ಸಿಂದಗಿ ನಗರದಲ್ಲಿ ನಡೆದ ನಶಾಮುಕ್ತ ಭಾರತ ಅಭಿಯಾನದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪವಿತ್ರ ಅಕ್ಕ, ನಾಗರತ್ನ ಮನಗೂಳಿ, ಡಾ. ಶಂಕರರಾವ್ ದೇಶಮುಖ ಮತ್ತಿತರರಿದ್ದರು. 
ರಾಜ್ಯ

ಸದೃಢ ಸಮಾಜದಿಂದ ಭವಿಷ್ಯದ ಭಾರತ ಸಶಕ್ತ

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಧಿಕಾರಿ ಶಂಕರರಾವ್ ದೇಶಮುಖ ಹೇಳಿಕೆ
  • ನಶಾಮುಕ್ತ ಮಹಾ ಅಭಿಯಾನ

ಸಿಂದಗಿ :

ಯುವ ಸಮುದಾಯ ನಶೆಯಿಂದ ಮುಕ್ತವಾದರೆ, ದೇಶ ಸದೃಢ ಮತ್ತು ಸಶಕ್ತ ಭಾರತ ನಿರ್ಮಾಣವಾಗುತ್ತದೆ ಎಂದು ತಾಲೂಕು ವೈದ್ಯಾಧಿಕಾರಿ ಶಂಕರರಾವ್ ದೇಶಮುಖ ಹೇಳಿದರು.

ನಗರದಲ್ಲಿನ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಓಂ ಶಾಂತಿ ಭವನದಲ್ಲಿ ಗುರುವಾರ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ರಾಜ್ಯ ಸರ್ಕಾರ ಮತ್ತು ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಹಾಗೂ ಬ್ರಹ್ಮಕುಮಾರಿ ಸಹಯೋಗದಲ್ಲಿ ಹಮ್ಮಿಕೊಂಡ 10 ಕೋಟಿ ನಶಾಮುಕ್ತ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಶೆ ಸುಖದ ಬದುಕನ್ನೇ ದುಃಖದ ಮಡುವಾಗಿಸುತ್ತದೆ. ಒಂದು ಕುಟುಂಬದ ವ್ಯಕ್ತಿ ಎಲ್ಲಾ ನಶೆಗಳನ್ನು ದೂರ ಮಾಡಿದರೆ ಆ ಕುಟುಂಬದ ಗೌರವ ಮತ್ತು ಭವಿಷ್ಯ ಎರಡೂ ವೃದ್ಧಿಯಾಗುತ್ತವೆ ಎಂದರು.
ಇನ್ನರ್ ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಮಾತನಾಡಿ, ಯುವ ಜನರ ಕೈಗೆ ಮಾದಕ ವಸ್ತುಗಳ ಬದಲಾಗಿ ಪುಸ್ತಕ ಕಾಣುವಂತಾಗಬೇಕು. ಬದುಕಿನ ಗುರಿ ತಲುಪುವುದರಲ್ಲಿ ವ್ಯಸನ ಮಾರಕವಾಗದಿರಲಿ. ನಶಾ ಮುಕ್ತ ಭಾರತ ಒಂದು ಅಭಿಯಾನವಾಗದೆ ಆಚರಣೆಯಲ್ಲಿ ಬರಬೇಕು. ಆಗಲೇ ಅಭಿಯಾನಕ್ಕೆ ಅರ್ಥ, ಯುವ ಸಮುದಾಯದ ಆರೋಗ್ಯ ಮತ್ತು ಭವಿಷ್ಯ ಸುಂದರವಾಗುತ್ತದೆ ಎಂದು ಹೇಳಿದರು.
ನಗರದ ಬ್ರಹ್ಮಕುಮಾರಿ ಸಂಸ್ಥೆ ಸಂಚಾಲಕಿ ಪವಿತ್ರ ಅಕ್ಕನವರು ಮಾತನಾಡಿ, ನಾನು, ನನ್ನ ಕುಟುಂಬ ಹಾಗೂ ಸಮಾಜವನ್ನು ವ್ಯಸನ ಮುಕ್ತವಾಗಿಸುವ ಸಂಕಲ್ಪ ತೊಡಬೇಕು ಎಂದು ತಿಳಿಸಿ, ನಶಾಮುಕ್ತ ಪ್ರತಿಜ್ಞೆ ಬೋಧಿಸಿದರು.
ವಿಶ್ರಾಂತ ಪ್ರಾಚಾರ್ಯ ಬಿ.ಜಿ. ಪಾಟೀಲ, ಬಿಎನ್‌ಬಿ ೌಂಡೇಷನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾತನಾಡಿದರು.
ಎಸ್.ಎಸ್. ಬುಳ್ಳಾ, ಅಂಬರೀಶ ಯತ್ನಾಳ, ಕೆ.ಎಸ್. ಪತ್ತಾರ, ಎಸ್.ಎಸ್. ಪಾಟೀಲ, ಎಂ.ಎಂ. ದೊಡ್ಡಮನಿ, ಎಸ್.ವೈ. ಬಿರಾದಾರ , ಪ್ರಮೀಳಾ ಪಾಟೀಲ, ಸೀಮಾ ಉಡಚಣ, ಖುಷಿ ಕೆಂಭಾವಿ ಮತ್ತಿತರರಿದ್ದರು.