ಭಾರ ಎತ್ತುವ ಸ್ಪರ್ಧೆ 
ರಾಜ್ಯ

ಮುರುಘಾಮಠ ಜಾತ್ರೆಯಲ್ಲಿ ಜಬರ್ದಸ್ತ್​ ಭಾರ ಎತ್ತುವ ಸ್ಪರ್ಧೆ

ಧಾರವಾಡ: ನಗರದ ಮುರುಘಾಮಠದ ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಾರ ಎತ್ತುವ ಸ್ಪರ್ಧೆಯು ಯಶಸ್ವಿಯಾಗಿ ಜರುಗಿತು.
ಹುಬ್ಬಳ್ಳಿ-& ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಸ್ಪರ್ಧೆಗೆ ಚಾಲನೆ ನೀಡಿದರು. ಕ್ರೀಡಾಪಟುಗಳ ಶಕ್ತಿ ಪ್ರದರ್ಶನವನ್ನು ಶ್ಲಾಘಿಸಿ, ವಿಜೇತ ಸ್ಪಧಿರ್ಗಳಿಗೆ ವೈಯಕ್ತಿಕವಾಗಿ ವಿಶೇಷ ಬಹುಮಾನಗಳನ್ನು ಘೋಷಿಸಿ ಪ್ರೋತ್ಸಾಹಿಸಿದರು. ವಿವಿಧೆಡೆಯಿಂದ ಆಗಮಿಸಿದ್ದ ಸ್ಪಧಿರ್ಗಳ ಶಕ್ತಿ ಪ್ರದರ್ಶನಕ್ಕೆ ಪ್ರ್ರೇಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಬಾದಾಮಿಯ ಹಳಗೇರಿಯ 7 ವರ್ಷದ ಬಾಲಕ ಭರತ್​ ಕಳಸಗೌಡರ 20 ಕೆಜಿ ಭಾರ ಎತ್ತಿ ಶಕ್ತಿ ಪ್ರದಶಿರ್ಸಿದ್ದು ನೋಡುಗರಿಗೆ ಖುಷಿ ನೀಡಿತು.
* ವಿಜೇತರ ವಿವರ:
ಪ್ರಥಮ ಬಹುಮಾನ: ಶಬೀಲ್​ ತೊರಗಲ್​ (95 ಕೆಜಿ), ದ್ವೀತಿಯ: ಮೌಲಸಾಬ ಚೂರಿಖನ (93 ಕೆಜಿ), ತೃತೀಯ: ಸದ್ದಾಂ ಬದರೊಳ್ಳಿ (85 ಕೆಜಿ), 4ನೇ ಸ್ಥಾನ: ಈರಪ್ಪ ಮೊರಬದ (83 ಕೆಜಿ), 5ನೇ ಸ್ಥಾನ: ಕಾಶಿನಾಥ ನರಗುಂದ (81 ಕೆಜಿ).
ಅರವಿಂದ ಏಗನಗೌಡರ ಮಹಾನಗರ, ಪಾಲಿಕೆ ಸದಸ್ಯರಾದ ರಾಜಶೇಖರ ಕಮತಿ, ಕವಿತಾ ಕಬ್ಬೆರ ಹಾಗೂ ಪ್ರಮುಖರಾದ ದೀಪಕ ಇಂಡಿ, ಈಶ್ವರ ಮಾಲಗಾರ, ಮೃತ್ಯುಂಜಯ ಸಿದ್ನಾಳ, ಈರಪ್ಪ ಗೋಡಿಕಟ್ಟಿ, ಸಿದ್ದಪ್ಪ ಕರಡಿಗುಡ್ಡ, ಮಹಾಂತೇಶ ಗೊರವನಕೊಳ್ಳ, ಶಿವಯೋಗಿ ಹಂಚಿನಾಳ, ಸೋಮಣ್ಣ ಗೋಡಿಕಟ್ಟಿ, ಮತ್ತು ಗುರುಸಿದ್ದಪ್ಪಾ ಬಾವಿಕಟ್ಟಿ ಉಪಸ್ಥಿತರಿದ್ದರು.
ಅರವಿಂದ ಏಗನಗೌಡರ ಕ್ರೀಡಾಕೂಟದ ಉಸ್ತುವಾರಿ ವಹಿಸಿದ್ದರು.