ಪ್ರಮುಖ ಮುಖ್ಯಾಂಶಗಳು
ಆರೋಗ್ಯಕರ ಜೀವನಕ್ಕೆ ಆಯುರ್ ಗ್ರಾಮ ಕಾರ್ಯಕ್ರಮ ಸಹಕಾರಿ
| ಪ್ರಾಂಶುಪಾಲ ಡಾ.ಕಿರಣಕುಮಾರ ಮುತ್ನಾಳಿ ಹೇಳಿಕೆ| ಚಿಂಚಣಿಲಿ ಆರೋಗ್ಯ ಸಪ್ತಾಹ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಸಾರ್ವಜನಿಕರಲ್ಲಿ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವಲ್ಲಿ ಆಯುರ್ಗ್ರಾಮ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ,ಪ್ರಾಂಶುಪಾಲ ಡಾ.ಕಿರಣಕುಮಾರ ಮುತ್ನಾಳಿ ತಿಳಿಸಿದರು.
ತಾಲ್ಲೂಕಿನ ಚಿಂಚಣಿ ಅಲ್ಲಮಪ್ರಭು ಮಠದಲ್ಲಿ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವತಿಯಿಂದ ಈಚೆಗೆ ಏರ್ಪಡಿಸಲಾಗಿದ್ದ ಆಯುರ್ಗ್ರಾಮ 3.0 ಇಂದ್ರಿಯ ಆರೋಗ್ಯ ಸಪ್ತಾಹದ ೨ನೇ ಸುತ್ತಿನ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.
ಕಣ್ಣು, ಕಿವಿ, ಮೂಗು ,ನಾ,ಚರ್ಮದ ಆರೋಗ್ಯ ಮತ್ತು ರಕ್ಷಣೆಯನ್ನು ಉತ್ತೇಜಿಸುವ ಕಾರ್ಯಕ್ರಮದ ಉದ್ದೇಶವಾಗಿದೆ. ಇಂದ್ರಿಯ ಆರೋಗ್ಯ ಜಾಗೃತಿ, ಮನೆ-ಮನೆ ಸಮೀಕ್ಷೆ, ಆರೋಗ್ಯ ತಪಾಸಣೆ, ಆರೋಗ್ಯ ಶಿಕ್ಷಣ, ಯೋಗ, ಜೀವನಶೈಲಿ ಮಾರ್ಗದರ್ಶನ ಮತ್ತು ಇತರ ಆರೋಗ್ಯ ಚಟುವಟಿಕೆಗಳ ಕುರಿತು ವಿವರಿಸಿ, ಗ್ರಾಮಸ್ಥರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಆಯುರ್ವೇದದ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಕರೆ ಮಾಡಿ.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಎಲ್. ಪಾಟೀಲ, ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿ ಮಹಾಂತೇಶ ಗುಡ್ನವರ, ಉಪನ್ಯಾಸಕ ಡಾ.ಬಿ.ಬಿ.ದೇಸಾಯಿ, ಡಾ.ರವಿ ಮಡಿವಾಳರ, ಡಾ.ಶ್ರೀಧರ ಲಕ್ಕುಂಡಿ, ಡಾ. ಸೂರಜ್ ಕುಂಬಾರ, ಡಾ.ಕಾಂಚನಾ ಶರಗಾರ ಹಾಗೂ ಸುದರ್ಶನ ಭಟ್ ಇದ್ದರು