ದೇವನಹಳ್ಳಿ ಬೊಮ್ಮವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ ಎ.ರಾಮಾಂಜಿನಪ್ಪ, ಉಪಾಧ್ಯಕ್ಷ ಶಿವಪ್ಪ ಅವರನ್ನು ಬೆಂಬಲಿಗರು ಸನ್ಮಾನಿಸಿದರು. ಚುನಾವಣಾಧಿಕಾರಿ ಆದಿನಾರಾಯಣ, ಡೇರಿ ನಿರ್ದೇಶಕರಾದ ರವಿಕುಮಾರ್, ಬಿ.ಎಸ್.ಸೋಮಶೇಖರ್, ಗಂಗಾಧರ್, ವೆಂಕಟೇಶಪ್ಪ, ಡಿ.ಎನ್.ಮುನಿರಾಜ, ಶಂಕರಪ್ಪ ಇತರರು ಇದ್ದರು.
ದೇವನಹಳ್ಳಿ : ತಾಲೂಕಿನ ಕಸಬಾ ಹೋಬಳಿಯ ಬೊಮ್ಮವಾರ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾಗಿ ಎ.ರಾಮಾಂಜಿನಪ್ಪ, ಉಪಾಧ್ಯಕ್ಷರಾಗಿ ಶಿವಪ್ಪ ಸೋಮವಾರ ಅವಿರೋಧ ಆಯ್ಕೆಯಾದರು. ಬಿ.ಎ.ಗಂಗಾಧರ್, ವೆಂಕಟಮ್ಮ ರಾಜೀನಾಮೆಯಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ತೆರವಾಗಿದ್ದವು.
ಅಧ್ಯಕ್ಷ ಎ.ರಾಮಾಂಜಿನಪ್ಪ ಮಾತನಾಡಿ, ಸಂದಿಂದ ನಿತ್ಯ ಒಂದು ಸಾವಿರ ಲೀಟರ್ ಹಾಲು ಸರಬರಾಜು ಆಗುತ್ತಿದ್ದು, ಗುಣಮಟ್ಟದ ಕೊಬ್ಬಿನಾಂಶವುಳ್ಳ ಹಾಲಿನ ಪೂರೈಕೆ ಹೆಚ್ಚಳದಿಂದ ಉತ್ಪಾದಕರಿಗೂ ಲಾಭ ಮತ್ತು ಎಂಪಿಸಿಎಸ್ ಅಭಿವೃದ್ಧಿಗೆ ಅನುಕೂಲವಾಗಲಿದೆ. ಹಾಲು ಸಂಗ್ರಹಣೆಗೆ ಹೆಚ್ಚು ಪ್ರಾಶಸ ನೀಡಿ, ಗುಣಮಟ್ಟದ ಹಾಲು ಸರಬರಾಜು ಮಾಡಲು ರೈತರಿಗೆ ಮನವಿ ಮಾಡಲಾಗಿದೆ ಎಂದರು.
ಉಪಾಧ್ಯಕ್ಷ ಶಿವಪ್ಪ ಮಾತನಾಡಿ, ಒಟ್ಟು 360 ಷೇರುದಾರರಿದ್ದು, 70 ಜನ ಫೌತಿಯಾಗಿದ್ದಾರೆ. ಸಕ್ರಿಯ ಸದಸ್ಯರಲ್ಲಿ 71 ಮತದಾರರಿದ್ದರು. ಇದೀಗ ಸಕ್ರಿಯ ಸದಸ್ಯರು 80 ಜನರಿದ್ದು, ಸಕ್ರಿಯರಲ್ಲದವರು 160 ಜನ ಸೇರಿ ಒಟ್ಟು 280 ಜನ ಇದ್ದಾರೆ. ಬೆಳಗ್ಗೆ 13 ಸಂಜೆ 12 ಕ್ಯಾನ್ ಹಾಲು ಸರಬರಾಜು ಮಾಡಲಾಗುತ್ತಿದೆ ಇದು ಮತ್ತಷ್ಟು ಹೆಚ್ಚಳವಾಗಬೇಕಿದೆ ಎಂದರು.
ಚುನಾವಣಾಧಿಕಾರಿ, ಸಿಇಒ ಆದಿನಾರಾಯಣ. ಡೇರಿ ನಿರ್ದೇಶಕರಾದ ಗೋವಿಂದಪ್ಪ, ನಟರಾಜ, ವೆಂಕಟಮ್ಮ ನಂಜಮ್ಮ, ಮಾಜಿ ಅಧ್ಯಕ್ಷ ಬಿ.ಕೆ.ದಿನಕರ್, ಮುನಿನಾರಾಯಣಪ್ಪ, ರಾಮಣ್ಣ, ಚಿಕ್ಕಪಾಪಯ್ಯ, ಹೇಮಂತ್, ಬಿ.ಆರ್.ಶಿವಾನಂದ, ಮುನೇಗೌಡ, ಮಂಜುನಾಥ್, ಗೋಪಿ, ನಾಗರಾಜ, ಬಿ.ಎಸ್.ಸಹದೇವ, ಚಿಕ್ಕಾಂಜಿನಪ್ಪ, ಗ್ರಾಪಂ ಸದಸ್ಯ ಸಿ.ವೆಂಕಟಾಚಲ, ಸಿಇಒ ಆದಿನಾರಾಯಣ ಇತರರು ಇದ್ದರು.