Accept defeat & victory equally.
ಹುತ್ರಿದುರ್ಗ : ಎಲ್ಲ ಕ್ಷೇತ್ರದಲ್ಲೂ ಸೋಲು&ಗೆಲುವು ಸಾಮಾನ್ಯ. ಗೆದ್ದಿದ್ದೇವೆ ಎಂದು ಹಿಗ್ಗದೆ, ಸೊತ್ತಿದ್ದೇವೆ ಎಂದು ಕುಗ್ಗದೆ ಗೆಲುವಿನಡೆಗೆ ಪ್ರಯತ್ನ ನಿರಂತರವಾಗಿ ಮುಂದುವರಿಯಲಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. accept DK suresh
ತಾಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಪ್ರೌಢಶಾಲಾ ಆವರಣದಲ್ಲಿ ಕುಣಿಗಲ್ ಉತ್ಸವ&2025ರ ಪ್ರಯುಕ್ತ ಹಮ್ಮಿಕೊಂಡಿದ್ದ ಹೋಬಳಿಮಟ್ಟದ ಸೀಮಿತ ಓವರ್ಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಕುಣಿಗಲ್ ಉತ್ಸವ ತಾಲೂಕಿನ ಎಲ್ಲ ಜನರ ಹಬ್ಬ. ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಬೇಕು, ಯುವಕರು, ಹಿರಿಯ ನಾಗರಿಕರು ಎಲ್ಲರೂ ಈ ಹಬ್ಬದಲ್ಲಿ ಸೇರಬೇಕು. ಈ ಹಬ್ಬದಲ್ಲಿ ಕ್ರಿಕೆಟ್ ಮಾತ್ರವಲ್ಲ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಗಿಲ್ಲಿದಾಂಡ್, ಶಟಲ್ ಬ್ಯಾಡ್ಮಿಂಟನ್, ಸ್ವಿಮಿಂಗ್, ಮ್ಯಾರಥಾನ್ ಸೇರಿದಂತೆ ಸಾಕಷ್ಟು ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿದೆ, ಈ ಕ್ರೀಡಾ ಕೂಟದಿಂದ ಯುವಕರನ್ನು ಪ್ರೋತ್ಸಾಹಿಸುವ ಜತೆಗೆ, ಯುವಕರಿಗೆ ವೇದಿಕೆಯನ್ನು ಸೃಷ್ಟಿಸಿದೆ ಎಂದರು.
ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ನಿಂದ ಆರು ಹೋಬಳಿಯಲ್ಲಿ ಏಕ ಕಾಲದಲ್ಲಿ ಕ್ರ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, 300ಕ್ಕೂ ಅಧಿಕ ತಂಡಗಳು ಭಾಗವಹಿಸಿವೆ ಎಂದರು.