ಯಾದಗಿರಿಯಲ್ಲಿ ಭಾನುವಾರ ಆಯೋಜಿಸಿದ ಜೆಸ್ಕಾಂ ಇಲಾಖೆ ನೌಕರರ ಕ್ರೀಡಾಕೂಟದಲ್ಲಿ ಕೆಪಿಟಿಸಿಎಲï ತಂಡ ಪ್ರಥಮ, ದ್ವೀತಿಯ ಸ್ಥಾನ ಪಡೆದ ಸೈದಾಪುರ ಮತ್ತು ವಡಗೇರಾ ತಂಡಗಳಿಗೆ ಎಇ ರಾಘವೆಂದ್ರ, ಇಇ ಶಂಕರ ಗುತ್ತಿ ಬಹುಮಾನ ವಿತರಿಸಿದರು.
- ಎಇ ರಾಘವೇಂದ್ರ ಸಲಹೆ
- ಜೆಸ್ಕಾಂ ಇಲಾಖೆ ನೌಕರರ ಕ್ರೀಡಾಕೂಟ ಮುಕ್ತಾಯ
ಕ್ರೀಡಾಕೂಟದಲ್ಲಿ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಜೆಸ್ಕಾಂ ಎಇ ಡಿ.ರಾಘವೆಂದ್ರ ಹೇಳಿದರು.
ಇಲ್ಲಿನ ಜಿ¯್ಲÁ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಮುಕ್ತಾಯಗೊಂಡ ಜೆಸ್ಕಾಂ ಇಲಾಖೆ ನೌಕರರ ಸಂಘದ ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ದಿನದ ೨೪ ತಾಸು ಕೆಲಸ ಮಾಡುವ ಸಿಬ್ಬಂದಿಗೆ ಇದು ಮಾನಸಿಕವಾಗಿ ಗಟ್ಟಿಗೊಳಿಸುವ ಮಹತ್ವದ ಕ್ರೀಡೆಯಾಗಿದೆ ಎಂದರು.
ಕೆಪಿಟಿಸಿಎಲï ಇಇ ಶಂಕರ ಗುತ್ತಿ ಮಾತನಾಡಿದರು.ಎಇಇಗಳಾದ ಮಾರ್ಕಂಡೆಶ್ವರ, ಸಂಜೀವಕುಮಾರ, ಎ.ಟಿ.ರಾಠೋಡ್, ಸುರೇಖಾ ಕಟ್ಟಿಮನಿ, ಅಂಬರೀಶ, ಶಿವನಗೌಡ, ಶಾಖಾಽಕಾರಿಗಳಾದ ನಂದಕುಮಾರ, ದೇವಪ್ಪ, ಮೊಸಿನ್, ಮಲ್ಲಪ್ಪ, ಲೋಕಲï ಸಮಿತಿ ಅಧ್ಯಕ್ಷ ದೇವೇಂದ್ರಪ್ಪ, ಮೋಹನ್, ಯಾಸಿನ್, ಯಮನಪ್ಪ ಇತರರಿದ್ದರು. ಈ ವೇಳೆ ಪ್ರಥಮ ಬಹುಮಾನ ಪಡೆದ ಕೆಪಿಟಿಸಿಎಲï ತಂಡ ಹಾಗೂ ದ್ವೀತಿಯ ಸ್ಥಾನ ಪಡೆದ ಸೈದಾಪುರ ಮತ್ತು ವಡಗೇರಾ ತಂಡಗಳಿಗೆ ಬಹುಮಾನ ವಿತರಿಸಲಾಯಿತು.