ಶ್ರೀ ಶಂಕರಾಚಾರ್ಯರಿಗೆ ಅಭಿಷೇಕ Shankaracharya
ಮಾಲೂರು: ನಗರದ ಶ್ರೀ ಶಂಕರನಾರಾಯಣಸ್ವಾಮಿ ದೇವಾಲಯದಲ್ಲಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಶಾರದಾ ದೇವಿ ಸಮೇತ ಶ್ರೀ ಶಂಕರಾಚಾರ್ಯರಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಶಂಕರಾಚಾರ್ಯರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ನಡೆಸಲಾಯಿತು. Shankaracharya
ತಾಲೂಕು ಬ್ರಾಹ್ಮಣ ಸಂಘದಿಂದ ಪಿಯುಸಿಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪದಾಧಿಕಾರಿಗಳಾದ ಪವನ್, ಶ್ರೀನಿವಾಸ್ಮೂರ್ತಿ, ಶಾಮಲಾ, ಗೌರಿ, ಸುಬ್ಬಲಕ್ಷಿ$್ಮ, ಎನ್.ಎಸ್.ಸುಬ್ರಹ್ಮಣ್ಯಂ, ಜಯರಾಮ್ ಇದ್ದರು.