ಕಲಬುರಗಿ ಜಸ್ಟ್ ಕ್ಲಬ್ ಹಿಂಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೆಕೆಸಿಸಿಐ ಡೈಮಂಡ್ ಜುಬಿಲಿ ಬಿಜಿನೆಸ್ ಇನ್ಕ್ಯುಬೇಶನ್ ಮತ್ತು ತರಬೇತಿ ಕೇಂದ್ರದ ಭೂಮಿಪೂಜೆ ಭಾನುವಾರ ನಡೆಯಿತು. ಶ್ರೀ ಚರಲಿಂಗ ಮಹಾಸ್ವಾಮೀಜಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಅಮರನಾಥ ಪಾಟೀಲ್, ಶಿವರಾಜ ಇಂಗಿನಶೆಟ್ಟಿ, ಉಮಾಕಾಂತ ನಿಗ್ಗುಡಗಿ, ರಾವೇಂದ್ರ ಮೈಲಾಪುರ, ಉತ್ತಮ ಬಜಾಜ್ ಇತರರಿದ್ದರು.
- ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಹೇಳಿಕೆ
- ಡೈಮಂಡ್ ಜುಬಿಲಿ ಬಿಜಿನೆಸ್ ಇನ್ಕ್ಯುಬೇಶನ್ ಕೇಂದ್ರ ನಿರ್ಮಾಣಕ್ಕೆ ಚಾಲನೆ
ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ(ಕೆಕೆಸಿಸಿಐ)ಯ 60ನೇ ವರ್ಷದ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಡೈಮಂಡ್ ಜುಬಿಲಿ ಬಿಜಿನೆಸ್ ಇನ್ಕ್ಯುಬೇಶನ್ ಮತ್ತು ತರಬೇತಿ ಕೇಂದ್ರ ಉದ್ಯಮಶೀಲತೆ, ಸ್ಟಾರ್ಟಪ್, ಕೌಶಲಾಭಿವೃದ್ಧಿ, ನವೋದ್ಯಮ ಹಾಗೂ ಸಾಮರ್ಥ್ಯ ವೃದ್ಧಿಗೆ ಮಹತ್ವದ ವೇದಿಕೆಯಾಗಲಿದೆ ಎಂದು ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಹೇಳಿದರು.
ಕೆಕೆಸಿಸಿಐ ತನ್ನ ವಜ್ರಮಹೋತ್ಸವ ನಿಮಿತ್ತ ಧರಿಯಾಪುರ-ಕೋಟನೂರು ಜಸ್ಟ್ ಕ್ಲಬ್ ಹಿಂಭಾಗದ ಪ್ರಸ್ತಾವಿತ ಜಾಗದಲ್ಲಿ ಭಾನುವಾರ ಆಯೋಜಿಸಿದ್ದ ಡೈಮಂಡ್ ಜುಬಿಲಿ ಬಿಜಿನೆಸ್ ಇನ್ಕ್ಯುಬೇಶನ್ ಸೆಂಟರ್ ಕೇಂದ್ರದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೇಂದ್ರ ಕಕ ಭಾಗದ ಯುವಕರು, ಉದ್ಯಮಿಗಳು ಹಾಗೂ ಎಂಎಸ್ಎಂಇಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಾನ್ನಿಧ್ಯ ವಹಿಸಿದ್ದ ಮಕ್ತಂಪುರ ಗದ್ದುಗಿ ಮಠದ ಶ್ರೀ ಚರಲಿಂಗ ಮಹಾಸ್ವಾಮೀಜಿ, ನೂತನ ಕಟ್ಟಡ ಈ ಭಾಗದ ಉದ್ಯಮ, ವ್ಯಾಪಾರ ಹಾಗೂ ಯುವ ಉದ್ಯಮಿಗಳ ಬೆಳವಣಿಗೆಯ ಕೇಂದ್ರಬಿಂದುವಾಗಲಿ ಎಂದು ಹಾರೈಸಿದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮಡು ಹಾಗೂ ಎಂಎಲ್ಸಿ ಶಶೀಲ್ ಜಿ.ನಮೋಶಿ ಶಂಕುಸ್ಥಾಪನೆ ನೆರವೇರಿಸಿದರು.
ಕೆಕೆಸಿಸಿಐ ಮಾಜಿ ಅಧ್ಯ ಉಮಾಕಾಂತ ನಿಗ್ಗುಡಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ಸರಾಫ್ ಬಜಾರ್ ಸಂದ ಅಧ್ಯ ರಾವೇಂದ್ರ ಮೈಲಾಪುರ, ದಾಲ್ಮಿಲ್ ಸಂದ ಅಧ್ಯ ಚಂದ್ರಕಾಂತ ಕೋಬಾಳ, ಗ್ರೇನ್ಸ್ ಸೀಡ್ಸ್ ಮರ್ಚಂಟ್ಸ್ ಸಂದ ಅಧ್ಯ ಸಂತೋಷ ಲಂಗರ್, ಹಿರಿಯ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ, ಕಪನೂರ ಇಂಡಸ್ಟ್ರಿಯಲ್ ಎಸ್ಟೇಟ್ ಸಂದ ಅಧ್ಯ ರವೀಂದ್ರ ಮುಕ್ಕಾ, ಕಿರಾಣಿ ಮರ್ಚಂಟ್ಸ್ ಸಂದ ಅಧ್ಯ ರವೀಂದ್ರ ಮಾದಮಶೆಟ್ಟಿ, ಫಾರ್ಮಾ ಸಂದ ಕಾರ್ಯದರ್ಶಿ ರವೀಂದ್ರ ಜೋಶಿ, ಕಾಸಿಯಾ ಕೌನ್ಸಿಲ್ ಸದಸ್ಯ ಭೀಮಾಶಂಕರ ಪಾಟೀಲ್, ನಂದಿಕೋಲ ಸ್ವಾಮಿ, ಹಿರಿಯ ಬಿಜೆಪಿ ಮುಖಂಡ ರಾಜುಗೌಡ ನಾಗನಹಳ್ಳಿ, ರಾಜು ಭೀಮಳ್ಳಿ, ವಿಷ್ಣುದಾಸ್ ತಪಾಡಿಯಾ, ಡಾ.ಶರಣಬಸಪ್ಪ ಹರವಾಳ, ಶಿವಶರಣಪ್ಪ ಸೀರಿ, ಸುರೇಶ ಬುಲಬುಲೆ, ಬಸವರಾಜ ಜೋಗೂರ, ಶರಣಬಸಪ್ಪ ಮಚ್ಚೆಟ್ಟಿ, ಮಹೇಶ ಸಾಲಗಾರ, ಸಂಸ್ಥೆ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಉಪಾಧ್ಯ ಕೇದಾರ ರಾೂಜಿ, ಜಂಟಿ ಕಾರ್ಯದರ್ಶಿ ಗಿರೀಶ ಅಣಕಲ್, ಖಜಾಂಚಿ ಉತ್ತಮ ಬಜಾಜ್, ಬಿಲ್ಡಿಂಗ್ ಎಸ್ಟೇಟ್ ಉಪಸಮಿತಿ ಅಧ್ಯ ಸಂತೋಷ ನಂದ್ಯಾಲ್, ಮಂಜುನಾಥ ಜೇವರ್ಗಿ ಇತರರಿದ್ದರು.
"
ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಕೈಗೊಂಡಿರುವ ಈ ದೂರದೃಷ್ಟಿ ಯೋಜನೆ ಶ್ಲಾಘನೀಯ. ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ತಮ್ಮ ಸಹಕಾರ ನಿರಂತರ ಮುಂದುವರಿಯಲಿದೆ. ಕಲ್ಯಾಣದ ಅಭಿವೃದ್ಧಿಗೂ ನಾನು ಸದಾ ಸಿದ್ಧ.
— > ಅಲ್ಲಮಪ್ರಭು ಪಾಟೀಲ್ ಶಾಸಕ