ಜೇವರ್ಗಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಮರೆಪ್ಪ ಬಡಿಗೇರ ಉದ್ಘಾಟಿಸಿದರು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಸಿದ್ಧಬಸವ ಕಬೀರಾನಂದ ಸ್ವಾಮೀಜಿ, ರಮೇಶಬಾಬು ವಕೀಲ, ದಂಡಪ್ಪ ಸಾಹು ಕುಳಗೇರಿ, ಬಸವರಾಜ ಪಾಟೀಲ್, ಪುಂಡಲೀಕ ಗಾಯಕವಾಡ ಇತರರಿದ್ದರು.
- ಡಾ.ಶಾಂತಾ ಅಷ್ಠಗಿ ಅಭಿಮತ >
- ಜೇವರ್ಗಿಯಲ್ಲಿ ಅಂಬೇಡ್ಕರ್ ಉತ್ಸವ
ಜೇವರ್ಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ದೀನ&ದಲಿತ, ಹಿಂದುಳಿದ ವರ್ಗದವರ ಧ್ವನಿಯಾಗುವುದರ ಜತೆಗೆ ಸರ್ವಜನಾಂಗದ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾಯೆರ್ ಡಾ.ಶಾಂತಾ ಅಷ್ಠಗಿ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅರಿವು ಉತ್ಸವದಲ್ಲಿ ಉಪನ್ಯಾಸ ನೀಡಿ, ಸಂವಿಧಾನದ ಮೂಲಕ ಸರ್ವಜನಾಂಗಕ್ಕೂ ನ್ಯಾಯ ಕಲ್ಪಿಸಿದ್ದಾರೆ. ಬಾಬಾಸಾಹೇಬ್ ಅವರನ್ನು ನಿತ್ಯವೂ ಸ್ಮರಿಸಬೇಕಿದೆ ಎಂದರು.
ಜಿಪಂ ಮಾಜಿ ಸದಸ್ಯ ಮರೆಪ್ಪ ಬಡೀಗೇರ ಉದ್ಘಾಟಿಸಿದರು. ಚಂದ್ರಶೇಖರ ಕಟ್ಟಿಮನಿ ಉಪನ್ಯಾಸ ನೀಡಿದರು.
ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಚಿಗರಳ್ಳಿಯ ಶ್ರೀ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಪುಂಡಲೀಕ ಗಾಯಕವಾಡ, ಗೌರವಾಧ್ಯಕ್ಷ ಶಾಂತಪ್ಪ ಯಲಗೋಡ, ಪ್ರಮುಖರಾದ ರಮೇಶಬಾಬು ವಕೀಲ, ದಂಡಪ್ಪ ಸಾಹು ಕುಳಗೇರಿ, ಬಸವರಾಜ ಪಾಟೀಲ್ ನರೀಬೋಳ, ಚಂದ್ರಶೇಖರ ಹರನಾಳ, ರೇವಣಸಿದ್ದಪ್ಪ ಸಂಕಾಲಿ, ಶೋಭಾ ಬಾಣಿ, ಶಾಂತಪ್ಪ ಕೂಡಲಗಿ, ರುಕುಂಪಟೇಲ್ ಇಜೇರಿ, ಎಸ್.ಎಸ್. ಹುಲ್ಲೂರ, ಷಣ್ಮುಖಪ್ಪ ಸಾಹು ಗೋಗಿ, ಸುಭಾಷ ಚನ್ನೂರ, ದಾನಪ್ಪಗೌಡ ಹಳಿಮನಿ, ಷಣ್ಮುಖಪ್ಪ ಹಿರೇಗೌಡ, ಬೈಲಪ್ಪ ನೆಲೋಗಿ, ಶೌಕತ್ ಅಲಿ ಆಲೂರ, ಪ್ರಭು ಜಾಧವ್, ಮಲ್ಲಣ್ಣ ಕೊಡಚಿ, ರಾಯಪ ಬಾರಿಗಿಡ, ಸಿದ್ರಾಮ ಯಳಸಂಗಿ, ದೊಡ್ಡೇಶ ಕೊಂಬಿನ್, ಧರ್ಮಣ್ಣ ಬಡಿಗೇರ, ಕಲ್ಯಾಣಕುಮಾರ ಸಂಗಾವಿ, ವೆಂಕೋಬರಾವ ವಾಗಣಗೇರಿ, ಸಾಯಬಣ್ಣ ಕಲ್ಯಾಣಕರ ಇತರರಿದ್ದರು.