ಹುಲಸೂರು ಹೊರವಲಯದ ತೋರಿ ಬಸವಣ್ಣ ದೇವಸ್ಥಾನದ ಪರಿಸರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಸುಧೀರ ಕಾಡಾದಿ, ಪ್ರಮುಖರಾದ ದಿಲೀಪ ವಾಲೆ, ಕಿಶನ ಗಾಯಕವಾಡ, ರೋಹಿದಾಸ ವತಾರೆ, ಸಂಜುಕುಮಾರ ರಾಸೂರೆ, ಬಾಲಾಜಿ ಇತರರಿದ್ದರು. 
ರಾಜ್ಯ

ಮನೆಗೊಂದು ಮರ ಅವಶ್ಯ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಸುಧೀರ ಕಾಡಾದಿ ಅನಿಸಿಕೆ
  • ಹುಲಸೂರಿನಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಹುಲಸೂರು: ದಿನದಿಂದ ದಿನಕ್ಕೆ ಮರಗಳ ಮಾರಣ ಹೋಮವಾಗುತ್ತಿದ್ದು, ಮರಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಮನೆಗೊಂದು ಮರ ನೆಡುವುದು ಅವಶ್ಯಕವಾಗಿದೆ ಎಂದು ತೋರಿ ಬಸವಣ್ಣ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಸುಧೀರ ಕಾಡಾದಿ ಹೇಳಿದರು.
ಪಟ್ಟಣದ ಹೊರವಲಯದ ತೋರಿ ಬಸವಣ್ಣ ದೇವಸ್ಥಾನದ ಪರಿಸರದಲ್ಲಿ ಮಂಗಳವಾರ ಜಗದ್ಗುರು ರಾಮಾನಂದಚಾರ್ಯ, ನರೇಂದ್ರಚಾರ್ಯಜಿ ಭಕ್ತ ಸೇವಾ ಸಮಿತಿ ತಾಲೂಕು ಘಟಕದಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮರಗಳು ಕಡಿಮೆಯಾಗುತ್ತಿದ್ದರಿಂದ ಬರಗಾಲ ಆವರಿಸಿದೆ. ಮಳೆ ಇಲ್ಲದೆ ಆಕಾಶದ ದತ್ತ ಮುಖ ಮಾಡುವ ಪರಿಸ್ಥಿತಿ ಉಂಟಾಗಿದೆ. ನಾವೆಲ್ಲರೂ ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಬೇಕಾಗುತ್ತದೆ ಎಂದರು.
ಪಟ್ಟಣದಲ್ಲಿ ಕೆಲ ವರ್ಷದಿಂದ ಜಗದ್ಗುರು ರಾಮಾನಂದಚಾರ್ಯ, ನರೇಂದ್ರ ಚಾರ್ಯಜಿ ಅವರ ಸೇವಾ ಸಮಿತಿ ತಾಲೂಕು ಘಟಕದಿಂದ ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಡುತಿರುವುದು ಸಂತಸ ತಂದಿದೆ ಎಂದರು.
ದೇವಸ್ಥಾನದ ಅರ್ಚಕರಾದ ಬಸವರಾಜ ಸ್ವಾಮಿ, ಅಮಿತ ಸ್ವಾಮಿ, ಸತ್ಸಂಗದ ಪ್ರಮುಖರಾದ ದಿಲೀಪ ವಾಲೆ, ಕಿಶನ ಗಾಯಕವಾಡ, ರೋಹಿದಾಸ ವತಾರೆ, ಸಂಜುಕುಮಾರ ರಾಸೂರೆ, ಬಾಲಾಜಿ ಸಾಗರ, ಉದ್ದವಗಿರ್​, ದಯಾನಂದ ಕಾರಾಗಿರ್​, ಅನಿಲ ವಾಲೆ, ರೋಹಿದಾಸ ವತಾರೆ ಇತರರಿದ್ದರು. ಪಟ್ಟಣದ ಇಸಂಪಲ್ಲಿ ಭವಾನಿ ದೇವಸ್ಥಾನದ ಆವರಣ, ಸರ್ಕಾರಿ ಪ್ರೌಢಶಾಲೆ ಆವರಣ, ಗೋವರ್ಧನ ತಾಂಡಾದ ಸಾರ್ವಜನಿಕ ಸ್ಥಳಗಳಲ್ಲಿ ಸೇರಿ ವಿವಿಧಡೆ 400 ಹೆಚ್ಚು ಸಸಿಗಳನ್ನು ನೆಡಲಾಯಿತು.