Accept defeat and victory equally.
ಕ್ರೀಡೆ ಆರೋಗ್ಯದೊಂದಿಗೆ ಬೌದ್ಧಿಕ ಶಕ್ತಿ, ಮಾನಸಿಕ ಸ್ಥೆ$ರ್ಯ, ಶಿಸ್ತು ಹಾಗೂ ನಾಯಕತ್ವ ಗುಣ ಬೆಳೆಸುತ್ತದೆ ಎಂದು ಮುಖ್ಯಶಿಕ್ಷಕ ವಿ.ಬೈರಾರೆಡ್ಡಿ ತಿಳಿಸಿದರು.
ಸೋಮನಾಥಪುರ ಮಮತಾ ವಿದ್ಯಾ ನಿಕೇತನದಲ್ಲಿ ಶನಿವಾರ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯಕ್ಕೆ ಹೆಚ್ಚು ಲಾಭವಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಬಹುದು. ಸೋಲು ಗೆಲವನ್ನು- ಸಮಾನಾಗಿ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಎನ್.ವಿ.ಬೈಯಾರೆಡ್ಡಿ ಮಾತನಾಡಿ, ಪ್ರಸ್ತುತ ದೇಶಿ ಅಟಗಳು ಮೂಲೆಗುಂಪಾಗುತ್ತಿವೆ. ದೇಶೀಯ ಆಟಗಳಿಂದ ಮನರಂಜನೆ ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ. ಪಠ್ಯೇತರ ಚಟುವಟಿಕೆಗಳ ಜತೆಗೆ ಹೊರ ಸಂಚಾರ, ಸಾಂಸತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಕಣ್ಣು, ಕಿವಿ, ಮೆದುಳು ಚುರುಕಾಗಲು ಸಹಕಾರಿಯಾಗುತ್ತದೆ ಎಂದರು.
ಶಿಕ್ಷಕರಾದ ಆನಂದ, ಎಸ್.ಆರ್.ಶಂಕರಪ್ಪ, ಶಿವರಾಮರೆಡ್ಡಿ, ರಮಾದೇವಿ ಹಾಗೂ ವಿದ್ಯಾರ್ಥಿಗಳಿದ್ದರು.