ನಗರದ ಆರ್.ಸಿ.ಕಾಲೇಜಿನ ಬಳಿ ವಿದ್ಯಾರ್ಥಿಗಳಿಂದ ಸಹಿ ಸಂಗ್ರಹ ಮಾಡಿದ ಆಮ್ ಆದ್ಮಿ ಪಕ್ಷದ ಯುವ ಘಟಕ  
ರಾಜ್ಯ

ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸ್ ನೀಡುಂತೆ ಎಎಪಿ ಆಗ್ರಹ: ಯುವ ಘಟಕದಿಂದ ಸಹಿ ಸಂಗ್ರಹ ಅಭಿಯಾನ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ  ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಯುವ ಘಟಕವು ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಹಿ ಸಂಗ್ರಹಸುವ ಮೂಲಕ  ಅಭಿಯಾನವಕ್ಕೆ ಇಂದು ಚಾಲನೆ ನೀಡಿದರು.
ದುಬಾರಿ ವೆಚ್ಚದ ನಮ್ಮ ಮೆಟ್ರೋದಿಂದಾಗಿ ವಿದ್ಯಾರ್ಥಿ ಸಮೂಹ ಸಂಪೂರ್ಣ ಮೆಟ್ರೋ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಜತೆಗೆ ವಿದ್ಯಾರ್ಥಿಗಳೂ ಬೆಂಗಳೂರಿನ ಸಂಚಾರ  ಒತ್ತಡಗಳಿಂದಾಗಿ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಸಾಕಷ್ಟು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಅಭಿಯಾನ ಕೈಗೊಂಡಿದ್ದೇವೆ  ಎಂದು  ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ನಗರದ ಆರ್.ಸಿ. ಕಾಲೇಜಿನ  ಬಳಿ ಅಭಿಯಾನಕ್ಕೆ ಚಾಲನೆ  ನೀಡಿ ಮಾತನಾಡಿದರು. 
 ಉತ್ತಮ ಸೌಲಭ್ಯಗಳು ಇಲ್ಲದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವು ಸಹ ಕುಸಿಯುತ್ತಿದ್ದು, ಈ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್ ಗಳನ್ನು ವಿತರಿಸಬೇಕು . ಇದಕ್ಕಾಗಿ ಸರ್ಕಾರವನ್ನು ಒತ್ತಾಯಿಸಲು ನಾವು ಲಕ್ಷಾಂತರ ವಿದ್ಯಾರ್ಥಿ ಸಮೂಹಗಳಿಂದ ಸಹಿ ಸಂಗ್ರಹಣ ಅಭಿಯಾನವನ್ನು ನಡೆಸುತ್ತಿದ್ದೇವೆ. ಆಗಲಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳ ಬೇಕು ಆಗ್ರಹಿಸಿದರು. 
  ಯುವ  ಘಟಕದ ಉಪಾಧ್ಯಕ್ಷ ಉಮೇಶ್ ಗೌಡ ಮಾತನಾಡಿ  ನಾವು ಸತತವಾಗಿ ಬೆಂಗಳೂರಿನ ಎಲ್ಲ ಶಾಲಾ ಕಾಲೇಜುಗಳ ಬಳಿ ತೆರಳಿ  ಸರ್ಕಾರದ ಮೇಲೆ ಒತ್ತಡ ತರಲು ಸಹಿ ಸಂಗ್ರಹಣೆಯನ್ನು ಮಾಡುತ್ತಿದ್ದೇವೆ. ವಿದ್ಯಾರ್ಥಿ ಸಮೂಹ ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲವನ್ನು ಈಗಾಗಲೇ ಸೂಚಿಸುತ್ತಿದ್ದಾರೆ.  ಎಲ್ಲರೂ ತಮ್ಮ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ  ಸರ್ಕಾರದ ಮೇಲೆ  ಒತ್ತಡ ತರಬೇಕು. ಪಕ್ಷಾತೀತವಾಗಿ ಎಲ್ಲ ನಾಯಕರುಗಳು ವಿದ್ಯಾರ್ಥಿಗಳ  ಅನುಕೂಲಕ್ಕೆ ಕೂಡಲೇ ಧಾವಿಸಬೇಕು  ಎಂದು ಒತ್ತಾಯಿಸಿದರು. 
  ಬೆಂಗಳೂರು ನಗರಾಧ್ಯಕ್ಷ ಓಂಕಾರ್ ಮಂಜುನಾಥ್ , ಮುಖಂಡರುಗಳಾದ ನವೀನ್ ಅಯ್ಯರ್, ಇಂದು, ಭಾನುಪ್ರಿಯ, ರೋಹಿತ್ ಸೇರಿದಂತೆ ಮತ್ತಿತರರಿದ್ದರು.