ಯಾದಗಿರಿಯಲ್ಲಿ ಸೋಮವಾರ ನಡೆದ ಪಂ.ದೀನದಯಾಳ್​ ಉಪಾಧ್ಯಾಯ ಪ್ರಶಿಣ ಮಹಾಭಿಯಾನದ ಸಮಾರೋಪದಲ್ಲಿ ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್​ ಮಾತನಾಡಿದರು. ಕರಣಾಕರ ಖಾಸಲೆ, ವೆಂಕಟಪ್ರಸಾದ ಮಾಲಿ ಪಾಟೀಲ್​, ಶರಣಪ್ಪ ತಳವಾರ, ಮಹೇಶರಡ್ಡಿ ಮುದ್ನಾಳ್​, ದೇವದಾಸ ಗುರುಮಠಕಲ್​, ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ ಇತರರಿದ್ದರು. 
ರಾಜ್ಯ

ಹೊಸ ಚೈತನ್ಯ ತುಂಬಿದ ಪ್ರಶಿಕ್ಷಣ ವರ್ಗ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಎಂಎಲ್​ಸಿ ಅಮರನಾಥ ಪಾಟೀಲ್​ ಅಭಿಮತ
  • ಯಾದಗಿರಿಯಲ್ಲಿ ಸಮಾರೋಪ
ಯಾದಗಿರಿ: ಕಳೆದ ಎರಡು ದಿನಗಳಿಂದ ಪದ ಸೈದ್ಧಾಂತಿಕ ಹಿನ್ನೆಲೆ, ಸಂನಾತ್ಮಕ ಮೌಲ್ಯ ಹಾಗೂ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ತಳಮಟ್ಟದ ಜನಸಾಮಾನ್ಯರಿಗೆ ಮುಟ್ಟಿಸುವ ನಿಟ್ಟಿನಲ್ಲಿ ನಡೆದ ವಿವಿಧ ವೈಚಾರಿಕ ಗೋಷ್ಠಿಗಳು ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಹಾಗೂ ಸಕಾರಾತ್ಮಕ ಶಕ್ತಿ ತುಂಬಿದೆ ಎಂದು ವಿಧಾನ ಪರಿಷತ್​ ಮಾಜಿ ಸದಸ್ಯ ಅಮರನಾಥ ಪಾಟೀಲ್​ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಪಂ.ದೀನದಯಾಳ್​ ಉಪಾಧ್ಯಾಯ ಪ್ರಶಿಣ ಮಹಾಭಿಯಾನದ ಸಮಾರೋಪದಲ್ಲಿ ಮಾತನಾಡಿದ ಅವರು, ಪಂ.ದೀನದಯಾಳ್​ ಉಪಾಧ್ಯಾಯ ಅವರ ಏಕಾತ್ಮ ಮಾನವತಾವಾದ ಮತ್ತು ಅಂತ್ಯೋದಯದ ಚಿಂತನೆಗಳನ್ನು ಮುಂದಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಸಂಟನೆ ಮತ್ತಷ್ಟು ತಳಮಟ್ಟದಿಂದ ಬಲಿಷ್ಠಗೊಳಿಸಲು ನಾವೆಲ್ಲರೂ ಸಂಕಲ್ಪ ತೊಟ್ಟಿದ್ದೇವೆ ಎಂದರು.
ಎರಡು ದಿನಗಳ ಕಾಲ ಶಿಸ್ತು ಮತ್ತು ಬದ್ಧತೆಯಿಂದ ಶಿಬಿರದಲ್ಲಿ ಪಾಲ್ಗೊಂಡು ಪ್ರಶಿಣ ಪಡೆದ ಜಿಲ್ಲೆಯ ಸಮಸ್ತ ನಿಷ್ಠಾವಂತ ಕಾರ್ಯಕರ್ತ ಬಂಧುಗಳಿಗೆ ಹಾಗೂ ಈ ಮಹಾಭಿಯಾನವನ್ನು ಯಶಸ್ವಿಗೊಳಿಸಿದ ಸಂಟನಾ ಸಮಿತಿಗೆ ಧನ್ಯವಾದ ತಿಳಿಸಿದರು.
ಈ ವೇಳೆ ಬಿಜೆಪಿ ರಾಜ್ಯ ಮಾಧ್ಯಮ ಸಂಚಾಲಕ ಕರಣಾಕರ ಖಾಸಲೆ, ರಾಜ್ಯ ಸಮಿತಿ ಸದಸ್ಯ ವೆಂಕಟಪ್ರಸಾದ ಮಾಲಿಪಾಟಿ, ವಿಭಾಗ ಸಹ ಪ್ರಭಾರಿ ಶರಣಪ್ಪ ತಳವಾರ,ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ ಮತ್ತು ದೇವದಾಸ ಗುರಮಿಟಕಲ್​, ನಾಗರತ್ನ ಕುಪ್ಪಿ,ದೇವಿಂದ್ರನಾಥ ನಾದ, ಸಿದ್ದಣ್ಣಗೌಡ ಕಾಡಂನೊರ,ಜಿಲ್ಲಾ ಪ್ರಶಿಣ ಸಂಚಾಲಕ ಮೌನೇಶ ಬೆಳಿಗೇರ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಮಾಜಿ ನಗರಸಭೆ ಅಧ್ಯ ವಿಲಾಸ್​ ಪಾಟೀಲ್​, ಮಲ್ಲಿಕಾರ್ಜುನ ಚಿಲ್ಲಾಳ, ಎಚ್​.ಸಿ.ಪಾಟೀಲ್​, ವೆಂಕಟರೆಡ್ಡಿ ಅಬ್ಬೆತುಮಕೂರು, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊನಿಗೆರಿ, ಮೌನೇಶ ಅಯಾಳಕರ್​ ಇತರರಿದ್ದರು.ಜಿಲ್ಲಾ ಪ್ರಧಾನ ಪ್ರಧಾನ ಕಾರ್ಯದರ್ಶಿ ಶಿವರಾಜ ದೇಶಮುಖ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರುಕುಂದಿ ವಂದಿಸಿದರು.ಜಿಲ್ಲಾ ಪ್ರಧಾನ ಮೆಲ್ಲಪ್ಪ ಗುಳಗಿ ನಿರೂಪಿಸಿದರು.