A young man who consumed marijuana was arrested.
ಚಿಂತಾಮಣಿ: ನಗರದಲ್ಲಿ ಗಾಂಜಾ ಸೇವಿಸಿದ ಮತ್ತಿನಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಯುವಕನನ್ನು ನಗರಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
ನಗರದ ಆಂಜನಿ ಬಡಾವಣೆ ಯುವಕ ಅಮಲಿನಲ್ಲಿರುವುದನ್ನು ಕಂಡ ಸ್ಥಳಿಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಈತ ನಗರದಲ್ಲಿ ಅಪರಿಚಿತರಿಂದ 100 ರೂ. ನೀಡಿ ಗಾಂಜಾ ಪಡೆದು ಸೇವನೆ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.