ನೆಲಮಂಗಲದ ರಂಗಶಿಕ್ಷಣ ಕೇಂದ್ರದಲ್ಲಿ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಹಿರಿಯ ಕಲಾವಿದ ಕೃಷ್ಣಪ್ಪ, ಪ್ರಾಂಶುಪಾಲೆ ಸಿ.ಎನ್​.ಸುಜಾತಾ, ಸಹಪ್ರಾಧ್ಯಾಪಕಿ ನಿವೇದಿತಾ ಅವರನ್ನು ಸನ್ಮಾನಿಸಲಾಯಿತು. ರಂಗಶಿಕ್ಷಣ ಕೇಂದ್ರದ ಅಧ್ಯಕ್ಷ ಗಂಗರಾಜು, ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು ಇತರರು ಇದ್ದರು. 
ರಾಜ್ಯ

ಸಮಾಜಕ್ಕೆ ಬೆಳಕು ಚೆಲ್ಲಿದ ರಂಗಭೂಮಿ / NELAMANGAL

ನೆಲಮಂಗಲ : ಜೀವಂತ ಕಲೆಯಾಗಿರುವ ರಂಗಭೂಮಿ ಕಲಾವಿದರಷ್ಟನ್ನೇ ಅಲ್ಲ ಸಮಾಜವನ್ನು ಬೆಳಗುತ್ತಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಸಿ.ಎಸ್​.ಸುಜಾತಾ ಅಭಿಪ್ರಾಯಪಟ್ಟರು.
ನಗರದ ರಂಗಶಿಕ್ಷಣ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಮತ್ತು ಸಂಸತಿ ಇಲಾಖೆ ವಿಶ್ವರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದರು. ವಿಶ್ವಸಂಸ್ಥೆ 1961 ರ ಮಾ.27ರಂದು ಹ್ಯಾರಿಸ್​ ದೇಶದಲ್ಲಿ ರಂಗದಿನ ಆರಂಭೀಸಿದ್ದು, ವಿಶ್ವದ ಎಲ್ಲ ದೇಶಗಳ ನಾಟಕಗಳನ್ನು ಪ್ರದರ್ಶಿಸಲಾಯಿತು. ಅಂದಿನಿಂದ ಇಂದಿನವರೆಗೂ ವಿಶ್ವ ರಂಗಭೂಮಿ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಇತ್ತೀಚಿಗೆ ಆಧುನಿಕ ತಂತ್ರಜ್ಞಾನದಲ್ಲಿ ನಾಟಕಗಳು ಜೀವಂತವಾಗಿ ಉಳಿದಿವೆ. ನಾಟಕಗಳು ಸಮಾಜದ ಕನ್ನಡಿಯಿದ್ದಂತೆ, ಸಮಾಜಕ್ಕಿರುವ ಅವಶ್ಯಕತೆಗಳು, ಬದಲಾವಣೆಗಳು ನಾಟಕಗಳು ಮಾಡುತ್ತಿವೆ. ಅದರಲ್ಲೂ ಪೌರಾಣಿಕ, ಸಾಮಾಜಿಕ ನಾಟಕಗಳು ಯಕ್ಷಗಾನದಂತ ನೃತರೂಪಕಗಳು ಮಹತ್ವದ ಸಂದೇಶ ನೀಡುತ್ತಿವೆ. ಮೇರುನಟ ಮಾಸ್ಟರ್​ ಹೀರಣಯ್ಯ, ಡಾ. ರಾಜ್​ಕುಮಾರ್​ ಅವರಂತಹ ಪ್ರಸಿದ್ಧ ನಟರು ರಂಗಭೂಮಿಯಿಂದಲೇ ಬಂದವರಾಗಿದ್ದಾರೆ. ಇಂತಹ ರಂಗಕಲೆ ಶತಮಾನಗಳ ಕಾಲ ಜೀವಂತವಾಗಿರಲೆಂದು ಹಾರೈಸಿದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಹಪ್ರಾಧ್ಯಾಪಕಿ ನಿವೇದಿತಾ ಮಾತನಾಡಿ, ಇದುವರೆಗೂ 40ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದೇನೆ. ರಂಗಕಲೆಯ ಬಗ್ಗೆ ಆಸಕ್ತಿ ಇದ್ದಲ್ಲಿ ಜ್ಞಾನ ಬೆಳೆಸಿಕೊಳ್ಳಬಹುದಾಗಿದೆ. ಪೌರಾಣಿಕ ನಾಟಕಗಳಿಂದ ಪುರಾಣಗಳನ್ನು ತಿಳಿಯಬಹುದಾಗಿದೆ. ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ಪೌರಾಣಿಕ ನಾಟಕದಲ್ಲಿ ಪ್ರಾತ್ರ ನಿರ್ವಹಿಸುವ ಮೂಲಕ ರಂಗಭೂಮಿ ಪ್ರವೇಶ ಮಾಡಲಾಯಿತು. ರಂಗಶಿಕ್ಷಣ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿ.ಸಿದ್ದರಾಜು ರಂಗಸಂದೇಶ ವಾಚನ ಮಾಡಿದರು. ತಾಲೂಕಿನ ವಜ್ರಕಟ್ಟೆಪಾಳ್ಯ ಹಿರಿಯ ರಂಗಭೂಮಿ ಕಲಾವಿದ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಪ್ರತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಪ್ಪ, ನಾಟಕ ನಿರ್ದೇಶಕ ದೇವರಾಜು, ರಂಗಶಿಕ್ಷಣ ಕೇಂದ್ರದ ಹಳೆ ವಿದ್ಯಾರ್ಥಿ ದಶರಥ ಕೀರ್ತಿ, ರಚನಾ ಇತರರು ಇದ್ದರು.