ಅರಸೀಕೆರೆ ನಗರದ ಗಾಂಧಿ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪಿಸಲು ಮೆರವಣಿಗೆ ಮೂಲಕ ಕರೆತರುತ್ತಿರುವುದು. ಕೆ.ಎಂ.ಶಿವಲಿಂಗೇಗೌಡ, ರವೀಂದ್ರನಾಥ್,ನಾಗಭೂಷಣ್,ಬಾಬು, ಕಿರಣ್, ದರ್ಶನ್ ಇತರರಿದ್ದರು. 
ರಾಜ್ಯ

ವಿನಾಯಕನಿಗೆ ಮುತ್ತೈದೆಯರಿಂದ ಆರತಿ ಸ್ವಾಗತ

ಪ್ರಮುಖ ಮುಖ್ಯಾಂಶಗಳು

  • ಗಣೇಶ ಮೂರ್ತಿಯನ್ನು ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಯಿತು
  • ಗರುಡನಗಿರಿ ರಸ್ತೆಯಲ್ಲಿರುವ ಕಲಾವಿದ ಹಾರನಹಳ್ಳಿ ಮಹದೇವ್ ಅವರ ನಿವಾಸ
ಅರಸೀಕೆರೆ: ನಗರದ ಗಾಂಧಿ ಮೈದಾನಕ್ಕೆ ಹೊಂದಿಕೊಂಡಂತಿರುವ ಸುಸಜ್ಜಿತ ಪೆಂಡಾಲಿನಲ್ಲಿ ಭಕ್ತರ ಜಯಘೋಷದೊಂದಿಗೆ ಗಣೇಶ ಮೂರ್ತಿಯನ್ನು ಸಂಪ್ರದಾಯದಂತೆ ಪ್ರತಿಷ್ಠಾಪಿಸಲಾಯಿತು.
ಗರುಡನಗಿರಿ ರಸ್ತೆಯಲ್ಲಿರುವ ಕಲಾವಿದ ಹಾರನಹಳ್ಳಿ ಮಹದೇವ್ ಅವರ ನಿವಾಸದಿಂದ ಟ್ರ್ಯಾಕ್ಟರ್ ಮೂಲಕ ಸಕಲ ಮಂಗಳವಾದ್ಯ ಗಳೊಂದಿಗೆ ಪೇಟೆಬೀದಿ ಮೂಲಕ ಪೆಂಡಾಲಿಗೆ ಕರೆತರಲಾಯಿತು.ಭಕ್ತ ಸಮೂಹದ ಜಯಘೋಷದ ನಡುವೆ ಭಕ್ತ ಮಂಡಳಿ ಸದಸ್ಯರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಕಾರ್ಯ ವಿದ್ಯುಕ್ತವಾಗಿ ನೆರವೇರಿತು.
ಗಣೇಶ ಮೂರ್ತಿಯನ್ನು ಕರೆತರುವ ಮಾರ್ಗ ಮಧ್ಯೆ ರಸ್ತೆಗಳನ್ನು ರಂಗೋಲಿ ಹಾಕಿ ತಳಿರು,ತೋರಣಗಳಿಂದ ಶೃಂಗರಿಸಲಾಗಿತ್ತು. ಮುತ್ತೈದೆಯರು ಆರತಿ ಮಾಡಿ ವಿನಾಯಕನನ್ನು ಸಂಭ್ರಮದಿಂದ ಬರಮಾಡಿಕೊಂಡರು. ಧಾರ್ಮಿಕ ವಿಧಿ-ವಿಧಾನಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 85ನೇ ವರ್ಷದ ಗಣೇಶ ವಿಸರ್ಜನಾ ಮಹೋತ್ಸವ ನ.22ರಂದು ರಂದು ಭಾನುವಾರ ಕಂತೇನಹಳ್ಳಿ ಕೆರೆಯಲ್ಲಿ ಜರುಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ, ಗಣಪತಿ ಮಂಡಳಿ ಅಧ್ಯಕ್ಷ ರವೀಂದ್ರನಾಥ, ಕಾರ್ಯದರ್ಶಿ ಎಸ್‌ಬಿಟಿ ಬಾಬು , ಖಜಾಂಚಿ ನಾಗಭೂಷಣ್ ,ಎಂ.ಆರ್. ವೆಂಟಮುನಿ, ಕರವೇ ನಗರಾಧ್ಯಕ್ಷ ಕಿರಣ್ ಕುಮಾರ್, ದರ್ಶನ್, ವೆಂಕಟೇಶ್,ಪೃಥ್ವಿನಾಯ್ಕಿ, ಯಾದಾಪುರ ತೇಜಸ್, ನಾಗರಾಜ್ ಸೇರಿದಂತೆ ಗಣಪತಿ ಭಕ್ತಮಂಡಳಿ ಪದಾಧಿಕಾರಿಗಳು ಒಗೊಂಡಂತೆ ಸಂಘ, ಸಂಸ್ಥೆಗಳ ಮುಖಂಡರು ಗಣಪತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.