A roadmap for the next state election
ತುರುವೇಕೆರೆ: ಪಂಚರಾಜ್ಯಗಳ ಚುನಾವಣಾ ಲಿತಾಂಶ ಪ್ರಕಟವಾಗಿದ್ದು, ಇದು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮಾಜಿ ಶಾಸಕ ಮಸಾಲ ಜಯರಾಮ್ ತಿಳಿಸಿದರು.
ಪಟ್ಟಣದಲ್ಲಿ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿ ಮಾತನಾಡಿ, ಇಡೀ ದೇಶದಲ್ಲಿ ಬಿಜೆಪಿ ಅಲೆಯ ಗಾಳಿ ಬೀಸುತ್ತಿದೆ. ಟಿಎಂಸಿ ಬದ್ರಕೋಟೆ ಎಂದು ಬಿಂಬಿತವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಇಡಿದು ದಾಖಲೆ ನಿರ್ಮಿಸಿದೆ. ಅದಲ್ಲದೇ ಅಸ್ಸಾಂ, ಪುದುಚೇರಿಯಲ್ಲಿಯೂ ಬಿಜೆಪಿ ಅಧಿಕಾರ ಗದ್ದಗೆ ಏರಿದೆ. ತಾಲೂಕು ಘಟಕದ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಪ್ರದಾನಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ಮುಖಂಡರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು. ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ನವೀನ್ ಬಾಬು, ಸಿದ್ದಪಾಜಿ, ಸಂತೋಷ್ ಕಂಟ್ಲಿ, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಪ್ರಸಾದ್, ತೀರ್ಥಕುಮಾರ್, ರಾಧಾ, ಅನಿತಾ ಇದ್ದರು.