83ನೇ ಅಖಿಲ ಹವ್ಯಕ ಮಹಾಸಭೆಯ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಡಾ.ಗಿರಿಧರ ಕಜೆ ಮಾತನಾಡಿದರು. ಪದಾಧಿಕಾರಿಗಳು ಉಪಸ್ಥಿತರಿದ್ದರು.  
ರಾಜ್ಯ

ಮಹಿಳೆಯರು, ಯುವಕರ ಸಂಘಟನೆಯಿಂದ ಬಲಿಷ್ಠ ಸಮಾಜ ಸಾಧ್ಯ; ಡಾ. ಕಜೆ ಅಭಿಮತ

83ನೇ ವಾರ್ಷಿಕ ಅಖಿಲ ಹವ್ಯಕ ಮಹಾಸಭೆ

ಬೆಂಗಳೂರು : ಸಂಘಸಂಸ್ಥೆಗಳು ಸಕ್ರಿಯವಾಗಿದ್ದಾಗ ಸಮಾಜದಿಂದ ಸಹಜವಾಗಿ ಬೆಂಬಲ ವ್ಯಕ್ತವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರ ಮತ್ತು ಯುವಕರ ಸಂಘಟೆನೆಯಿಂದ ಬಲಿಷ್ಠ ಸಮಾಜ ನಿರ್ಮಾನ ಸಾಧ್ಯಎಂದು ಹವ್ಯಕ ಮಹಾಸಣೆಯ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದರು.

ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಶುಕ್ರವಾರ ನಡೆದ ಅಖಿಲ ಹವ್ಯಕ ಮಹಾಸಭೆಯ 83ನೆಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಸಮಾಜವು ನಮ್ಮನ್ನು ಗುರುತಿಸುತ್ತದೆ. ಅದರಿಂದ ನಾವು ಹೆಚ್ಚು ಜನರನ್ನು ತಲುಪಲು ಸಾಧ್ಯ. ಹವ್ಯಕ ಮಹಾಸಭೆಯು ಈ ದಿಶೆಯಲ್ಲಿ ಪ್ರಾದೇಶಿಕವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಜಾತಿಯನ್ನೂ ಮೀರಿ ಸಮಷ್ಟಿ ಸಮಾಜಕ್ಕೆ ಉಪಕಾರಿಯಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಹಿಳೆಯರು ಸಕ್ರಿಯರಾದಾಗ ಸಮಗ್ರ ಸಮಾಜದ ಜಾಗೃತಿ ಸಾಧ್ಯ. ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಯನ್ನು ಬಲಗೊಳಿಸಲಾಗುತ್ತಿದ್ದು, ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿರುವ 83 ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಯನ್ನು ಪ್ರಾರಂಭಿಸಲಾಗುತ್ತಿದೆ. ಡಿ.20ಕ್ಕೆ ಬೃಹತ್ ಹವ್ಯಕ ಮಹಿಳಾ ಸಮಾವೇಶವನ್ನು ಆಯೋಜಿಸಲಾಗುವುದು. ಮುಂದಿನ ವರ್ಷ ಯುವಕರ ಸಂಘಟನೆಗೆ ಯೋಜಿಸಲಾಗಿದ್ದು, ದೇಶ - ಹೊರದೇಶಗಳ 84 ಪ್ರಾಂತ್ಯಗಳಲ್ಲಿ ಹವ್ಯಕ ಯುವ ವೇದಿಕೆ ಕಾರ್ಯಾರಂಭ ಮಾಡಲಿದೆ.

ನಮ್ಮ ಮೂಲ ನೆಲೆಗಳು ನದಿ ತಿರುವು ಯೋಜನೆ, ಪರಿಸರ ಹಾನಿ ಮುಂತಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅ.10 ರಂದು ಈ ಕುರಿತು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಕಜೆ ವಿವರಿಸಿದರು.

12ನೇ ಬಾರಿಗೆ ಡಾ.ಕಜೆ ಪುನರಾಯ್ಕೆ

ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ 12 ನೆಯ ಬಾರಿಗೆ ಸರ್ವಾನುಮತದಿಂದ ಡಾ.ಗಿರಿಧರ ಕಜೆ ಪುನರಾಯ್ಕೆಯಾದರು.

ಉಪಾಧ್ಯಕ್ಷರಾಗಿ ಆರ್.ಎಂ.ಹೆಗಡೆ ಬಾಳೆಸರ, ಶ್ರೀಧರ ಜೆ ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿ.ಎ.ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾಗಿ ಪ್ರಶಾಂತ ಕುಮಾರ ಭಟ್ಟ ಮಲವಳ್ಳಿ, ಆದಿತ್ಯ ಹೆಗಡೆ ಕಲಗಾರು, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್. ಭಟ್ ಯಲಹಂಕ ಆಯ್ಕೆಯಾಗಿದ್ದಾರೆ.