡ್ಡಿ ಮುದ್ನಾಳ್​ ಹೇಳಿದರು. ನಗರದಲ್ಲಿ ಭಾನುವಾರ ಎನ್​ಎಸಿ ಕ್ರೀಡಾ ಅಕಾಡೆಮಿಯು 9,13 ಮತ್ತು 17 ವರ್ಷದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಬ್ಯಾಟ್ಮೆಂಟನ್​ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಸೋಲು ಗೆಲುವಿನ ಮೆಟ್ಟಿಲು ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ಸ್ಪರ್ಧಾತ್ಮಕ ಭಾವನೆಯಿಂದ ಆಟ ಆಡಬೇಕು. ದ್ವೇಷ, ಅಸೂಯೆ ಇರಬಾರದು ಎಂದು ಹೇಳಿದರು.
ಇಂತಹ ಕ್ರೀಡಾಕೂಟ ಆಯೋಜನೆ ಮಾಡಿದ ಅಕಾಡೆಮಿ ಕಾರ್ಯವನ್ನು ಶ್ಲಾಸಿದರು.ನಗರಸಭೆ ಮಾಜಿ ಅಧ್ಯ ವಿಲಾಸ ಪಾಟೀಲ್​, ಅಕಾಡೆಮಿ ಸಂಸ್ಥಾಪಕ ಕೆ.ಲೀಲಾಕೃಷ್ಣ, ವೈ.ಪ್ರಸಾದ, ಬಿ.ಪರಶಿವರಾವ್​, ಕೆ.ಕೆ.ರಾಮು, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆಯೇ ಇತರರಿದ್ದರು. ಬೆಳಗ್ಗೆ ಎಸ್​ಪಿ ಪೃಥ್ವಿಕ್​ ಶಂಕರ್​ ಕ್ರೀಡಾಕೂಟ ಉದ್ಘಾಟಿಸಿದರು.ಕ್ರೀಡಾಕೂಟದಲ್ಲಿ ರಣ್ವಿತರೆಡ್ಡಿ, ಸಮರ್ಥ ಸಜ್ಜನ್​, ಶ್ರೀವಾತ್ಸವ ಪ್ರಥಮ ಸ್ಥಾನ ಮತ್ತು ಸುದರ್ಶನ, ತನುಷ್​,ಶ್ರೀ ನಂದಾ ದ್ವೀತಿಯ ಸ್ಥಾನ ಪಡೆದರು.