ದಾಖಲೆಯ 17ನೇ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಕಾವೇರಿ ನಿವಾಸದಲ್ಲಿ ಅಭಿನಂದಿಸಿದ ಸಲೀಂ ಅಹ್ಮದ್  
ರಾಜ್ಯ

ದೂರದೃಷ್ಟಿಯ, ಜನಸ್ನೇಹಿ ಬಜೆಟ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜನಕಲ್ಯಾಣವೇ ನಮ್ಮ ಗುರಿ ಎಂಬ ಧ್ಯೇಯವಾಕ್ಯದಂತೆ ದಾಖಲೆಯ 17ನೇ ಬಜೆಟ್ ಮಂಡಿಸಿದ್ದಾರೆ. ಇದು ಜವಾಬ್ದಾರಿಯುತ ಮತ್ತು ದೂರದೃಷ್ಟಿಯ ಬಜೆಟ್ ಹಾಗೂ ಜನಸ್ನೇಹಿ ಮತ್ತು ತಂತ್ರಜ್ಞಾನ ಆಧಾರಿತ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದ್ದಾರೆ.
ಇದು ಕೇವಲ ಅಂಕಿಅಂಶಗಳ ಬಜೆಟ್ ಅಲ್ಲ, ಬದಲಾಗಿ ಜನರ ಬದುಕನ್ನು ಬದಲಿಸುವ ಬದ್ಧತೆ. ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತಲೇ ನಾವು ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದ್ದೇವೆ. ಕೇಂದ್ರದ ತೆರಿಗೆ ಹಂಚಿಕೆಯಲ್ಲಿನ ತಾರತಮ್ಯದ ನಡುವೆಯೂ 4.48 ಲಕ್ಷ ಕೋಟಿ ರೂ. ದೊಡ್ಡ ಬಜೆಟ್ ಮುಖ್ಯಮಂತ್ರಿಗಳು ಮಂಡಿಸಿದ್ದಾರೆ.
ಮುಖ್ಯವಾಗಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳ ಭರ್ತಿ ಹಾಗೂ ನೇಮಕಾತಿ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಘೋಷಿಸಿರುವುದು ನಾಡಿನ ಯುವಕರಿಗೆ ನೇಮಕಾತಿ ಭಾಗ್ಯ ಸಿಕ್ಕಿದಂತಾಗಿದೆ. ನಮ್ಮ ಪ್ರಾಮಾಣಿಕ ಪ್ರಯತ್ನದಿಂದಾಗಿ ಬಹುದಿನದ ಬೇಡಿಕೆಯಾಗಿದ್ದ ಹುಬ್ಬಳ್ಳಿ ಹಜ್ ಭವನದ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಕಿತ್ತೂರು ಕರ್ನಾಟಕದ ಬಹುದಿನಗಳ ಕನಸು ನನಸಾಗಿದೆ.
"

ಕಿತ್ತೂರು ಕರ್ನಾಟಕದ ಬಹುದಿನಗಳ ಕನಸಾಗಿದ್ದ ಹುಬ್ಬಳ್ಳಿಯ ಹಜ್ ಭವನವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ ಮುಖ್ಯಮಂತ್ರಿ ಅವರಿಗೆ ಧನ್ಯವಾದಗಳು.

16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಬ್ಯಾನ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಹಾಗೂ ವಿದ್ಯಾರ್ಥಿಗಳಲ್ಲಿ ನಾಯಕತ್ವ ಹೊಣೆಗಾರಿಕೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಕಾಲೇಜು ಮತ್ತು ವಿವಿಗಳಲ್ಲಿ ಕಾಲೇಜು ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದೆ ಇದು ಸ್ವಾಗತಾರ್ಹ. ಒಟ್ಟಾರೆಯಾಗಿ ಈ ಬಜೆಟ್ ಜವಾಬ್ದಾರಿಯುತ ಮತ್ತು ದೂರದೃಷ್ಟಿಯ ಬಜೆಟ್ ಹಾಗೂ ಜನಸ್ನೇಹಿ ಮತ್ತು ತಂತ್ರಜ್ಞಾನ ಆಧಾರಿತ ಬಜೆಟ್ ಆಗಿದೆ ಎಂದು ಸಲೀಂ ಅಹ್ಮದ್ ಹೇಳಿದರು.