Women Safety 
ರಾಜ್ಯ

ಸಿಂಗಾಪುರದಲ್ಲಿ ತಡರಾತ್ರಿ ಏಕಾಂಗಿಯಾಗಿ ನಡೆದು ಭಾರತದಲ್ಲಿ ಇದು ಸಾಧ್ಯವೇ ಎಂದ ಯುವತಿ! ನೆಟ್ಟಿಗರ ಉತ್ತರ ಹೀಗಿತ್ತು...Women Safety

ಪ್ರಮುಖ ಮುಖ್ಯಾಂಶಗಳು

  • ಸಿಂಗಾಪುರದಲ್ಲಿ ಬೆಳಗಿನ 3 ಗಂಟಗೆ ಒಂಟಿ ಮಹಿಳೆ ನಡೆದು ಹೋದ ವಿಡಿಯೋ ವೈರಲ್​
  • ಭಾರತೀಯ ಮೂಲದ ಕೃತಿಕಾ ಜೈನ್ ಪೋಸ್ಟ್ ಮಾಡಿರುವ ವಿಡಿಯೋ
  • ಭಾರತದಲ್ಲಿ ಇದು ಸಾಧ್ಯವೇ ಎಂದ ನೆಟ್ಟಿಗರು
ಸಿಂಗಾಪುರ: ಸಿಂಗಾಪುರದಲ್ಲಿ ವಾಸಿಸುವ ಭಾರತೀಯ ಮಹಿಳೆಯೊಬ್ಬಳು ಬೆಳಗಿನ 3 ಗಂಟಗೆ ಒಂಟಿಯಾಗಿ ನಡೆದು ಹೋಗುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಸಿಂಗಾಪುರ ಮತ್ತು ಭಾರತದಲ್ಲಿ ಮಹಿಳೆಯರ ಸುರಕ್ಷತೆಯ (Women Safety) ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿರುವ ಕೃತಿಕಾ ಜೈನ್, ತನ್ನ ತಾಯ್ನಾಡಿಗೆ ಹೋಲಿಸಿದರೆ ನಾನು ವಿದೇಶದಲ್ಲಿಯೇ ಹೆಚ್ಚು ಸುರಕ್ಷಿತ ಎಂದು ಭಾವಿಸುತ್ತೇನೆ. ಸಿಂಗಾಪುರದಲ್ಲಿ ನನ್ನನ್ನು ಯಾರು ಹಿಂಬಾಲಿಸುತ್ತಿದ್ದಾರೆ, ರಾತ್ರಿ ಹೊರಗೆ ಹೋಗುವುದು ಸುರಕ್ಚಿತವೇ ಎಂದು ತಲೆಗೆ ಸಹ ಬರುವುದಿಲ್ಲ, ಆದರೆ ಈ ಸಮಯದಲ್ಲಿ ಭಾರತದಲ್ಲಿ ಒಂದು ಹೆಜ್ಜೆ ಹಾಕಲು ನನಗೆ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಬಹುಬೇಗ ವೈರಲ್​ ಆಗಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವಿಡಿಯೋದ ಕಮೆಂಟ್​ಗಳಲ್ಲಿ ಅನೇಕರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ಯುವತಿಯ ಪೋಸ್ಟ್​ಗೆ ಕಮೆಂಟ್​ಗಳ ಮಹಾಪೂರವೇ ಹರಿದು ಬಂದಿದ್ದು, ಭಾರತದಲ್ಲಿ ಮಹಿಳಾ ಸುರಕ್ಷತೆ ಎಷ್ಟು ಕೆಳಮಟ್ಟಿಗೆ ಇದೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಮಹಾತ್ಮ ಗಾಂಧಿಯವರು ಮಧ್ಯರಾತ್ರಿಯಲ್ಲಿ ಒಂಟಿ ಹೆಣ್ಣೊಬ್ಬಳು ರಸ್ತೆಯಲ್ಲಿ ಸುರಕ್ಷಿತವಾಗಿ ನಡೆದುಹೋದರೇ ಅಂದೇ ನಿಜವಾದ ಸ್ವಾತಂತ್ರ ದೊರೆತಂತೆ ಎಂದು ಹೇಳಿದ್ದರು, ಅದು ಇನ್ನೂ ಪೂರ್ಣಗೊಂಡಿಲ್ಲ ಎಂದು ಒಬ್ಬರು ಬರೆದರೆ, ವಿದೇಶದಲ್ಲಿ ಸ್ರ್ತೀಯರಿಗೆ ದೊರೆಯುವ ಸುರಕ್ಷತೆ ನಮ್ಮ ದೇಶದಲ್ಲಿ ದೊರೆಯಲು ಅದೇಷ್ಟು ಸಮಯಬೇಕೋ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ವಿದೇಶಗಳಲ್ಲಿ ಬೆಳಗಿನ ಜಾವ 3-4 ಗಂಟೆಯಲ್ಲಿ ಸಹ ಮಹಿಳೆಯರು ಯಾವುದೇ ಭಯ, ಅಂಜಿಕೆ ಇಲ್ಲದೇ ಒಬ್ಬರೆ ಓಡಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ರಾತ್ರಿ ಬಿಡಿ, ಬೆಳಗ್ಗೆ ತಮ್ಮ ಕೆಲಸಕ್ಕೆ ತೆರಳುವ ಮಹಿಳೆ ಸಹ ಸುರಕ್ಷಿತವಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಮಹಿಳೆಯೊಬ್ಬಳು ಪ್ರತಿಕ್ರಿಯಿಸಿದ್ದಾಳೆ.
ಇತ್ತೀಚೆಗೆ ವೈದ್ಯೆಯೊಬ್ಬಳು ತನ್ನ ಕೆಲಸವನ್ನು ಮುಗಿಸಿ ಮನೆಗೆ ಹೊರಟ್ಟಿದ್ದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಲೈಗಿಕ ದೌರ್ಜನ್ಯ ಎಸೆಗಿದ್ದ ಘಟನೆ ಬೆಂಗಳೂರಿನಲ್ಲಿ ಜರುಗಿತ್ತು. ಕೆಲ ದಿನಗಳ ಹಿಂದೆ ಒಬ್ಬಂಟಿಯಾಗಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯ ಮೇಲೆ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದರು. ಈ ರೀತಿಯ ಘಟನೆಗಳು ದಿನನಿತ್ಯ ನಡೆಯ ತೊಡಗಿದರೆ ನಾವು ಹೇಗೆ ಜೀವನ ನಡೆಸಬೇಕು ಎಂದು ಬೆಂಗಳೂರಿನ ಮಹಿಳೆಯೊಬ್ಬರು ಕಮೆಂಟ್​ ಸೆಕ್ಷನ್​ನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಭಾರತ , ಜಪಾನ್​ನನ್ನು ಹಿಂದಕ್ಕಿ ಮೂರನೇ ಆರ್ಥಿಕವಾಗಿ ಬಲಿಷ್ಟವಾದ ದೇಶ ಎಂದು ಗುರುತಿಸಿ ಕೊಳ್ಳುತ್ತಿರುವ ಹೊಸ್ತಿಲಲ್ಲಿ ನಮ್ಮ ಮನೆಯ ಹೆಣ್ಣು ಮಕ್ಕಳು ನಮ್ಮ ದೇಶದಲ್ಲಿ ಎಷ್ಟು ಸುರಕ್ಷಿತರಾಗಿದ್ದಾರೆ? ಎಂದು ಸರ್ಕಾರದ ಜತೆಗೆ ನಾಗರಿಕರಾದ ನಾವು ಸ್ವಯಂ ಚಿಂತನೆ ಮಾಡುವ ತೀವ್ರ ಅಗತ್ಯತೆ ಇದೆ,(ಎಜನ್ಸೀಸ್).