ಐಕನಹಳ್ಳಿ ತಿರುವಿನ ಬಳಿ ಕಬ್ಬು ತುಂಬಿದ್ದ ಟ್ರಾೃಕ್ಟರ್ ರಸ್ತೆಯಲ್ಲಿ ಮಗುಚಿ ಬಿದ್ದಿರುವುದು.  
ರಾಜ್ಯ

ಮಗುಚಿ ಬಿದ್ದ ಕಬ್ಬು ತುಂಬಿದ್ದ ಟ್ರಾೃಕ್ಟರ್

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಐಕನಹಳ್ಳಿ ತಿರುವಿನ ಬಳಿ
  • ಕಬ್ಬು ತುಂಬಿದ್ದ ಟ್ರಾೃಕ್ಟರ್ ಮಗುಚಿ
ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ತಿರುವಿನ ಬಳಿ ಕಬ್ಬು ತುಂಬಿದ್ದ ಟ್ರಾೃಕ್ಟರ್ ಮಗುಚಿ ಬಿದ್ದ ಪರಿಣಾಮ ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು.
ರೈತ ಮಂಜೇಗೌಡ ಅವರ ಜಮೀನಿನಲ್ಲಿದ್ದ ಕಬ್ಬು ತುಂಬಿಕೊಂಡು ಹೇಮಗಿರಿ ಷುಗರ್ಸ್‌ಗೆ ಸಾಗಿಸುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗೆ ಇಳಿದ ಪರಿಣಾಮ ಟ್ರಾೃಕ್ಟರ್ ಮಗುಚಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.