ಅರಸೀಕೆರೆ ನಗರದ ಹಾಸನ ರಸ್ತೆ ಬಡಾವಣೆಯ ಕಟ್ಟೆ ಮಾರಿಯಮ್ಮ ದೇವಿ ಕರಗ ಮಹೋತ್ಸವದ ನೋಟ. 
ರಾಜ್ಯ

ಶ್ರದ್ಧಾಭಕ್ತಿಯಿಂದ ನಡೆದ ಕರಗ

ಬಾಲಮುರಳಿಕೃಷ್ಣ
ಅರಸೀಕೆರೆ: ನಗರದ ಹಾಸನ ರಸ್ತೆ ಬಡಾವಣೆಯ ಐದನೇ ತಿರುವಿನಲ್ಲಿರುವ ಕಟ್ಟೆ ಮಾರಿಯಮ್ಮ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ಕರಗ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕಂತೇನಹಳ್ಳಿ ಕೆರೆಯ ಅಂಗಳದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸರ್ವಾಲಂಕೃತ ಕರಗ ಹೊತ್ತು ಭಕ್ತರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ದೇಗುಲ ತಲುಪಿದರು. ಬೆನ್ನಿಗೆ ಕೊಕ್ಕೆ ಸಿಕ್ಕಿಸಿಕೊಂಡ ಭಕ್ತರು ಆಟೋ, ಟ್ರಾೃಕ್ಟರ್ ಎಳೆದು ತರುತ್ತಿದ್ದ ದೃಶ್ಯ ನೋಡುಗರನ್ನು ನಿಬ್ಬೆರಗಾಗಿಸಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.