ಸಂಚಾರಕ್ಕೆ ಕಂಟಕವಾದ ಗಿಡ&-ಗಂಟಿ obstructs traffic
ಬೂದಿಕೋಟೆ: ಬಂಗಾರಪೇಟೆ ತಾಲೂಕು ದಿನ್ನೂರು ಮುಖ್ಯರಸ್ತೆಯಲ್ಲಿ ಗಿಡ&ಗಂಟಿಗಳು ಅತಿಯಾಗಿ ಬೆಳೆದಿದ್ದು, ರಸ್ತೆ ತಿರುವುಗಳಲ್ಲಿ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಸ್ಪಷ್ಟವಾಗಿ ಕಾಣದ ಸ್ಥಿತಿ ನಿಮಾರ್ಣವಾಗಿದ್ದು, ಬೈಕ್ ಹಾಗೂ ಇತರ ವಾಹನ ಸವಾರರು ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿದೆ.obstructs traffic
ಬೆಳಗ್ಗೆ ಮತ್ತು ಸಂಜೆ ಅಪಘಾತದ ಆತಂಕಗಳು ಹೆಚ್ಚಿದ್ದು ಈಗಾಗಲೇ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿರುವುದಾಗಿ ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ಸಂಬಂಧಪಟ್ಟ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಅಧಿಕಾರಿಗಳು ಸಮಸ್ಯೆ ಗೊತ್ತಿದ್ದರೂ ಕ್ರಮ ಕೈಗೊಳ್ಳದಿರುವುದಾಗಿ ಆರೋಪಿಸಿದರು.
ಅಧಿಕಾರಿಗಳು ತಕ್ಷಣವೇ ಗಿಡ&ಗಂಟಿ ತೆರವುಗೊಳಿಸಿ, ರಸ್ತೆ ಸುರಕ್ಷತೆಒದಗಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದರು.
2 ವರ್ಷದ ಹಿಂದೆ ಇದೇ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಒಬ್ಬ ಯುವಕ ಮೃತಪಟ್ಟ ಘಟನೆ ಇನ್ನೂ ಜನರ ಮನಸ್ಸಿನಲ್ಲಿ ಹಾಗೇ ಇದೆ. ಆ ಸಮಯದಲ್ಲಿ ಬೂದಿಕೋಟೆ ಪೊಲೀಸ್ ಠಾಣೆ ಪಿಎಸ್ಐ ಸುನಿಲ್ ಜೆಸಿಬಿ ಸಹಾಯದಿಂದ ಗಿಡ&ಗಂಟಿ ತೆರವುಗೊಳಿಸಿ ತಾತ್ಕಾಲಿಕ ಪರಿಹಾರ ಕಂಡುಕೊಂಡಿದ್ದರು. ನಂತರ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸದ ಕಾರಣ ಹೆಚ್ಚಾಗಿ ಬೆಳೆದು ನಿಂತಿವೆ.