ವಡಗೇರಾದಲ್ಲಿ ಮಂಗಳವಾರ ಹಮ್ಮಿಕೊಂಡ ಬಿಜೆಪಿ ಪ್ರಶಿಕ್ಷಣ ಮಹಾಭಿಯಾನಕ್ಕೆ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಹೇಶರಡ್ಡಿಗೌಡ ಮುದ್ನಾಳ್, ಡಾ.ಶರಣಭೂಪಾಲರಡ್ಡಿ, ಸಿದ್ದಣ್ಣಗೌಡ ಕಾಡಂನೋರ, ದೇವರಾಜ ನಾಯಕ ಉಳ್ಳೆಸೂಗೂರ, ಸದಾಶಿವರಡ್ಡಿಗೌಡ ರೊಟ್ನಡಗಿ, ವೇಣುಗೋಪಾಲ ನಾಯಕ ಸುರಪುರ, ಮೌನೇಶ ಹೈಯ್ಯಾಳ್ಕರ ಶಹಾಪುರ, ಮೇಲಪ್ಪ ಗುಳಗಿ, ಪರಶುರಾಮ ಕುರಕುಂದ, ಮಲ್ಲಿಕಾರ್ಜುನ ವನಗೇರಾ ಇತರರಿದ್ದರು.
- ಮಾಜಿ ಶಾಸಕ ರಾಜಕುಮಾರ ಪಾಟೀಲ್ ಅಭಿಮತ
- ವಡಗೇರಾದಲ್ಲಿ ಬಿಜೆಪಿ ಪ್ರಶಿಕ್ಷಣ ಅಭಿಯಾನಕ್ಕೆ ಚಾಲನೆ
ವಡಗೇರಾ: ಭಾರತೀಯ ಜನತಾ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಸ್ಥಾನ&ಮಾನ ನೀಡಲಾಗುತ್ತದೆ ಎಂದು ಸೇಡಂನ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡ ಯಾದಗಿರಿ ಗ್ರಾಮೀಣ ಮಂಡಲದ ವಡಗೇರಾ, ತುಮಕೂರ, ಹೈಯಾಳ (ಬಿ), ಮಹಾಶಕ್ತಿ ಕೇಂದ್ರಗಳ ಪಂಡಿತ ದೀನದಯಾಳ ಉಪಾಧ್ಯಾಯರ 2026 ಮಂಡಲ ಬಿಜೆಪಿ ಪ್ರಶಿಕ್ಷಣ ಮಹಾಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಕ್ಷಕ್ಕಾಗಿ ದುಡಿದವರಿಗೆ ಸೂಕ್ತ ಸ್ಥಾನ ನೀಡಲಾಗುತ್ತದೆ. ಅಲ್ಲದೆ ಪಕ್ಷದಲ್ಲಿ ವ್ಯಕ್ತಿಗಿಂತ ದೇಶ ಮೊದಲು ಎಂಬುದು ನಮ್ಮ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.
ಪ್ರಶಿಕ್ಷಣ ಎನ್ನುವುದು ಪಕ್ಷದ ವಿಶೇಷತೆಯಾಗಿದ್ದು, ಇಲ್ಲಿ ಅನೇಕ ವಿಚಾರ ಕಲಿಸಲಾಗುವುದು. ನೀತಿ, ಸಿದ್ಧಾಂತ, ಶಿಸ್ತು, ಜವಾಬ್ದಾರಿಯನ್ನು ಹೇಳಿಕೊಡಲಾಗುತ್ತದೆ. ಇದರಲ್ಲಿ ಪಾಲ್ಗೊಂಡವರು ಪಕ್ಷ ಸಂಟನೆಗಾಗಿ ಬೂತ್ ಮಟ್ಟದಿಂದ ಕಾರ್ಯನಿರ್ವಹಿಸಬೇಕು ಪಕ್ಷದ ಬೆಳವಣಿಗೆಯಲ್ಲಿ ತಳಮಟ್ಟದ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಯಾವಾಗಲೂ ನ್ಯಾಯ ದೊರೆಯುತ್ತದೆ. ಹುದ್ದೆಗಾಗಿ ಓಡಾಟ ಮಾಡುವುದಕ್ಕಿಂತ ಸೇವಾಭಾವದಿಂದ ಕೆಲಸ ಮಾಡುವವರನ್ನು ಪಕ್ಷ ಗುರುತಿಸುತ್ತದೆ. ಸರಿಯಾದ ಸಮಯದಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ ಎಂಬ ಭರವಸೆ ಕಾರ್ಯಕರ್ತರಲ್ಲಿರಬೇಕು ಎಂದು ಹೇಳಿದರು.
ಬಿಜೆಪಿ ಒಂದು ಕುಟುಂಬದಂತಿದ್ದು, ಇಲ್ಲಿ ಎಲ್ಲರೂ ಸಮಾನರಾಗಿದ್ದಾರೆ. ವ್ಯಕ್ತಿಗಿಂತ ದೇಶದ ಹಿತವೇ ಮುಖ್ಯ ಎಂಬ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ದೇಶದ ಏಳಿಗೆಯೇ ನಮ್ಮ ಗುರಿಯಾಗಿರಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ತಮ್ಮ ಜವಾಬ್ದಾರಿ ಮನಗಂಡು ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಪಕ್ಷದ ಸಂಟನೆ ಇನ್ನೂ ಹೆಚ್ಚು ಬಲಪಡಿಸುವುದರ ಜತೆಗೆ ನಗರ ಮಟ್ಟದವರೆಗೆ ಪಕ್ಷವನ್ನು ಗಟ್ಟಿಗೊಳಿಸುವ ದಿಸೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮಹೇಶರಡ್ಡಿಗೌಡ ಮುದ್ನಾಳ್, ಡಾ.ಶರಣಭೂಪಾಲರಡ್ಡಿ, ಸಿದ್ದಣ್ಣಗೌಡ ಕಾಡಂನೋರ, ದೇವರಾಜ ನಾಯಕ ಉಳ್ಳೆಸೂಗೂರ, ಸದಾಶಿವರಡ್ಡಿಗೌಡ ರೊಟ್ನಡಗಿ, ವೇಣುಗೋಪಾಲ ನಾಯಕ, ಮೌನೇಶ ಹೈಯ್ಯಾಳ್ಕರ, ಮೇಲಪ್ಪ ಗುಳಗಿ, ಪರಶುರಾಮ ಕುರಕುಂದ, ಮಲ್ಲಿಕಾರ್ಜುನ ವನಗೇರಾ, ದೇವಿಂದ್ರ ಕೋನೇರ, ಬಸವರಾಜ ಸೊನ್ನದ, ಗುರು ಪಾಟೀಲ್ ಯಂತಿ, ರಾಜಶೇಖರ ಕಾಡಂನೋರ, ಮೌನೇಶ ಬೆಳಿಗೇರಾ, ಶಿವಕುಮಾರ ಕೊಂಕಲ್, ನಾಗರಡ್ಡಿ ಇಬ್ರಾಹಿಂಪುರ, ಪರ್ವತರಡ್ಡಿ ಬೆಂಡೆಬೆಂಬಳಿ, ರಾಚಣ್ಣಗೌಡ ಮುದ್ನಾಳ್, ಶರಣಗೌಡ ಐಕೂರ, ಮಾಜಿ ತಾಪಂ ಅಧ್ಯೆ ನಿಂಗಮ್ಮ ನಾಟೇಕಾರ, ಶಂಕ್ರಪ್ಪಗೌಡ ಗೋನಾಲ್, ವೀರುಪಾಕ್ಷಪ್ಪಗೌಡ, ಮೋಹನರಡ್ಡಿ, ವಾಲ್ಮೀಕಿ ನಾಯಕ, ಹಣಮಂತ್ರಾಯ ದೊರೆ, ಲಿಂಗಣ್ಣ ಹೈಯ್ಯಾಳ, ಮಲ್ಲಿಕಾರ್ಜುನ ಬಂಗಿ ಸೇರಿ ಅನೇಕ ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.