ಬೆಂಗಳೂರು : ಶ್ರೀ ಸರ್ವಧರ್ಮ ಯುವಕರ ಸೇವಾ ಸಂಘದ ವತಿಯಿಂದ ಬನಶಂಕರಿಯ ಕದಿರೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ 12ನೇ ವರ್ಷದ ಗಣೇಶೋತ್ಸವವು ವಿಜೃಂಭಣೆಯಿಂದ ನಡೆಯಿತು. ಗಣೇಶೋತ್ಸವದ ಅಂಗವಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ನಡೆದವು.
ಉತ್ಸವದಲ್ಲಿ ಭಾಗಿಯಾಗಿದ್ದ ಸಾವಿರಾರು ಮಹಿಳೆಯರಿಗೆ ಸೀರೆಗಳನ್ನು ವಿತರಿಸಲಾಯಿತು. ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವ ಮೂಲಕ ಶಿಕ್ಷಣಕ್ಕೆ ಉತ್ತೇಜನ ನೀಡಲಾಯಿತು. ಇದೇ ವೇಳೆ ಸಾವಿರಾರು ಜನರಿಗೆ ಅನ್ನದಾನ ಏರ್ಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಎಸ್‌ಎಸ್‌ಡಿ,ಆರ್‌ಪಿಐ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ. ವೆಂಕಟಸ್ವಾಮಿ, ಕಾಂಗ್ರೆಸ್ ಮುಖಂಡರಾದ ಅನಿತಾ ಶ್ರೀನಿವಾಸ್, ವಸಂತಪುರ ಸೋಮಶೇಖರ್, ಸಮಾಜಸೇವಕ ಚಂದ್ರು, ಚಾಮರಾಜಪೇಟೆ, ಎಸ್‌ಎಸ್‌ಡಿ ರಾಜ್ಯ ಖಜಾಂಚಿ ಡಾ. ಆರ್. ಚಂದ್ರಶೇಖರ,ಸಮಾಜಸೇವಕರಾದ ಕೃಷ್ಣಮೂರ್ತಿ, ರಾಜು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಸರ್ವಧರ್ಮ ಯುವಕರ ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರಶಾಂತ್, ಅಧ್ಯಕ್ಷ ನರೇಂದ್ರ ಹಾಗೂ ಕಾರ್ಯಾಧ್ಯಕ್ಷ ಮಹೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.